ಸುದ್ದಿಮೂಲ ವಾರ್ತೆ ರಾಯಚೂರು, ಡಿ.06:
ಯುವ ಜನತೆ ಇಂದಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಾಲದಲ್ಲಿ ಕೇವಲ ಮೊಬೈಲ್ ಬಳಕೆಗೆ ಮೊರೆ ಹೋಗಿ ದೈಹಿಕ ಚಟುವಟಿಕೆಗಳನ್ನು ಅಲಕ್ಷಿಸಿದರೆ ಆರೋಗ್ಯ ಕ್ಷೀಣಿಸುತ್ತದೆ. ಕ್ರೀೆಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರಿಿಯಾಶೀಲ ಬದುಕು ಸಾಗಿಸಲು ಸಾಧ್ಯ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕುಲಸಚಿವರು (ಮೌಲ್ಯಮಾಪನ) ಡಾ.ಜ್ಯೋೋತಿ ಧಮ್ಮ ಪ್ರಕಾಶ್ ಅವರು ಹೇಳಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ 2025-26 ನೇ ಸಾಲಿನ ತೃತೀಯ ಅಂತರ ಮಹಾವಿದ್ಯಾಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆೆಟಿಕ್ ಕ್ರೀೆಡಾಕೂಟದ ಸಮಾರೋಪ ಸಮಾರಂಭ ಶುಕ್ರವಾರ ಸಂಜೆ ವಿ.ಆರ್.ಇ.ಟಿ. ದೈಹಿಕ ಶಿಕ್ಷಣ ಮಹಾವಿದ್ಯಾಾಲಯದಲ್ಲಿ ಹಮ್ಮಿಿಕೊಂಡಿದ್ದು, ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸ್ಪರ್ಧೆ ನಮ್ಮೊೊಂದಿಗಿರಲಿ ಪ್ರತಿಸಲ ಯಾವುದೇ ಒಂದು ವಿಷಯದಲ್ಲಿ ಕ್ಷೇತ್ರದಲ್ಲಿ ಕ್ರೀೆಡೆಯಲ್ಲಿ ಮಾಡಿದ ಪ್ರಯತ್ನಕ್ಕೆೆ ಪ್ರತಿಲ ಸಿಗದೆ ಹೋದರೆ ಪಟ್ಟಂತಹ ಆ ಪ್ರಯತ್ನದಲ್ಲಿನ ನ್ಯೂನತೆಗಳನ್ನು ಸುಧಾರಿಸಿಕೊಂಡು ನಮಗೆ ನಾವೇ ಸ್ಪರ್ಧಿಗಳಾಗಿ ಜಯಿಸಬೇಕೇ ಹೊರತು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ ಆದರೆ ಆಯಾ ಕ್ಷೇತ್ರದಲ್ಲಿನ ಉತ್ತಮ ವ್ಯಕ್ತಿಿಗಳನ್ನು ಸ್ಪೂರ್ತಿಯನ್ನಾಾಗಿಸಿಕೊಂಡು ಮುಂದೆಸಾಗಬೇಕು. ನಮ್ಮ ವಿವಿ ವ್ಯಾಾಪ್ತಿಿಯ ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನದೊಂದಿಗೆ ಉತ್ತಮ ಕ್ರೀೆಡಾಪಟುಗಳಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವು ಬೆಳೆದು ನಮ್ಮ ವಿಶ್ವವಿದ್ಯಾಾಲಯಕ್ಕೆೆ ಕೀರ್ತಿ ತರಬೇಕು ಎಂದು ಶುಭಹಾರೈಸಿ ಸಮಾರೋಪದ ಅಧ್ಯಕ್ಷೀಯ ನುಡಿಗಳನ್ನಾಾಡಿದರು. ಕೃಷಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ಪ್ರಾಾಧ್ಯಾಾಪಕರು ಮತ್ತು ನಿರ್ದೇಶಕ ಡಾ.ರಾಜಣ್ಣ ಮಾತನಾಡಿ, ಸ್ಪರ್ಧಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸುತ್ತೀರಿ ಎನ್ನುವ ಭರವಸೆ ನನಗಿದೆ. ಕ್ರೀೆಡಾಪಟುಗಳು ವಾಲ್ಮೀಕಿ ವಿಶ್ವವಿದ್ಯಾಾಲಯಕ್ಕೆೆ ಕೀರ್ತಿತರಬೇಕು. ದಿನಕ್ಕೊೊಂದು ಗಂಟೆ ವ್ಯಾಾಯಾಮ, ದಿನವೆಲ್ಲಾಾ ದೇಹಕ್ಕೆೆ ಆರಾಮ ದೇಶದ ಸಂಪತ್ತುಗಳಿಗಿಂತ ದೇಹದ ಸಂಪತ್ತು ಶ್ರೇೇಷ್ಠ ಎಂದು ಅವರು ಹೇಳಿದರು. ಕಾನೂನು ಸಲಹೆಗಾರರು ಮತ್ತು ವಕೀಲರಾದ ವಿಜಯಲಕ್ಷ್ಮೀ ಪಾಸೋಡಿ ಮಾತನಾಡಿ, ಕ್ರೀೆಡಾ ಪಟುಗಳಿಗೆ ಸ್ವಯಂ ಪ್ರೇೇರಣೆಯಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ. ಕ್ರೀೆಡೆಯಲ್ಲಿ ಸೋಲು ಗೆಲುವು ನಿಶ್ಚಿಿತ ಆದರೆ ಪಾಲ್ಗೊೊಳ್ಳುವಿಕೆ ಮುಖ್ಯ. ಬುದ್ಧಿಿ ಜೀವಿಗಳಾಗಿ ಅತ್ಯಂತ ಉತ್ತಮ ನಾಗರಿಕರಾಗಿ ಈ ಸಮಾಜದಲ್ಲಿ ಬೆಳೆಯಿರಿ ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀೆಡಾ ವಿಭಾಗದ ನಿರ್ದೇಶಕ ಡಾ.ಲತಾ.ಎಂ.ಎಸ್. ಮಾತನಾಡಿ, ಕ್ರೀೆಡಾಕೂಟಕ್ಕೆೆ ಶ್ರಮಿಸಿದ ದೈ.ಶಿ. ನಿರ್ದೇಶಕರಿಗೆ ಮತ್ತು ಬಿಪಿಎಡ್ ವಿದ್ಯಾಾರ್ಥಿಗಳಿಗೆ, ಕ್ರೀೆಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ಸ್ಪರ್ಧಾರ್ಥಿಗಳಿಗೆ ಕ್ರೀೆಡಾ ಚಟುವಟಿಕೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆೆ ಅತ್ಯಗತ್ಯವಾಗಿದ್ದು, ಶಿಸ್ತು, ಸಮಯ ಪಾಲನೆ, ತಂಡದ ಮನೋಭಾವ, ಆತ್ಮವಿಶ್ವಾಾಸ ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸುತ್ತವೆ ಎಂದು ಅವರು ಹೇಳಿದರು. ವಿವಿಯ ಸಿಂಡಿಕೇಟ್ ಸದಸ್ಯೆೆ ಡಾ.ನಾಗರತ್ನ ಎಮ್.ನಾಯ್ಕ ಮಾತನಾಡಿ, ಗುರಿ, ಛಲ ಬಿಡದಂತೆ ಕ್ರೀೆಡಾ ಪ್ರತಿಭೆಯು ಒಳಗಿನಿಂದ ಅರಳಬೇಕು, ನಮ್ಮ ಉತ್ತಮ ಆಲೋಚನೆ ಹಾಗೂ ಸತತ ಪ್ರಯತ್ನದಿಂದಾಗಿ ಯಶಸ್ಸು ಖಂಡಿತ ತಮ್ಮದಾಗುತ್ತದೆ ಎಂದು ಸ್ಪರ್ಧಾರ್ಥಿಗಳಿಗೆ ತಿಳಿಸಿದರು. ವಿವಿಯ ವಿದ್ಯಾಾವಿಷಯಕ ಪರಿಷತ್ ಸದಸ್ಯರಾದ ಡಾ.ಜೆ.ಎಲ್.ಈರಣ್ಣ ಮಾತನಾಡಿ, ಕ್ರೀೆಡಾಪಟುಗಳು ದೈಹಿಕವಾಗಿ ಮಾನಸಿಕವಾಗಿ ಸಮತೋಲನ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿ ಕ್ರೀೆಡೆಯಲ್ಲಿ ವಿಜೇತರಾದವರಿಗೆ ಅಭಿನಂದನೆ ಸಲ್ಲಿಸಿದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಿಕ ವಿಶ್ವವಿದ್ಯಾಾಲಯದ ವಿಶೇಷಾಧಿಕಾರಿ ಡಾ.ವಿರುಪಾಕ್ಷಿ ಬೆಟಗೇರಿ ಮಾತನಾಡಿ, ಕ್ರೀೆಡಾ ಪಟುಗಳು ಸೋಲು ಗೆಲುವನ್ನು ಸರಿಸಮಾನವಾಗಿ ತೆಗೆದುಕೊಂಡಾಗ ಮಾತ್ರ ನಿಜವಾದ ಗೆಲುವು ಸಾಧಿಸಲು ಸಾಧ್ಯ ಎಂದು ಹೇಳಿದರು. ದಾವಣಗೆರೆ ವಿವಿಯ ರಸಾಯನಶಾಸ ವಿಭಾಗದ ಪ್ರಾಾಧ್ಯಾಾಪಕ ಡಾ.ನಂದೀಶ್ವರಪ್ಪ ಬಿ.ಪಿ. ಅವರು ಮಾತನಾಡಿ, ಸತತ ಪ್ರಯತ್ನದಿಂದಲೂ ಸೋಲನ್ನು ಅನುಭವಿಸಿದರೆ ಅದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಮಾನಗಳಲ್ಲಿ ಕ್ರೀೆಡಾಪಟುಗಳು ಗೆಲುವನ್ನು ಖಚಿತ ಪಡಿಸಿಕೊಳ್ಳುತ್ತೀರಿ ಅದಕ್ಕೆೆ ನಿರಂತರ ಪ್ರಯತ್ನ ಅಗತ್ಯ ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಯಾಗಿ ವಿ.ಆರ್.ಇ.ಟಿ ಸಂಸ್ಥೆೆಯ ಅಧ್ಯಕ್ಷರಾದ ಮಹಾದೇವಿ ಪಾಸೋಡಿ, ವಿವಿಯ ನಿವೃತ್ತ ದೈ.ಶಿ ನಿರ್ದೇಶಕರಾದ ವಾಸುದೇವ ಜೇವರ್ಗಿ, ದೇವದುರ್ಗ ಜಿಎ್ಜಿಸಿಯ ಡಾ.ಸುಭಾಷ್ ಚಂದ್ರ ಪಾಟೀಲ್, ಪ್ರಾಾಂಶುಪಾಲ ರೂಡ್ಸ್ ಕಾಲೇಜ್ನ ಕೆಂಪಣ್ಣ, ಇನ್ಯ್ಾಂಟ್ ಜೀಸಸ್ ಕಾಲೇಜ್ನ ಭೀಮಣ್ಣ, ವಿವಿಯ ದೈ.ಶಿ ಮತ್ತು ಕ್ರೀೆಡಾ ವಿಭಾಗದ ಸಂಯೋಜಕ ಮಲ್ಲಿಕಾರ್ಜುನ ಎನ್. ಉಪಸ್ಥಿಿತರಿದ್ದರು. ವಿಆರ್ಇಟಿ ಕಾಲೇಜಿನ ವಿದ್ಯಾಾರ್ಥಿನಿಯರಾದ ದೇವಮ್ಮ ಸಂಗಡಿಗರು ಪ್ರಾಾರ್ಥಿಸಿದರು, ಕಾರ್ಯದರ್ಶಿ ರಾಜಶೇಖರ ಪಾಸೋಡಿ ಸ್ವಾಾಗತಿಸಿ ಪ್ರಾಾಸ್ತಾಾವಿಕ ಮಾತನಾಡಿದರು, ಮಹಿಳಾ ಜಿಎ್ಜಿಸಿ ದೈ.ಶಿ. ನಿರ್ದೇಶಕ ಪ್ರಸನ್ನ ನಿರೂಪಿಸಿದರು, ಶಹಾಪುರದ ಜಿಎ್ಜಿಸಿ ದೈ.ಶಿ.ನಿರ್ದೇಶಕ ಡಾ.ನಾಗರೆಡ್ಡಿಿ ಅತಿಥಿ ಪರಿಚಯ ಮಾಡಿದರು, ಸಿಂಧನೂರಿನ ದೈ.ಶಿ.ನಿರ್ದೇಶಕ ಡಾ.ಶಿವು.ಕೆ ವಂದಿಸಿದರು. 2025-26 ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆೆಟಿಕ್ ಕ್ರೀೆಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಿಯನ್ನು ಪುರುಷ ವಿಭಾಗದಲ್ಲಿ ಮಾನ್ವಿಿಯ ಜಿಎ್ಜಿಸಿ ಪಡೆದರೆ, ಮಹಿಳಾ ವಿಭಾಗದಲ್ಲಿ ಹಾಗೂ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ ಒಟ್ಟುಗೂಡಿ ಸಮಗ್ರ ವೀರಾಗ್ರಣಿ ಪ್ರಶಸ್ತಿಿ ರಾಯಚೂರಿನ ವಿಆರ್ಇಟಿ ಕಾಲೇಜು ಪಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ರೀೆಡೆಗಳಲ್ಲಿ ವಿಜೇತರಾದ ಕ್ರೀೆಡಾಪಟುಗಳಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.

