ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.01:
ಪಟ್ಟಣದ ಹಳೆ ಬಸ್ ನಿಲ್ದಾಾಣದ ಆವರಣದಲ್ಲಿ ಡಿಸೆಂಬರ್ 29 ರಂದು ಸೋಮವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ವಿವಿಧ ಅಭಿವೃದ್ಧಿಿ ಕಾಮಗಾರಿಗಳ ಶಂಕುಸ್ಥಾಾಪನೆ ಮತ್ತು ಉದ್ಘಾಾಟನೆ ಕಾರ್ಯಕ್ರಮದಲ್ಲಿ ಆಹ್ವಾಾನ ನೀಡದಿದ್ದರೂ ಪ್ರತಿಷ್ಠಿಿತ ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಪೀಠದ ಶಾಖಾಮಠವಾದ ಹರಪನಹಳ್ಳಿಿ ತೆಗ್ಗಿಿನಮಠದ ಮಠಾಧೀಶರಾದ ಶ್ರೀ ವರಸದ್ಯೋೋಜಾತ ಸ್ವಾಾಮಿಯವರು ಭಾಗವಹಿಸಿ ಶಿಷ್ಟಾಾಚಾರ ಉಲ್ಲಂಘನೆ ಮಾಡಿ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ ಎಂದು ಕರ್ನಾಟಕ ರೈತ ಮಿತ್ರ ಸಂಘದ ರಾಜ್ಯಾಾಧ್ಯಕ್ಷ ಹೆಚ್ ವೆಂಕಟೇಶ್ ಪತ್ರಿಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಘಟನೆ ಕುರಿತು ಪತ್ರಿಿಕೆ ಪ್ರಕಟಣೆ ನೀಡುವ ಅವರು ಹರಪನಹಳ್ಳಿಿ ಇತಿಹಾಸದ ಆಧ್ಯಾಾತ್ಮಿಿಕ ಮೇರು ಪರ್ವತದಂತಿರುವ ತೆಗ್ಗಿಿನಮಠದ ಶ್ರೀಗಳ ಈ ನಡೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಾಸವಾಗಿದೆ. ಮಾರ್ಗದರ್ಶನ ನೀಡಬೇಕಾದ ಗುರುಗಳೇ ಕಾರ್ಯಕ್ರಮಕ್ಕೆೆ ಆಹ್ವಾಾನ ಇಲ್ಲದಿದ್ದರೂ ಅದರಲ್ಲಿಯೂ ರಾಜಕೀಯ ಸಮಾರಂಭದಲ್ಲಿ ಭಾಗವಹಿಸಿರುವುದು ಅನೇಕ ಪ್ರಶ್ನೆೆಗಳನ್ನು ಹುಟ್ಟು ಹಾಕಿದೆ. ರಾಜಕಾರಣದ ಬಗ್ಗೆೆ ಸ್ವಾಾಮಿಗಳಿಗೆ ಆಸಕ್ತಿಿ ಇದೆಯೋ ಅಥವಾ ಕುತೂಹಲವೋ ಇಲ್ಲವೇ ಶಾಸಕರು ತಮ್ಮ ಸಮುದಾಯದವರು ಎನ್ನುವ ಸಲಿಗೆಯಿಂದ ವೇದಿಕೆಯನ್ನು ಅಲಂಕರಿಸಿದ್ದರೋ ಗೊತ್ತಿಿಲ್ಲ ಆದರೆ ನೆರೆದಿದ್ದ ಸಭೀಕರ ಮುಂದೆ ಶ್ರೀಗಳ ಗೌರವದ ಜೊತೆಗೆ ಶ್ರೀಮಠದ ಘನತೆಯನ್ನು ಹಾಳು ಮಾಡುವಂತೆ ಕಾಣುತ್ತಿಿತ್ತು.
ವರಸದ್ಯೋೋಜಾತ ಶ್ರೀಗಳು ವಯಸ್ಸಿಿನಲ್ಲಿ ತುಂಬಾ ಚಿಕ್ಕವರಿರಬಹುದು ಆದರೆ ಶ್ರೀಮಠದ ಹಿರಿಮೆ ಪರಂಪರೆ ತುಂಬಾ ದೊಡ್ಡದಾಗಿದೆ. ಶ್ರೀಗಳು ಇನ್ನೂ ಆಧ್ಯಾಾತ್ಮಿಿಕ ವಿಷಯದಲ್ಲಿ ಅನುಭವ ಹೊಂದಬೇಕಿದೆ ಹಾಗೂ ರಾಜಕಾರಣದ ಸೂಕ್ಷ್ಮತೆಗಳನ್ನು ಅರಿತುಕೊಳ್ಳಬೇಕಿದೆ. ಶ್ರೀಮಠದ ಆಡಳಿತಾಧಿಕಾರಿಗಳಾದ ಟಿ.ಎಂ.ಚಂದ್ರಶೇಖರಯ್ಯನವರು ವರಸದೋಜಾತ ಶ್ರೀಗಳಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಶ್ರೀಮಠದ ಘನತೆ, ಗೌರವವನ್ನು ಎತ್ತಿಿ ಹಿಡಿಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿರುತ್ತಾಾರೆ .
ಶಿಷ್ಟಾಚಾರ ಉಲ್ಲಂಘಿಸಿದ ತೆಗ್ಗಿನಮಠ ಶ್ರೀ ಗಳು : ಹೋರಾಟಗಾರ ವೆಂಕಟೇಶ್ ಆರೋಪ

