ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ. 1 : ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ವರಲಕ್ಷ್ಮೀ.ಕೆ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಿಜ್ವಾನರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 20 ಜನರ ಸಂಖ್ಯಾ ಬಲವಿರುವ ಬೂದಿಗೆರೆ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು 14 ಜನರಿದ್ದರೂ ಅಧ್ಯಕ್ಷರ ಸ್ಥಾನಕ್ಕೆ ಎಸ್ಟಿ (ಮಹಿಳಾ) ಮೀಸಲು ಬಂದ ಕಾರಣದಿಂದಾಗಿ ಮೊದಲ ಬಾರಿಗೆ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದ ವರಲಕ್ಷ್ಮೀ.ಕೆ ಅವರಿಗೆ ಅಧ್ಯಕ್ಷ ಗಾದಿ ವರದಾನವಾಗಿ ಬಂದಿದೆ.
ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ‘ ಸಂವಿಧಾನ ಅಡಿಯಲ್ಲಿ ದೊರೆತಿರುವ ಮೀಸಲಾತಿಯಿಂದಾಗಿ ಇಂದು ಬೂದಿಗೆರೆ ಗ್ರಾಪಂ ಅಧ್ಯಕ್ಷಗಾದಿಯೂ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಲಭಿಸಿದೆ. ಸ್ಥಳೀಯವಾಗಿರುವ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಲಿನಲ್ಲಿ ಹೊಸ ಅಧ್ಯಕ್ಷರು ಕಾರ್ಯೋನ್ಮುಖವಾಗುವಂತೆ ಮಾರ್ಗದರ್ಶನ ನೀಡಲಾಗುವುದು’ ಎಂದರು.
ನೂತನ ಅಧ್ಯಕ್ಷೆ ವರಲಕ್ಷ್ಮೀ.ಕೆ ಮಾತನಾಡಿ, ‘ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಪಂ ವ್ಯಾಪ್ತಿಯಲ್ಲಿ ಆಗಬೇಕಿರುವ ಎಲ್ಲ ತುರ್ತು ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನೈರ್ಮಲ್ಯಕ್ಕೆ ಹಾಗೂ ಮಾಲಿನ್ಯ ರಹಿತವಾದ ಗ್ರಾಮವನ್ನಾಗಿ ಮಾಡುವತ್ತಾ ಹಿರಿಯ ಮಾರ್ಗದರ್ಶನದಲ್ಲಿ ಆಡಳಿತ ಮಾಡಲಾಗುವುದು’ ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಚೌಡಪ್ಪ, ಬಿ.ಕೆ.ನಾರಾಯಣಸ್ವಾಮಿ, ಶಂಷದ್, ಶ್ರೀನಿವಾಸ್ ಎಲ್, ವೆಂಕಟೇಶ್ ಎಂ, ರೂಪ.ಎಂ, ಆರ್. ಲಕ್ಷ್ಮಣಮೂರ್ತಿ, ಪ್ರಮೀಳಾ, ಆರತಿ, ಮಂಜುನಾಥ.ಎಸ್, ಸಂಜಯ್ ಕುಮಾರ್.ಎಂ, ಪದ್ಮ,ಕೆ, ಮೋಹನ್, ಕೃಷ್ಣಮ್ಮ, ವರಲಕ್ಷ್ಮೀ, ಗಜೇಂದ್ರ, ರಾಜಶೇಖರ್ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದಿಸಿದರು.
ಇದೇ ವೇಳೆ ಇತ್ತರಹಳ್ಳಿಯ ಅನಿಲ್ ಕುಮಾರ್, ತ್ಯಾಗರಾಜು, ಅಂದರಹಳ್ಳಿಯ ಶ್ರೀನಿವಾಸ್, ಕೃಷ್ಣಮ್ಮ ಬಾಬು, ಮಾಜಿ ಅಧ್ಯಕ್ಷರಾದ ಬೂದಿಗೆರೆ ಮುನಿರಾಜು, ಚಾನ್ ಬಾಷಾ, ಶ್ರೀನಾಥ್ ಗೌಡ, ರಾಮಾಂಜೀನಿ ದಾಸ್, ಎಸ್ಟಿಡಿ ರಮೇಶ್, ಆನಂದ್ ಕುಮಾರ್, ಮಹೇಂದ್ರ ಕುಮಾರ್, ಲೋಕೇಶ್, ಮುರುಳಿ, ಹತ್ತವುಲ್ಲಾ, ಎಲೆಕ್ಟ್ರಾನಿಕ್ ಹನುಮಂತಪ್ಪ, ಯುವ ಮುಖಂಡ ವಿಕಾಶ್, ಉಮೇಶ್, ಶೇಖರ್, ಸುಮಂತ್ ಸೇರಿದಂತೆ ಇತರರು ಇದ್ದರು.