ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 19 : ಕನ್ನಡದ ಹಿರಿಯ ನಟಿ ಲೀಲಾವತಿ ಡಾ. ರಾಜ್ ಕುಮಾರ್ ಸೇರಿದಂತೆ ಹಲವು ಮೇರು ಕಲಾವಿದರ ಜತೆ ಅವರು ಅಭಿನಯಿಸಿದ್ದಾರೆ. ನೂರಾರು ನೆನಪಿನಲ್ಲಿ ಉಳಿಯುವಂತಹ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಅವರು ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದು, ನೆಲಮಂಗಲ ತಾಲೂಕಿನಲ್ಲಿರುವ ಅವರ ತೋಟದ ಮನೆಗೆ ಬಹುಭಾಷಾ ನಟ ಅರ್ಜುನ್ ಸರ್ಜಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಭಾವುಕರಾದ ಅರ್ಜುನ್ ಸರ್ಜಾ
ಹಾಸಿಗೆ ಹಿಡಿದಿರುವ ಲೀಲಾವತಿ ಅವರನ್ನು ನೋಡಿ ಅರ್ಜುನ್ ಸರ್ಜಾ ಭಾವುಕರಾದರು. ಲೀಲಾವತಿ ಅವರ ಆರೋಗ್ಯಕ್ಕಾಗಿ ಆಂಜನೇಯ ಸ್ವಾಮಿ ದೇವರ ಬಳಿ ಪ್ರಾರ್ಥನೆ ಮಾಡುತ್ತೇನೆ ಎಂದು ಅರ್ಜುನ್ ಸರ್ಜಾ ಹೇಳಿದರು. ಬಳಿಕ ಹಾಸಿಗೆ ಹಿಡಿದ ಲೀಲಾವತಿ ಅವರಿಗೆ ಮುತ್ತಿಟ್ಟು ಅರ್ಜುನ್ ಸರ್ಜಾ ನಮಿಸಿದರು. ಲೀಲಾವತಿ ಪುತ್ರ ವಿನೋದ್ ರಾಜ್ ಜತೆಗೂ ಸಮಾಲೋಚನೆ ನಡೆಸಿದರು.