ಸುದ್ದಿಮೂಲ ವಾರ್ತೆ ರಾಯಚೂರು, ಅ.09:
ರಾಯಚೂರು ನಗರದ ವಿದ್ಯಾಾಭಾರತಿ ಶಾಲೆ ಬಳಿಯ ರೈಲ್ವೆೆ ಒಳ ಸೇತುವೆಯಲ್ಲಿ ಶಾಶ್ವತವಾಗಿ ನೀರು ತೆರವುಗೊಳಿಸಲು ಒತ್ತಾಾಯಿಸಿ ಸಾರ್ವಜನಿಕರು, ವಿದ್ಯಾಾರ್ಥಿಗಳು ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.
ಇಂದು ಬೆಳಿಗ್ಗೆೆ ನಗರದ ವಿದ್ಯಾಾಭಾರತಿ ಶಾಲೆ ಬಳಿಯ ರೈಲ್ವೆೆ ಸೇತುವೆ ಬಳಿ ದಿಢೀರ್ನೆ ವಿದ್ಯಾಾರ್ಥಿಗಳು, ಆ ಮೂಲಕ ಸಾಗುವ ಸಾರ್ವಜನಿಕರು ಸೇತುವೆ ಹೊರ ಭಾಗದಲ್ಲಿ ನಿಂತು ಪ್ರತಿಭಟಿಸಿ ಆಕ್ರೋೋಶ ವ್ಯಕ್ತಪಡಿಸಿದರು.
ಪ್ರತಿ ದಿನವೂ ಸೇತುವೆ ಕೆಳಗಡೆ ನಿರಂತರವಾಗಿ ಗಲೀಜು ಚರಂಡಿ ನೀರು ನಿಲ್ಲುತ್ತಿಿದೆ. ಈ ಬಗ್ಗೆೆ ಹಲವು ಬಾರಿ ಪಾಲಿಕೆಯ ಆಯುಕ್ತರಿಗೆ, ವಾರ್ಡಿನ ಸದಸ್ಯರಿಗೂ ಗಮನಕ್ಕೆೆ ತರಲಾಗಿದ್ದರೂ ಚರಂಡಿ ನೀರು ನಿಲುಗಡೆಯಾಗುವುದು ನಿಂತಿಲ್ಲ ಎಂದು ದೂರಿದರು.
ಆಟೋ, ದ್ವಿಿಚಕ್ರ ವಾಹನದಲ್ಲಿ ಸಂಚರಿಸುವಾಗ ಚರಂಡಿ ನೀರು ತಮ್ಮ ಸಮವಸಗಳಿಗೆ ತಾಕಿ ಬಟ್ಟೆೆ ಗಲೀಜಾಗುತ್ತಿಿದೆ, ನಿಂತ ನೀರಲ್ಲಿ ಆಟೋ ದುರಸ್ತಿಿಗೆ ಬಂದು ಸಿಲುಕಿಕೊಂಡು ನಿಂತಾಗ ಅದರಲ್ಲಿಯೇ ನಡೆದು ಹೋದಾಗ ಜ್ವರ ಬಂದ ಪ್ರಸಂಗಗಳಿವೆ. ದುರ್ವಾಸನೆಯಿಂದ , ವಾಹನಗಳು ಹೋಗುವಾದ ಆ ನೀರು ಸಿಡಿದು ಸಮಸ್ಯೆೆ ಅನುಭವಿಸುತ್ತಿಿದ್ದೇವೆ ಎಂದು ದೂರಿದರು.
ತಕ್ಷಣ ಸೇತುವೆ ಕೆಳ ಭಾಗದಲ್ಲಿ ಗಲೀಜು ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಶಾಶ್ವತವಾಗಿ ಸಮಸ್ಯೆೆ ಪರಿಹರಿಸಲು ಪಾಲಿಕೆಯ ಆಯುಕ್ತರು, ಸಂಬಂಧಿಸಿದ ಇಲಾಖೆಯವರು ಸ್ಪಂದಿಸಲು ಕೋರಿದರು.