ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ದೇಶದ ಸ್ವಾಾತಂತ್ರ್ಯ ಸಂಗ್ರಾಾಮದ ಮಹಾನ್ ಕ್ರಾಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆಯನ್ನು ಎಐಡಿವೈಓ ನೇತೃತ್ವದಲ್ಲಿ ಆಚರಿಸಲಾಯಿತು.
ಇಂದು ನಗರದ ಸ್ಟೇಶನ್ ರಸ್ತೆೆಯಲ್ಲಿನ ಸಾರ್ವಜನಿಕ ಉದ್ಯಾಾನವನದಲ್ಲಿ ವಾಯು ವಿಹಾರಕ್ಕೆೆ ಆಗಮಿಸಿದ ಯುವಕರು, ಹಿರಿಯರೊಂದಿಗೆ ಎಐಡಿವೈಓ ಕಾರ್ಯಕರ್ತರು ಸೇರಿಕೊಂಡು ನೇತಾಜಿ ಅವರಿಗೆ ಪುಷ್ಪಾಾರ್ಚನೆ ಸಲ್ಲಿಸಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿವೈಓ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಸುಭಾಷ್ ಚಂದ್ರ ಬೋಸ್ ಬಾಲ್ಯದಿಂದಲೇ ಹೋರಾಡುವ ಮನೋಭಾವನೆ ಬೆಳೆಸಿಕೊಂಡರು. ಅನ್ಯಾಾಯದ ವಿರುದ್ಧ ಯಾವಾಗಲೂ ಅವರ ಮನಸ್ಸು ಪ್ರತಿಭಟಿಸುತ್ತಿಿತ್ತು. ದೇಶದ ಸ್ವಾಾತಂತ್ರಕ್ಕೆೆ ತಮ್ಮ ಬದುಕನ್ನು ಮುಡಿಪಾಗಿಟ್ಟರು. ದೇಶಕ್ಕೆೆ ಸ್ವಾಾತಂತ್ರ್ಯ ಬರುವಷ್ಟೇ ಅಲ್ಲದೆ ಸರ್ವ ಸಮಾನತೆಯ ಭಾರತವನ್ನು ಕಟ್ಟಲು ಕನಸು ಕಂಡಿದ್ದರು ಆದರೆ ಅವರ ಕನಸುಗಳು ಇಂದು ನನಸಾಗಿಲ್ಲ. ಬಡತನ, ಬೆಲೆ ಏರಿಕೆ, ನಿರುದ್ಯೋೋಗ ಮುಂತಾದ ಸಮಸ್ಯೆೆಗಳು ಹೆಚ್ಚುತ್ತಿಿದೆ. ಯುವಜನರು ಸಾಮಾಜಿಕ ಮಾಧ್ಯಮಗಳು ಮತ್ತು ಮೊಬೈಲ್ ಹಾವಳಿಗೆ ಬಲಿಯಾಗಿ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಜನರಿಗೆ ನೇತಾಜಿ ಅವರ ಬದುಕು, ವಿಚಾರಗಳು ಆದರ್ಶವಾಗಿವೆ ಎಂದರು.
ಇದೇ ವೇಳೆ ಖಾಲಿ ಹುದ್ದೆಗಳ ಭರ್ತಿಗಾಗಿ ಸಂಘಟನೆಯು ಸಹಿಸಂಗ್ರಹ ಅಭಿಯಾನದ ಭಾಗವಾಗಿ ಪ್ರತಿಯೊಬ್ಬರಿಂದ ಸಹಿ ಸಂಗ್ರಹ ನಡೆಸಲಾಯಿತು.
ಈ ಸಂದರ್ಭದಲ್ಲಿ ವಾಯು ವಿಹಾರಕ್ಕೆೆ ಬಂದ ಶಂಕರಗೌಡ, ಚಂದ್ರಶೇಖರ, ಮಲ್ಲಿಕಾರ್ಜುನ, ಲಾಜರ, ಶ್ರೀಕಾಂತ್ ಮುಂತಾದವರು ಭಾಗವಹಿಸಿದ್ದರು.
ನೇತಾಜಿ ಜನ್ಮ ದಿನಾಚರಿಸಿದ ವಾಯು ವಿಹಾರಿಗಳು

