ಸುದ್ದಿಮೂಲ ವಾರ್ತೆ ಬೆಂಗಳೂರು, ಅ.07:
ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ವಾಲ್ಮೀಕಿ ಸಮುದಾಯದ ಕಾಂಗ್ರೆೆಸ್ ಶಾಸಕರಿಗೆ ಸಚಿವ ಸ್ಥಾಾನ ನೀಡುವುದಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಂಗಳೂರಿನ ಶಾಸಕರ ಭವನದ ಎದುರಿಗೆ ಇರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ನಾಯಕ ಸಮುದಾಯಕ್ಕೆೆ ಸೇರಿದ ಕಾಂಗ್ರೆೆಸ್ ಶಾಸಕರಿಗೆ ಇನ್ನೂ ಇಬ್ಬರಿಗೂ ಸಚಿವ ಸ್ಥಾಾನ ನೀಡಬೇಕೆಂಬ ಬೇಡಿಕೆ ಇದ್ದು, ಮುಂಬರುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ಕಲ್ಪಿಿಸಿಕೊಡುವುದಾಗಿ ತಿಳಿಸಿದರು.
ಸೋಮವಾರವಷ್ಟೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಮಾತನಾಡಿ ತಮ್ಮ ಸಮುದಾಯದ ಇಬ್ಬರು ಶಾಸಕರಿಗೆ ಸಚಿವ ಸ್ಥಾಾನ ನೀಡುವಂತೆ ಸಮಾಜದ ಸ್ವಾಾಮಿಗಳು ಮೂಲಕ ಇಂದು ಮುಖ್ಯಮಂತ್ರಿಿಯನ್ನು ಹೇಳಿಕೆ ನೀಡಿದ್ದರ ಬೆನ್ನಹಿಂದೆಯೇ ಮುಖ್ಯಮಂತ್ರಿಿಗಳು ಈ ರೀತಿ ಪ್ರತಿಕ್ರಿಿಯೆ ನೀಡಿದ್ದಾರೆ.

