ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.13:ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾಗಿರುವ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಲ್ಲಿನ 2019-20ನೇ ಸಾಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ – ‘ಎ’ ವೃಂದದ 16 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಜೂನ್ 21 ಮತ್ತು 22 ರಂದು ಮೂಲದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನವನ್ನು ಬೆಂಗಳೂರಿನ ಕರ್ನಾಟಕ ಲೋಕಸೇವಾ ಆಯೋಗದ ಕೇಂದ್ರ ಕಚೇರಿಯಲ್ಲಿ ನಿಗಧಿಪಡಿಸಿದೆ.
ಅರ್ಹ ಅಭ್ಯರ್ಥಿಗಳಿಗೆ ಈಗಾಗಲೇ ವ್ಯಕ್ತಿತ್ವ ಪರೀಕ್ಷಾ ಸೂಚನಾ ಪತ್ರಗಳನ್ನು ಕಳುಹಿಸಲಾಗಿದೆ. ವ್ಯಕ್ತಿತ್ವ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆಯ ವೇಳಾಪಟ್ಟಿಯನ್ನು ಆಯೋಗದ ಅಂತರ್ಜಾಲ http://kpsc.kar.nic.in/lists ನಲ್ಲಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.