ಸುದ್ದಿಮೂಲ ವಾರ್ತೆ
ಬೆಂಗಳೂರು,ನ.25: ಶ್ರೀ ವಿವೇಕಾನಂದ ಕಲಾ ಕೇಂದ್ರದಿಂದ ಸ್ವಾಮಿ ವಿವೇಕಾನಂದ ಶೈಕ್ಷಣಿಕ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ‘ಮಹಾಭಾರತ’ ಕಥೆಯಲ್ಲಿ ಬರುವ ಅರ್ಜುನನ ಪಾತ್ರದ ಮೂಲಕ ಗುರುಭಕ್ತಿ, ಏಕಾಗ್ರತೆ, ಶೌರ್ಯ ಪರಾಕ್ರಮ, ಬ್ರಾತೃವಾತ್ಸಲ್ಯ, ವಿಧೇಯತೆ, ಸ್ನೇಹ, ಧರ್ಮ, ಕರ್ತವ್ಯ, ಯಶಸ್ಸು ಮುಂತಾದ ಪರಿಕಲ್ಪನೆಯನ್ನು ಇಟ್ಟುಕೊಂಡು ‘ವೀರ ಅರ್ಜುನ’ ರಂಗರೂಪಕವನ್ನು ಪ್ರಸ್ತುತಪಡಿಸಲಾಯಿತು.
ಮೌಲ್ಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ವಾಮಿ ವಿವೇಕಾನಂದರ ‘ಭವ್ಯಭಾರತ’ದ ಪರಿಕಲ್ಪನೆಯ ಕನಸನ್ನು, ಅವರ ಸಂದೇಶಗಳ ಮೂಲಕ ಸಾಕಾರಗೊಳಿಸುವ ‘ಕೈಂಕಯ್ಯ’ ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಕಳೆದ 52 ವರ್ಷಗಳಿಂದ ವೈವಿಧ್ಯಮಯ ಪರಿಕಲ್ಪನೆಗಳ ಮೂಲಕ ರಂಗದೃಶ್ಯ ರೂಪಕಗಳನ್ನು ಸಿದ್ಧಪಡಿಸಿ, ಹಲವಾರು ವಿದ್ಯಾಸಂಸ್ಥೆಗಳಲ್ಲಿ ಪ್ರದರ್ಶಿಸಿ, ಮಕ್ಕಳಲ್ಲಿ ಹಾಗೂ ಯುವಜನತೆಯಲ್ಲಿ ‘ರಾಷ್ಟ್ರ ಜಾಗೃತಿ’ ಮತ್ತು ‘ಸಂಸ್ಕೃತಿ ಜಾಗೃತಿ’ ಮೂಡಿಸಿಕೊಂಡು ಬರುತ್ತಿದೆ.
ಸುಮಾರು 114 ನೃತ್ಯ ದೃಶ್ಯ ರಂಗರೂಪಕಗಳನ್ನು ಈವರೆಗೆ ಪ್ರಸ್ತುತಪಡಿಸಲಾಗಿದೆ. ‘ಮಹಾಭಾರತ’ ಕಥೆಯಲ್ಲಿ ಬರುವ ಅರ್ಜುನನ ಪಾತ್ರವನ್ನು ಆರಿಸಿಕೊಂಡು ಗುರುಭಕ್ತಿ, ಏಕಾಗ್ರತೆ, ಶೌರ್ಯ ಪರಾಕ್ರಮ, ಭಾತೃವಾತ್ಸಲ್ಯ, ವಿಧೇಯತೆ, ಸ್ನೇಹ, ಧರ್ಮ, ಕರ್ತವ್ಯ, ಯಶಸ್ಸು. ಮುಂತಾದ ಮೌಲ್ಯಗಳ ಅರಿವನ್ನು ಮಕ್ಕಳಲ್ಲಿ ಹಾಗೂ ಯುವಜನತೆಯಲ್ಲಿ ಮೂಡಿಸುವ ನಿಟ್ಟಿನಲ್ಲಿ ‘ವೀರ ಅರ್ಜುನ’ ವೆಂಬ ರಂಗರೂಪವನ್ನು ಸಿದ್ಧಪಡಿಸಲಾಗಿದೆ.
ಪರಿಕಲ್ಪನೆ : ಡಾ.ವಿ.ನಾಗರಾಜ್, ನಿರ್ದೇಶನ : ಡಾ.ಎನ್.ಶ್ವೇತಾ, ರಂಗ ನಿರ್ವಹಣೆ : ದೈವಿಕ್ ಹರ್ಷ ಎಸ್.ವಿ.ಇ.ಎಸ್. ಅಧ್ಯಕ್ಷರು, ಸುಧಾ ನಾಗೇಂದ್ರ ಸಂಜೆ ಪ್ರಭಯ ಸಂಪಾದಕರಾದ ವೆಂಕಟೇಶ ಪೈ ,ವಾರ್ತಾಜಾಲ ಪ್ರಧಾನ ಸಂಪಾದಕ ಬಿ.ಕೆ. ಪ್ರಸನ್ನ , ಬಿ.ಬಿ.ಎಂ.ಪಿ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಎನ್. ಶಂಕರ್ , ಎಸ್.ವಿ.ಇ.ಎಸ್. ಕಾರ್ಯದರ್ಶಿ ಹೆಚ್.ವಿ. ಶಂಕರ್ , ಜಗನ್ನಾಥ್, ಬಸವರಾಜ್, ಎಸ್.ವಿ. ಪ್ರೌಢಶಾಲೆ ಮತ್ತಿತರರು ಭಾಗವಹಿಸಿದ್ದರು.