ಸುದ್ದಿಮೂಲ ವಾರ್ತೆ ಮುದಗಲ್, ನ.26:
ಪಟ್ಟಣದ ತಾವರಗೇರ ರಸ್ತೆೆಯ ಬೆಟ್ಟದ ಮೇಲಿರುವ ಐತಿಹಾಸಿಕ ಹಾಲಬಾವಿ ವೀರಭದ್ರೇೇಶ್ವರ ದೇವಸ್ಥಾಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ದೀಪೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಮಂಗಳವಾರ ಜರುಗಿತು.
ಬೆಳಿಗ್ಗೆೆ ದೇವಸ್ಥಾಾನದ ಅರ್ಚಕ ಸಿದ್ದಯ್ಯಸ್ವಾಾಮಿ ಸಾಲಿಮಠ ಮಹಾರುದ್ರನ ಶಿಲಾಮೂರ್ತಿಗೆ ರುದ್ರಾಾಭಿಷೇಕ, ಬಿಲ್ವಾಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿಸಿದರು.
ಸಾಯಂಕಾಲ ದೇವಸ್ಥಾಾನದ ಪ್ರಾಾಂಗಣದಲ್ಲಿ ಶ್ರದ್ಧಾಾ- ಭಕ್ತಿಿಯಿಂದ ಭಕ್ತರು ಪ್ರಣತಿಯಲ್ಲಿ ಸಾವಿರಾರು ದೀಪಗಳು ಹಚ್ಚುವ ಮೂಲಕ ಮಹಾದೀಪೋತ್ಸವ ಸಂಭ್ರಮದಿಂದ ಆಚರಿಸಿ ಮಹಾರುದ್ರನ ಕೃಪೆಗೆ ಪಾತ್ರರಾದರು. ಬಲೂನಿನ ಬುಟ್ಟಿಿಯಲ್ಲಿ ದೀಪ ಹಚ್ಚಿಿ ಆಕಾಶಕ್ಕೆೆ ಹಾರಿ ಬಿಟ್ಟು ಭಕ್ತರು ಮಹಾರುದ್ರನ ಜಯಘೋಷ ಮೊಳಗಿಸಿದರು. ನಂತರ ದೇವಸ್ಥಾಾನದಲ್ಲಿ ಮಹಾಪ್ರಸಾದ, ಅಯ್ಯಪ್ಪಸ್ವಾಾಮೀ ಮಾಲಾಧಾರಿಗಳಿಂದ ಭಜನೆ ಸೇವೆ ನಡೆಯಿತು.
ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತೇಶ ಪಾಟೀಲ್, ಪತ್ರಕರ್ತರಾದ ರಾಘವೇಂದ್ರ ಗುಮಾಸ್ತೆೆ, ಹನುಮಂತ ನಾಯಕರಿಗೆ ಕಾರ್ಯಕ್ರಮದಲ್ಲಿ ಸನ್ಮಾಾನಿಸಲಾಯಿತು.
ಚೆನ್ನವೀರಪ್ಪ ಸೌದ್ರಿಿ, ಸಿದ್ದಲಿಂಗಯ್ಯ ಗಚ್ಚಿಿನಮಠ, ವೀರಭದ್ರಯ್ಯ ಯರದಿಹಾಳ, ವೀರಭದ್ರಯ್ಯ ಸರಗಣಾಚಾರಿ, ಸಂಗಪ್ಪ ಕೊಡೆಕಲ್, ಶರಣಪ್ಪ ಸಜ್ಜನ್, ಈರಪ್ಪ ಹಡಪದ, ಈರಣ್ಣ ಗುಡೂರು, ವಿರುಪಾಕ್ಷಪ್ಪ ಸಜ್ಜನ್, ಬಸವರಾಜ ಕೊಟ್ಟೂರು, ಹನುಮಂತ ಉಪ್ಪಾಾರ, ಗಂಗಾಧರ ಮಡಿವಾಳ, ಮಹಾಂತೇಶ ಬನ್ನಿಿಗೋಳ, ಪ್ರಭುಸ್ವಾಾಮೀ, ಶರಣಬಸವ ಅಂಗಡಿ, ಗುರುರಾಜ ದೇಶಪಾಂಡೆ, ರಹಿಮಾನ ಬೇಗ ಹಾಗೂ ಮಹಿಳೆಯರು, ಮಕ್ಕಳು, ಸಕಲ ಸದ್ಭಕ್ತರು ಇದ್ದರು.
ಮುದಗಲ್ : ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ

