ಸುದ್ದಿಮೂಲ ವಾರ್ತೆ ಮುದಗಲ್, ಜ.20:
ಪಟ್ಟಣದ ಪುರಸಭೆ, ನಾಡ ಕಾರ್ಯಾಲಯ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಲ್ಲಿ 15ನೇ ಶತಮಾನದ ಮಹಾಯೋಗಿ, ಆಧ್ಯಾಾತ್ಮ, ಯೋಗ, ನೈತಿಕ ಮೌಲ್ಯಗಳ ಕುರಿತು ಬೆಳಕು ಚೆಲ್ಲಿದ ವೇಮನ ಜಯಂತಿ ಸೋಮವಾರ ಆಚರಿಸಿದರು.
ಪುರಸಭೆಯಲ್ಲಿ ವೇಮನ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ, ಪುಷ್ಪಾಾರ್ಚನೆ ಮಾಡಿದರು.
ಮಾಜಿ ಪುರಸಭೆ ಅಧ್ಯಕ್ಷ ರಜ್ಜಬಲಿ ಟಿಂಗ್ರಿಿ, ಪುರಸಭೆ ವ್ಯವಸ್ಥಾಾಪಕ ಸುರೇಶ ವನಹಳ್ಳಿಿ, ಆರ್ಐ ಅಂತೋಣಿರಾಜ್, ಸಿಬ್ಬಂದಿಗಳಾದ ರಂಗನಾಥ ತಳವಾರ, ಚೆನ್ನಮ್ಮ ದಳವಾಯಿಮಠ, ಬಸವರಾಜ ಕೊಟ್ಟೂರು, ಹುಲಿಗೆಮ್ಮ, ಪವನಕುಮಾರ, ನಿಸಾರ ಅಲಿ, ಅಪ್ಸರ್, ಬಾಬಾ, ಬಸವರಾಜ, ಶಿವು, ಚಂದ್ರು, ಸಂಜೀವಪ್ಪ ಹಾಗೂ ಇತರರಿದ್ದರು.
ಮುದಗಲ್ : ವಿವಿಧೆಡೆ ವೇಮನ ಜಯಂತಿ ಆಚರಣೆ

