ಸುದ್ದಿಮೂಲ ವಾರ್ತೆ ಸಿಂಧನೂರು, ಅ.02:
ಮಳೆಯಿಂದ ಹಾನಿಯಾದ ತಾಲೂಕಿನ ದಿದ್ದಿಗಿ, ರಾಮತ್ನಾಾಳ, ಬನ್ನಿಿಗನೂರು, ಯಾಪಲಪರ್ವಿ, ವಲ್ಕಂದಿನ್ನಿಿ, ರಾಗಲಪರ್ವಿ, ಪುಲದಿನ್ನಿಿ, ದುಮತಿ, ಗೋನ್ವಾಾರ, ಹುಲಗುಂಚಿ ಮತ್ತು ಆಯನೂರು ಗ್ರಾಾಮಗಳಿಗೆ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಪರಿಷತ್ ಶಾಸಕರು, ಕೂಡಲೇ ಜಂಟಿ ಸರ್ವೇ ನಡೆಸಿ ಜಿಲ್ಲಾಾಧಿಕಾರಿಗಳ ಮೂಲಕ ಸರಕಾರಕ್ಕೆೆ ವರದಿ ಸಲ್ಲಿಸುವಂತೆ ಸೂಚಿಸಿದರು. ನಂತರ ರೈತರೊಂದಿಗೆ ಚರ್ಚಿಸಿದ ಬಸನಗೌಡ ಬಾದರ್ಲಿ ಅವರು, ಬೆಳೆಹಾನಿ ವರದಿ ಸರಕಾರಕ್ಕೆೆ ಸೇರುತ್ತಿಿದ್ದಂತೆ ಮುಖ್ಯಮಂತ್ರಿಿ, ಉಪಮುಖ್ಯಮಂತ್ರಿಿ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕೊಡಿಸಲು ಪ್ರಾಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ವೆಂಕಟೇಶ ರಾಗಲಪರ್ವಿ, ಶರಣಯ್ಯ ಸ್ವಾಾಮಿ ಕೋಟೆ ಸೇರಿದಂತೆ ರೈತರು, ಅಧಿಕಾರಿಗಳು ಇದ್ದರು.
ಬಸನಗೌಡ ಬಾದರ್ಲಿಯಿಂದ ಬೆಳೆಹಾನಿ ವೀಕ್ಷಣೆ
