ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಮೂಲಕ ಕೂಲಿಕಾರ್ಮಿಕರ ಹಕ್ಕು ಹರಣ ಮಾಡಿದ್ದು ಜನ ಸಾಮಾನ್ಯರ ಮಧ್ಯೆೆ ಅರಿವು ಮೂಡಿಸಲು ಸಂಘಟನೆಗಳು ಸಂಘಟನಾತ್ಮಕವಾಗಿ ಹೋರಾಟದ ಭಾಗವಾಗಿ ೆ.12ರಂದು ರಾಷ್ಟ್ರವ್ಯಾಾಪ್ತಿಿ ಮುಷ್ಕರ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ವೇಣುಗೋಪಾಲ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಕಾರ್ಮಿಕರ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳ ವಿರೋಧಿಸಿ ನಡೆದ ಸಮಾವೇಶನದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಕಳೆದ ನ.21ರಂದು ದೇಶದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿಗೆ ಬಂದಿವೆ. 2020ರಲ್ಲಿ ಏಕಾಏಕಿ ಜಾರಿಗೆ ವಿರೋಧ ವ್ಯಕ್ತವಾದ ಕಾರಣ ರಚಿಸಿದ್ದ ಉಪಸಮಿತಿಯ ವರದಿಯನ್ನೇ ಬಹಿರಂಗ ಪಡಿಸದೆ ವಿರೋಧದ ಮಧ್ಯೆೆಯೂ ಜಾರಿಗೆ ತಂದಿದ್ದಾಾರೆ ಎಂದು ದೂರಿದರು.
ಜನಪರವಾದ ವಿಷಯ, ಸಮಸ್ಯೆೆಗಳು ಸಂಸತ್ತಿಿನಲ್ಲಿಘಿ, ಸದನಗಳಲ್ಲಿ ಚರ್ಚೆಯೇ ಆಗುತ್ತಿಿಲ್ಲಘಿ. ಈ ಸಂಹಿತೆಗಳು ಜಾರಿಗೆ ಬಂದರೆ ಎಲ್ಲ ಕಾರ್ಮಿಕರ ಸೌಲಭ್ಯಗಳು ಕೈ ತಪ್ಪಲಿವೆ ಎಂದರು. ಹೀಗಾಗಿ, ೆ.12ರ ಸಾರ್ವತ್ರಿಿಕ ಮುಷ್ಕರದಲ್ಲಿ ಎಲ್ಲ ಕಾರ್ಮಿಕರು ತಮ್ಮ ಕೆಲಸ ಬಿಟ್ಟು ಹೋರಾಟಕ್ಕೆೆ ಧುಮುಕಲೇಬೇಕು ಇದು ನಮ್ಮ ಬದುಕಿನ ಹೋರಾಟವಾಗಿದೆ ಎಂದರು.
ಖಾಲಿ ಇರುವ ಸ್ಥಾಾನಗಳಿಗೆ ನೇಮಕಾತಿ ಮಾಡುತ್ತಿಿಲ್ಲಘಿ, ಹೊರಗುತ್ತಿಿಗೆಗೆ ಪ್ರೋೋತ್ಸಾಾಹ ನೀಡುತ್ತಿಿದ್ದಾಾರೆ ಆದರೆ, ಕಾರ್ಮಿಕರ ಮಧ್ಯೆೆ ಭಿನ್ನಾಾಭಿಪ್ರಾಾಯ, ಜನಸಾಮಾನ್ಯರಿಗೆ ಕ್ರಾಾಂತಿಕಾರಕ ಬದಲಾವಣೆ ಎಂಬ ತಪ್ಪುು ಪ್ರಚಾರ ಮಾಡಲಾಗುತ್ತಿಿದೆ. ಈ ಬಗ್ಗೆೆ ಕಾರ್ಮಿಕರು ಎಚ್ಚರಿಕೆಯಿಂದ ಇರಬೇಕು. ಕಾರ್ಮಿಕರ ಕುಟುಂಬಗಳು ಬೀದಿಗೆ ಬರುವ ಮುನ್ನ ಹೋರಾಟ ರೂಪಿಸಬೇಕು, ಜನ ಬೆಂಬಲಿಸಬೇಕು ಎಂದರು.
ಸಂಘಟನೆ ರಾಜ್ಯ ಉಪಾಧ್ಯಕ್ಷ ಎನ್ಎಸ್ ವೀರೇಶ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಜನ ಸಾಮಾನ್ಯರ ವಿರೋಧಿಯಾಗಿ ಕಾನೂನುಗಳ ಜಾರಿಗೆ ತರುತ್ತಿಿದೆ. ಆದರೆ, ಬಡವರ, ದಲಿತರ ಪರ ಎಂದು ಸುಳ್ಳು ಹೇಳುತ್ತಿಿದೆ. ಇದನ್ನು ವಿರೋಧಿಸಬೇಕಾದ ಕರ್ನಾಟಕದ ಕಾಂಗ್ರೆೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯನವೂ ಸಹ ಕಾರ್ಮಿಕರ ಬೆನ್ನಿಿಗೆ ಚೂರಿ ಹಾಕಲು ಸಿದ್ದರಾಗಿದ್ದಾಾರೆ. ವಿರೋಧಿಸದೆ ಕೇಂದ್ರದ ನೀತಿ ಜಾರಿ ಮಾಡುತ್ತಿಿದ್ದಾಾರೆ ಎಂದು ವಾಗ್ದಾಾಳಿ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾಧ್ಯಕ್ಷ ತಿರುಮಲರಾವ್, ಮಹೇಶ, ಸಲೀಂ, ಅಣ್ಣಪ್ಪಘಿ, ಗಾಯತ್ರಿಿ ಸೇರಿ ಅನೇಕರಿದ್ದರು.
ನಾಲ್ಕು ಕಾರ್ಮಿಕ ಸಂಹಿತೆ ವಿರೋಧಿಸಿ ಸಮಾವೇಶ ೆ.12ರ ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ಸಂಘಟಿತರಾಗಿ – ವೇಣುಗೋಪಾಲ

