ಸುದ್ದಿಮೂಲ ವಾರ್ತೆ ರಾಯಚೂರು, ಸೆ.25:
ರಾಯಚೂರು ಜಿಲ್ಲಾಾ ಮಹಿಳಾ ಕಾಂಗ್ರೆೆಸ್ ಅಧ್ಯಕ್ಷೆೆ ಹಾಗೂ ಉಪಾಧ್ಯಕ್ಷೆೆಯ ಮಧ್ಯೆೆ ಮಾತಿಗೆ ಮಾತು ಬೆಳೆದು ಜಗಳ ನಡೆದಿರುವ ವಿಡಿಯೋ ವೈರಲ್ ಆಗಿದೆ.
ಇಂದು ನಗರದ ಪಕ್ಷದ ಜಿಲ್ಲಾಾ ಕಚೇರಿಯಲ್ಲಿ ಕೆಪಿಸಿಸಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಹಾಗೂ ರಾಯಚೂರು ಉಸ್ತುವಾರಿಯಾಗಿರುವ ಜಿನ್ನಾಾತ ಅವರ ಸಮ್ಮುಖದಲ್ಲಿ ನಡೆದ ಈ ವಾಗ್ವಾಾದ ಇರಿಸುಮುರಿಸು ತಂದಿತು.
ಕಾಂಗ್ರೆೆಸ್ ಜಿಲ್ಲಾಾ ಮಹಿಳಾಧ್ಯಕ್ಷೆೆ ನಿರ್ಮಲಾ ಬೆಣ್ಣಿಿಘಿ, ಸಮಿತಿಯ ಉಪಾಧ್ಯಕ್ಷೆೆ ಶ್ರೀದೇವಿ ಮಧ್ಯೆೆ ಗ್ಯಾಾರೆಂಟಿ ಯೋಜನೆಯ ಪ್ರಚಾರ ಕಾರ್ಯಕ್ರಮದಲ್ಲಿ ಆದ ವಿಚಾರಕ್ಕೆೆ ಸಂಬಂಧಿಸಿದಂತೆ ನಡೆದ ಮಾತು ವಾಗ್ವಾಾದಕ್ಕೆೆ ಕಾರಣವಾಯಿತು ಎಂದು ಗೊತ್ತಾಾಗಿದೆ.
ರಾಯಚೂರಿನ ವಾರ್ಡ್ 26ರಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆೆಘಿಯಾಗಿದ್ದ ತಮ್ಮನ್ನಷ್ಟೆೆ ಅಲ್ಲ ಜನಪ್ರತಿನಿಧಿಗಳಾದ ಮಹಿಳೆಯನ್ನೂ ಕರೆಯದೆ ಅವಮಾನಿಸಿದ್ದರ ಬಗ್ಗೆೆ ಅಧ್ಯಕ್ಷೆೆ ನಿರ್ಮಲಾ ಬೆಣ್ಣಿಿ ಅವರನ್ನು ಪ್ರಶ್ನಿಿಸಿದಾಗ ಮಾತು ಜೋರಾಗಿ ಸಾಗಿದವು. ಒಂದು ಹಂತದಲ್ಲಿ ನೀ..ನಾ ಎನ್ನುವ ಮಟ್ಟಿಿಗೆ ವಿಕೋಪಕ್ಕೆೆ ಹೋಗಿತ್ತಲ್ಲದೆ, ಅಧ್ಯಕ್ಷೆೆ ತಾಳ್ಮೆೆ ಕಳೆದುಕೊಂಡು ಶ್ರೀದೇವಿ ಅವರಿಗೆ ಹೊರಗೆ ಹೋಗು ಎಂದಾಗ ನಿನಗೆಷ್ಟು ಅಧಿಕಾರ ಇದೆಯೋ ಕಚೇರಿಯಲ್ಲಿರಲು ನನಗೂ ಇದೆ ಎಂದು ಏರು ಧ್ವನಿಯಲ್ಲಿ ವಾಗ್ವಾಾದ ನಡೆದಿರುವುದು ವೈರಲ್ ಆದ ವಿಡಿಯೋದಲ್ಲಿದೆ.
ಒಟ್ಟಾಾರೆ, ಜಿಲ್ಲಾಾಧ್ಯಕ್ಷೆೆಯಾಗಿರುವ ನಿರ್ಮಲಾ ಬೆಣ್ಣಿಿ ಅವರ ಈ ಏರು ಧ್ವನಿ, ಪದಾಧಿಕಾರಿಗಳ ಬಗ್ಗೆೆ ತೋರುತ್ತಿಿರುವ ತಾತ್ಸಾಾರದ ಬಗ್ಗೆೆ ಸಭೆಯಲ್ಲಿದ್ದವರೂ ಪರಸ್ಪರರು ಅಸಮಾಧಾನ ವ್ಯಕ್ತಪಡಿಸಿದ್ದಾಾರೆ ಎಂದು ಮೂಲಗಳು ತಿಳಿಸಿವೆ.