ಸುದ್ದಿಮೂಲ ವಾರ್ತೆ ಸಿಂಧನೂರು, ೆ.08:
ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿ ತಾಲೂಕಿನ ವಳಬಳ್ಳಾಾರಿಯ ಗ್ರಾಾಮ ಪಂಚಾಯತ್ನ ನೂತನ ಕಟ್ಟಡ ಉದ್ಘಾಾಟನೆ ಮಾಡಲಾಗಿದೆ. ಆದರೆ ಅಧಿಕಾರಿಗಳು ಉದ್ಘಾಾಟನಾ ಕಾರ್ಯಕ್ರಮಕ್ಕೆೆ ಗೈರಾಗಿ, ಈಗ ಉದ್ಘಾಾಟನೆ ಸಂದರ್ಭದಲ್ಲಿ ಹಾಕಲಾಗಿದ್ದ ನಾಮಲಕ ತೆಗೆಯಲು ಮುಂದಾಗಿದ್ದಾಾರೆ. ಒಂದು ವೇಳೆ ನಾಮಲಕ ತೆಗೆದರೆ ಹೋರಾಟಕ್ಕಿಿಳಿಯಬೇಕಾಗುತ್ತದೆ ಎಂದು ಗ್ರಾಾ.ಪಂ.ನ ಮಾಜಿ ಅಧ್ಯಕ್ಷೆ ಮೂಕಾಂಬಿಕಾ ಮಾಲಿಪಾಟೀಲ್ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಿಯಲ್ಲಿ ಅವರು ಮಾತನಾಡಿದರು. ವಳಬಳ್ಳಾಾರಿ ಗ್ರಾಾ.ಪಂ.ಗೆ ಸರಕಾರಿ ಕಟ್ಟಡ ಇಲ್ಲದೇ ಇರುವದರಿಂದ ಏಳು ವರ್ಷಗಳಿಂದ ಖಾಸಗಿ ಗೋದಾಮಿನಲ್ಲಿತ್ತು. ನಂತರ ಕೆಲವು ವರ್ಷ ಹಳೆ ಸರಕಾರಿ ಶಾಲೆಯಲ್ಲಿ ನಡೆಯಿತು. ನರೇಗಾ ಯೋಜನೆಯಡಿ ನೂತನ ಕಟ್ಟಡ ಕಟ್ಟಲಾಗಿದೆ. ಕಳೆದ ಎರಡು ತಿಂಗಳಿಂದ ಕಟ್ಟಡ ಉದ್ಘಾಾಟನೆಗೆ ಸಂಬಂಧಿಸಿದಂತೆ ನಿರಂತರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಸ್ಪಂದನೆ ನೀಡಿಲ್ಲ. ಜ-31 ರಂದು ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಭೇಟಿ ಮಾಡಿ, ನೂತನ ಗ್ರಾಾ.ಪಂ.ಕಟ್ಟಡ ಉದ್ಘಾಾಟನೆಗೆ ಸಂಬಂಧಿಸಿದಂತೆ ಆಹ್ವಾಾನ ನೀಡಿದೆವು. ಅವರು ೆ-5 ರಂದು ಮಾಡಲು ಸಲಹೆ ನೀಡಿದರು. ೆ-4 ಕ್ಕೆೆ ಗ್ರಾಾ.ಪಂ.ನ ಆಡಳಿತ ಮಂಡಳಿ ಅವಧಿ ಪೂರ್ಣವಾಗುತ್ತಿಿದೆ ಎಂದು ಅವರ ಗಮನಕ್ಕೆೆ ತಂದಾಗ 4 ರಂದೇ ಮಾಡಿ ಎಂದು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಶಾಸಕರು ಸೂಚಿಸಿದರು ಎಂದು ಹೇಳಿದರು.
4 ರಂದು ಉದ್ಘಾಾಟನೆ ಮಾಡಲು 2 ರಂದು ಸಾಮಾನ್ಯಸಭೆ ಕರೆದು ಅನುಮೋದನೆ ಮಾಡಿ, ಶಿಷ್ಠಾಾಚಾರದಂತೆ ಆಹ್ವಾಾನ ಪತ್ರಿಿಕೆ ಮುದ್ರಿಿಸಿ ಹಂಚಲಾಯಿತು. 4 ರಂದು ಬೆಳಗ್ಗೆೆ ಪಿಡಿಓ ಬಸವರಾಜ ಸೂಡಿ ಶಾಸಕರ, ವಿಧಾನ ಪರಿಷತ್ ಶಾಸಕರ ಕಾರ್ಯಾಲಯದಿಂದ ದೂರವಾಣಿ ಕರೆ ಬಂದಿದೆ. ಇಂದು ಉದ್ಘಾಾಟನೆ ಮಾಡುವದು ಬೇಡ ಎಂದರು. ಎಲ್ಲಾಾ ಪೂರ್ವ ತಯಾರಿ ಮಾಡಿದ್ದರಿಂದ ನಾವು ಉದ್ಘಾಾಟನೆ ಮಾಡಿದೆವು. ಶಿಲಾನ್ಯಾಾಸದ ಲಕ ಅಳಡಿಸಿದೆವು. ಈಗ ಮತ್ತೊೊಮ್ಮೆೆ ಪಿಡಿಓ ಶಿಲಾನ್ಯಾಾಸದ ಕಲ್ಲು ತೆಗೆಯಿರಿ ಎಂದು ಕರೆ ಮಾಡುತ್ತಿಿದ್ದಾಾರೆ. ಯಾವುದೇ ಕಾರಣಕ್ಕೂ ನಾವು ತೆಗೆಯುವದಿಲ್ಲ. ನಿಯಮಾನುಸಾರವೇ ಉದ್ಘಾಾಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತೆಗೆಯಲು ಮುಂದಾದರೆ ಹೋರಾಟಕ್ಕಿಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಾ.ಪಂ. ಕಟ್ಟಡ ಪೀಠೋಪಕರಣಗಳಿಗೆ 14.60 ಲಕ್ಷ ರೂ.ಗಳ ಬಿಡುಗಡೆಯಾಗಿ ಎಷ್ಟೋೋ ವರ್ಷಗಳು ಕಳೆದಿವೆ. ಈ ಹಣ ಇದೆ ಎನ್ನುವ ಬಗ್ಗೆೆಯೇ ನಮಗೆ ತಿಳಿದಿಲ್ಲ. ಈ ಹಣ ಲೂಟಿ ಮಾಡಲು ತಾ.ಪಂ. ಇಓ, ಪಿಡಿಓ ಪ್ರಯತ್ನ ಮಾಡುತ್ತಿಿದ್ದಾಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಗ್ರಾಾ.ಪಂ.ಮಾಜಿ ಸದಸ್ಯರಾದ ಬಸವಲಿಂಗಯ್ಯ ಸ್ವಾಾಮಿ, ಎನ್.ರಂಗನಾಥ, ಬಿಜೆಪಿ ಗ್ರಾಾಮೀಣ ಮಂಡಲದ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಾಳ, ಮುಖಂಡರಾದ ಪರಮೇಶಪ್ಪ ಆದಿಮನಿ, ಭೀಮಣ್ಣ ಹಾಗೂ ಇತರರು ಇದ್ದರು.
ವಳಬಳ್ಳಾರಿ ಗ್ರಾ.ಪಂ.ನೂತನ ಕಟ್ಟಡ ಉದ್ಘಾಟನೆ ನಾಮಲಕ ತೆಗೆದರೆ ಹೋರಾಟ – ಮೂಕಾಂಬಿಕಾ

