ಸುದ್ದಿಮೂಲ ವಾರ್ತೆ ರಾಯಚೂರು, ಜ.15:
ಸ್ನಾಾತಕೋತ್ತರ ಪದವಿಯ ಜೊತೆಗೆ ಉತ್ತಮ ಜ್ಞಾಾನಾರ್ಜನೆ, ಸಂವಹನ ಕೌಶಲ್ಯ, ಉತ್ತಮ ನಡವಳಿಕೆ ಅಳವಡಿಸಿಕೊಳ್ಳುವುದು ಮುಖ್ಯ ಎಂದು ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಇಂಗ್ಲಿಿಷ್ ವಿಭಾಗದ ಮುಖ್ಯಸ್ಥೆೆ ಪ್ರೊೊ.ಪಾರ್ವತಿ ಸಿ.ಎಸ್. ಅಧ್ಯಕ್ಷೀಯ ನುಡಿಗಳನ್ನಾಾಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಇಂಗ್ಲಿಿಷ್ ವಿಭಾಗದಲ್ಲಿ ಮಂಗಳವಾರ ಹಮ್ಮಿಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾಾರ್ಥಿಗಳಿಗೆ ಅಂತಿಮ ವರ್ಷದ ವಿದ್ಯಾಾರ್ಥಿಗಳಿಂದ ಸ್ವಾಾಗತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಂಗ್ಲಿಿಷ್ ಸಾಹಿತ್ಯ ಮತ್ತು ಭಾಷೆಯನ್ನು ಅಧ್ಯಯನ ಮಾಡುವುದರಿಂದ ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣೆ ಮತ್ತು ಸಂವಹನದಂತಹ ಅಗತ್ಯ ಕೌಶಲ್ಯಗಳನ್ನು ನಿರ್ಮಿಸಿ ಉತ್ತಮ ಶಬ್ದಕೋಶ, ಭಾಷಾ ನಿರರ್ಗಳತೆ, ಗ್ರಹಿಕೆ ಮೂಲಕ ಜಾಗತಿಕ ಜಗತ್ತಿಿನಲ್ಲಿ ಒಟ್ಟಾಾರೆ ಶೈಕ್ಷಣಿಕ ಹಾಗೂ ವೃತ್ತಿಿಪರ ಸಿದ್ಧತೆಯನ್ನು ಹೆಚ್ಚಿಿಸುತ್ತದೆ ಮತ್ತು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ವಿಭಾಗದ ಸಂಯೋಜಕರಾದ ಡಾ.ಆನಂದ.ಜೆ.ಯರಗೇರಾ, ಉಪನ್ಯಾಾಸಕರಾದ ಅನಿಲ್ ಅಪ್ರಾಾಳ್, ಡಾ.ಮಹಮ್ಮದ್ ಆಸ್ಿ, ಡಾ.ಅನಿತಾ ವೇದಿಕೆ ಮೇಲೆ ಉಪಸ್ಥಿಿತರಿದ್ದರು. ವಿವಿಧ ವಿಭಾಗದ ಅತಿಥಿ ಉಪನ್ಯಾಾಸಕರು, ವಿದ್ಯಾಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದರು.
ವಿದ್ಯಾಾರ್ಥಿಗಳಾದ ಹುಲಿಗೆಮ್ಮ ಮತ್ತು ಪೂಜಾ ಪ್ರಾಾರ್ಥಿಸಿದರು, ಶಗ್ತು ಸ್ವಾಾಗತಿಸಿದರು. ಸಿದ್ರಾಾ ನಿರೂಪಿಸಿದರು, ರಾಜಶೇಖರ್, ಪ್ರಸಾದ್ ಅನಿಸಿಕೆ ವ್ಯಕ್ತಪಡಿಸಿದರು. ಅನ್ನಪೂರ್ಣ ವಂದಿಸಿದರು.
ವಾಲ್ಮೀಕಿ ವಿವಿ : ಇಂಗ್ಲಿಷ್ ವಿಭಾಗದಲ್ಲಿ ಸ್ವಾಗತ ಕಾರ್ಯಕ್ರಮ ಇಂಗ್ಲಿಷ್ ಸಂವಹನ ಕೌಶಲ್ಯ ಕಲಿಕೆ ಅಗತ್ಯ : ಪ್ರೊ.ಪಾರ್ವತಿ

