ಸುದ್ದಿಮೂಲ ವಾರ್ತೆ
ಮೈಸೂರು, ನ.12:ವಿಜಯೇಂದ್ರ ಅವರು ಬರುವ ಜೂನ್ ನಂತರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲ್ಲ. ಇದು ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಯಿಂದ ದೂರ ಉಳಿಯಿತು.. ಆಗಾಗಿ ಮತ್ತೆ ಲೋಕಸಭೆಯಲ್ಲಿ ವೀರಶೈವ ಲಿಂಗಾಯತ ಮತಗಳ ಕ್ರೋಢಿಕರಣಕ್ಕೆ ಮುಂದಾಗಿದ್ದಾರೆ. ನರೇಂದ್ರ ಮೋದಿ,ಅಮಿತ್ ಶಾ,ಬಿ ಎಲ್ ಸಂತೋಷ್ ರವರ ತಂತ್ರಗಾರಿಕೆ, ಜೂನ್ ನಂತರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲ್ಲ ಎಂದು ಭವಿಷ್ಯ ನುಡಿದರು.
ಬಿಜೆಪಿ ಅನೇಕ ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನ ಮೂಲೆ ಗುಂಪು ಮಾಡಲಾಯಿತು. ಮಾಜಿ ಸಚಿವರಾದಸೋಮಣ್ಣ,ಯತ್ನಾಳ್,ಬಿಸಿ ಪಾಟೀಲ್,ಮುರುಗೇಶ್ ನಿರಾಣಿ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರನ್ನ ಮೂಲೆ ಗುಂಪು ಮಾಡಲಾಯಿತು. ಈಗ ವಿಜಯೇಂದ್ರರನ್ನ ಮುಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಜನ 2024 ರ ಚುನಾವಣೆಗಾಗಿ ಕಾಯುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ದಿನೇ ದಿನೇ ಮೋದಿಯವರ ವರ್ಚಸ್ಸು ಕುಸಿಯುತ್ತಿದೆ. ಯಡಿಯೂರಪ್ಪ ಅವರು ತುಮಕೂರಿನ ಹಳ್ಳಿಯಲ್ಲಿ ಬರ ಅಧ್ಯಯನ ಮಾಡಿದ್ದು ಒಂದುವರೆ ನಿಮಿಷ.ಇದು ಇವರ ಬರ ಅಧ್ಯಯನ ನಾಚಿಕೆ ಆಗಬೇಕು ಬಿಜೆಪಿ ಯವರಿಗೆ. ಕರ್ನಾಟಕದಲ್ಲಿ 26 ಜನ ಎಂ.ಪಿ ಗಳಿದ್ದು ನರೇಂದ್ರ ಮೋದಿಗೆ ಬರದ ವಿಚಾರವಾಗಿ ಒಂದು ಪತ್ರ ಬರೆಯುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ಮುಖಂಡರು ಕೂಡ ಬರ ಅಧ್ಯಯನಕ್ಕೆ ಮುಂದಾಗಿದ್ದಾರೆ. ಕುಮಾರಸ್ವಾಮಿ ದೇವೇಗೌಡರಿಗೆ ಬಿಜೆಪಿ ಹೈಕಮಾಂಡ್ ಸುಲಭವಾಗಿ ಸಿಗುತ್ತಾರೆ. ಕೇಂದ್ರ ಬಳಿ ಮಾತನಾಡಿ ರಾಜ್ಯಕ್ಕೆ ಬರ ಪರಿಹಾರ ಕೊಡಿಸಬೇಕು ಎಂದು ಹೇಳಿದರು.