ಸುದ್ದಿಮೂಲ ವಾರ್ತೆ ಕಲಬುರಗಿ, ಸೆ.30:
ಕಳೆದ ಎರಡು ತಿಂಗಳಿಂದ ಕಲ್ಯಾಾಣ ಕರ್ನಾಟಕದಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿ ತೊಗರಿ, ಹತ್ತಿಿ, ಸೋಯಾ ಸೇರಿದಂತೆ ಇತರ ಬೆಳೆಗಳು ಶೇ.80ರಷ್ಟು ನಾಶವಾಗಿದೆ. ಬೆಳೆ ನಷ್ಟ ಅನುಭವಿಸಿರುವ ರೈತರು ದಿಕ್ಕುತೋಚದೆ ಸರ್ಕಾರದತ್ತ ನೋಡುತ್ತಿಿದ್ದಾರೆ. ರೈತರ ತಾಳ್ಮೆೆ ಪರೀಕ್ಷೆ ಮಾಡದೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಿ, ಪ್ರತಿ ಎಕರೆಗೆ ಕನಿಷ್ಠ 25 ರಿಂದ 30 ಸಾವಿರ ರೂ ನೀಡಬೇಕು ಎಂದು ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರಿನಲ್ಲಿ ರೈತರ ಜೀವನ ಕಂಗಾಲಾಗಿದೆ. ರೈತರು ಸರ್ಕಾರದತ್ತ ನಿರೀಕ್ಷೆಯಿಂದ ನೋಡುತ್ತಿಿದ್ದಾರೆ. ಎಲ್ಲ ಉಸ್ತುವಾರಿ ಸಚಿವರು ಬೆಂಗಳೂರಲ್ಲಿ ಕುಳಿತು ಸಿಎಂಗೆ ಮನವಿ ಸಲ್ಲಿಸುವುದೇ ಆಗಿದೆ ಎಂದು ಜಿಲ್ಲಾ ಉಸ್ತುವಾರಿ, ಕಂದಾಯ ಹಾಗೂ ಕೃಷಿ ಸಚಿವರ ವಿರುದ್ಧ ವಾಗ್ದಾಾಳಿ ನಡೆಸಿದ ಅವರು, ಈ ಸಚಿವರು ಬೆಂಗಳೂರಿನ ಎಸಿ ಕೋಣೆಯಲ್ಲಿ ಕೂತು ಮಾತಾಡುವುದನ್ನು ಬಿಟ್ಟು, ರೈತರ ನೋವನ್ನು ಅರಿಯಲು ಹೊಲಗಳಿಗೆ ಇಳಿಯಬೇಕು. ಕೆಲ ದಿನಗಳಾದರೂ ಬೆಂಗಳೂರಿಗೆ ಬಾರದಂತೆ ಮುಖ್ಯಮಂತ್ರಿಿ ಸೂಚಿಸಬೇಕು ಎಂದು ಹೇಳಿದರು.
ಉಸ್ತುವಾರಿ ಸಚಿವರನ್ನು ಎಸಿ ರೂಂನಿಂದ ಹೊರದಬ್ಬಿಿ, ಎಲ್ಲ ತಾಲೂಕುಗಳಲ್ಲಿ ಭೇಟಿ ನೀಡಲು ಕಡ್ಡಾಾಯಗೊಳಿಸಬೇಕು. ರೈತರ ತಾಳ್ಮೆೆ ಪರೀಕ್ಷೆ ಮಾಡಬೇಡಿ, ತಕ್ಷಣ ಪರಿಹಾರ ನೀಡಿ ಎಂದು ಹೇಳಿದ ಅವರು, ಹೆಲಿಕಾಪ್ಟರ್ನಲ್ಲಿ ಕುಳಿತು ವೈಮಾನಿಕ ಸಮೀಕ್ಷೆ ಮಾಡುವುದಾದರೆ, ಸಚಿವರು, ಜನಪ್ರತಿನಿಧಿಗಳು ಇರಬೇಕಾದ ಅರ್ಥವೇನು ಎಂದು ಪ್ರಶ್ನಿಿಸಿದರು.
ರಾಜ್ಯ ಸರ್ಕಾರ ಕೇಂದ್ರದಿಂದ ಎನ್ಡಿಆರ್ಎ್ ಪ್ರಕಾರ ಬರುವ ನೆರವಿನ ಬಗ್ಗೆೆ ತಪ್ಪುು ಪ್ರಚಾರ ಮಾಡದೆ, ರಾಜ್ಯ ಸರ್ಕಾರ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಿಯಾಗಿದ್ದಾಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದರು, ಎನ್ಡಿಆರ್ಎ್ ಪರಿಹಾರ ಬರುವ ಕೂಡಲೇ ರೈತರಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ ಘೋಷಿಸಿದರು. ಅದು ಯಡಿಯೂರಪ್ಪ ಅವರಿಗೆ ರೈತರ ಬಗ್ಗೆೆ ಕಾಳಜಿ ಹಾಗೂ ಗೌರವ ಇತ್ತು. ಹೀಗಾಗಿ, ಪರಿಹಾರ ತಕ್ಷಣವೇ ನೀಡಿದರು. ಈಗ ಸಿದ್ದರಾಮಯ್ಯ ಅಂತಹ ಧೈರ್ಯ ತೋರಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

