ಸುದ್ದಿಮೂಲ ವಾರ್ತೆ ಮಾನ್ವಿ ಜ.19:
ಮಹಾಯೋಗಿ ವೇಮನ ಜಯಂತಿಯನ್ನು ತಹಸೀಲ್ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು.
ಮಹಾಯೋಗಿ ವೇಮನರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದ ತಹಸೀಲ್ದಾಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸರ್ವಜ್ಞ , ತಮಿಳುನಾಡಿನಲ್ಲಿ ತಿರುವಳ್ಳವರ್ , ಆಂಧ್ರ ಪ್ರದೇಶದಲ್ಲಿ ಮಹಾಯೋಗಿ ವೇಮನ ರವರು ತಮ್ಮ ಪದ್ಯಗಳ ಮೂಲಕ ಜನರಿಗೆ ತ್ಯಾಾಗ, ಭೋಗ, ವೈರಾಗ್ಯ ತತ್ವಗಳನ್ನು ಭೋದಿಸಿದ ಮಹನೀಯರಾಗಿದ್ದಾರೆ. ಮಹಾತ್ಮರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು. ಅರಿವು ಹಾಗೂ ಶಿಕ್ಷಣವಿಲ್ಲದೆ ಸಮಾಜದಲ್ಲಿ ಬದಲಾವಣೆಯನ್ನು ತರುವುದಕ್ಕೆೆ ಸಾಧ್ಯವಾಗುವುದಿಲ್ಲ. ಯುವಕರು ಸನ್ಮಾಾರ್ಗದಲ್ಲಿ ನಡೆಯುವುದಕ್ಕೆೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ. ಇಂದಿನ ಯುವ ಸಮುದಾಯಕ್ಕೆೆ ಬದುಕಿನ ಬಗ್ಗೆೆ ಅರಿವು ಮೂಡಿಸಿದಾಗ ಮಾತ್ರ ಅವರು ಜೀವನದಲ್ಲಿ ಸಾಧನೆ ತೋರುವುದಕ್ಕೆೆ ಸಾಧ್ಯ ಎನ್ನುವುದು ಮಹಾಯೋಗಿ ವೇಮನರ ಜೀವನ ತತ್ವಗಳಿಂದ ತಿಳಿಯುತ್ತದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಾದ ತಾಲೂಕಾ ಆರೋಗ್ಯಾಾಧಿಕಾರಿ ಡಾ.ಶರಣಬಸವರಾಜ ಮುಸ್ಟೂರು, ಮಾಜಿ ಯೋಧ ಚನ್ನಾಾರೆಡ್ಡಿಿ, ಬಿ.ವಿ.ಆರ್.ಶಿಕ್ಷಣ ಸಂಸ್ಥೆೆಯ ಕಾರ್ಯದರ್ಶಿ ಪದ್ಮಾಾವತಿ, ಪ್ರಗತಿ ಪರ ರೈತ ಶರಣಪ್ಪ, ಹಿರಿಯ ನ್ಯಾಾಯವಾದಿ ಮಲ್ಲಿಕಾರ್ಜುನ ಪಾಟೀಲ್ ಇವರನ್ನು ಸನ್ಮಾಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾಾರ್ ಅಬ್ದುಲ್ ವಾಹೀದ್, ರೆಡ್ಡಿಿ ಸಮಾಜದ ಅಧ್ಯಕ್ಷ ಅಮರೇಗೌಡ ಉಮಳಿಹೊಸೂರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಅರುಣ್ ಚಂದಾ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ಕಾರ್ಯಾಧ್ಯಕ್ಷ ಶ್ರೀಧರಸ್ವಾಾಮಿ, ಕಾರ್ಯದರ್ಶಿ ಜಗದೀಶ ಓತೂರ್, ಡಾ.ಶರಣಪ್ಪ ಬಲ್ಲಟಗಿ, ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ತಿಮ್ಮಾಾರೆಡ್ಡಿಿ ಭೋಗಾವತಿ, ನಕ್ಕುಂದಿ ಮಲ್ಲನಗೌಡ ವಕೀಲರು, ವೀರನಗೌಡ ಪೋತ್ನಾಾಳ್ ವಕೀಲರು, ಸಿದ್ದಲಿಂಗಪ್ಪ ವಕೀಲರು, ರೇವಣ ಸಿದ್ದಯ್ಯ ಸ್ವಾಾಮಿ, ಪ್ರದೀಪ ಪಾಟೀಲ್, ಶಿವಲಿಂಗಯ್ಯಸ್ವಾಾಮಿ, ಶಿವಕುಮಾರ ಗೌಡ ಭೋಗಾವತಿ, ವಿಶ್ವನಾಥ ಪಾಟೀಲ್, ಗುರುಗೌಡ ಕಣ್ಣೂರು, ಜನಾರ್ಧನ ಸಾಹುಕಾರ, ಚಂದ್ರಶೇಖರ ಶಿವಪೂಜಿ, ರಾಜಶೇಖರ ಸ್ವಾಾಮಿ, ವಿಜಯಕುಮಾರ ಮೇಟಿಗೌಡ, ಉಮೇಶಗೌಡ, ಹೊಯ್ಸಳಸ್ವಾಾಮಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಮಾನ್ವಿ : ತಹಸೀಲ್ ಕಚೇರಿಯಲ್ಲಿ ವೇಮನ ಜಯಂತಿ ಆಚರಣೆ

