ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ನ. 07 : ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಶಿಡ್ಲಘಟ್ಟ ತಾಲೂಕು ಸಮಿತಿ ವತಿಯಿಂದ ಬಿಸಿ ಊಟದ ನೌಕರರು ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನ ಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತಾಲ್ಲೂಕು ಅಧ್ಯಕ್ಷರಾದ ಮುನಿಲಕ್ಷ್ಮಮ್ಮ ಮಾತನಾಡಿ, ನಮ್ಮ ಮಹಿಳೆಯರು 18 ವರ್ಷಗಳಿಂದ ಕನಿಷ್ಠ ವೇತನ 300 ರೂ.ಗಳಿಂದ ಕೆಲಸ ಮಾಡಿದ್ದಾರೆ. ಈಗಲೂ ನಮಗೆ ಸಿಗುತ್ತಿರುವ ವೇತನ 3600 ರೂ., 558 ಮಹಿಳೆಯರು ಕೆಲಸ ಮಾಡುತ್ತಿದ್ದೇವೆ. ಆದರೆ ನಮಗೆ ಕೊಡುವಂತ ಕೆಲಸದ ಒತ್ತಡ ಹೆಚ್ಚಾಗಿದೆ. ನಮಗೆ ಸಿಗುತ್ತಿರುವ ವೇತನ ನಮ್ಮ ಜೀವನ ಮಾಡಲಿಕ್ಕೆ ಸಿಗುತ್ತಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಮುನಿಲಕ್ಷ್ಮಮ್ಮ, ಮಂಜುಳಮ್ಮ,ಶಾಂತ,ಭವಾನಿ, ಯಶೋದಮ್ಮ,ಕವಿತಾ ಮುಂತಾದವರು ಹಾಜರಿದ್ದರು.