ಸುದ್ದಿಮೂಲ ವಾರ್ತೆ ಸಿಂಧನೂರು , ಜ.06:
ತಾಲೂಕಿನ ಅಂಬಾಮಠದಲ್ಲಿ ಹಮ್ಮಿಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಾಪನೆ ಹಾಗೂ ಉದ್ಘಾಾಟನಾ ಕಾರ್ಯಕ್ರಮಕ್ಕೆೆ ತಮ್ಮನ್ನು ಆಹ್ವಾಾನಿಸಿ, ವೇದಿಕೆಗೆ ಅವಕಾಶ ನೀಡದೇ ಅಪಮಾನ ಮಾಡಿದ್ದಾಾರೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒಳಬಳ್ಳಾಾರಿ ಗ್ರಾಾ.ಪಂ.ಅಧ್ಯಕ್ಷೆ ಮೂಕಾಂಬಿಕೆ ಒತ್ತಾಾಯಿಸಿದ್ದಾಾರೆ.
ಅವರಿಂದು ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು. ಅಂಬಾಮಠದಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ಜ-3 ರಂದು ಸಾಲಗುಂದಾ ಏತ ನೀರಾವರಿ ಯೋಜನೆ, ಮುಳ್ಳೂರು ಏತ ನೀರಾವರಿ ಹಾಗೂ ಒಳಬಳ್ಳಾಾರಿ ಹತ್ತಿಿರ 43 ಕೋಟಿ ವೆಚ್ಚದ ಬ್ರಿಿಡ್ಜ್ ಕಂ ಬ್ಯಾಾರೇಜ್ ನಿರ್ಮಾಣಕ್ಕೆೆ ಮುಖ್ಯಮಂತ್ರಿಿಗಳು ಶಂಕುಸ್ಥಾಾಪನೆ ನೆರವೇರಿಸಿದರು. ಈ ಕಾರ್ಯಕ್ರಮಕ್ಕೂ ಮುನ್ನ ಜಲಸಂಪನ್ಮೂಲ ಇಲಾಖೆಯ ಇಇ ಸತ್ಯನಾರಾಯಣ ಶೆಟ್ಟಿಿ ಅವರು ಅಧಿಕೃತವಾಗಿ ಆಹ್ವಾಾನ ಪತ್ರಿಿಕೆ ನೀಡಿ ಆಹ್ವಾಾನಿಸಿದ್ದರು. ಶಿಲಾನ್ಯಾಾಸದ ಕಲ್ಲಿನಲ್ಲೂ ಹೆಸರು ಹಾಕಲಾಗಿದೆ. ನಿಗದಿತ ಸಮಯಕ್ಕೆೆ ವೇದಿಕೆಯ ಹತ್ತಿಿರ ಹೋದರೆ ಮುಖ್ಯಮಂತ್ರಿಿಗಳ ಕಾರ್ಯಕ್ರಮ ನಿಮಗೆ ಅವಕಾಶವಿಲ್ಲ. 3 ತಾಸು ನಿಂತರೂ ಅವಕಾಶ ನೀಡಲಿಲ್ಲ. ಪಾಸ್ ಇದ್ದರೆ ತೋರಿಸಿ ಎಂದು ಪೊಲೀಸರು ತಡೆದರು. ಅಧಿಕೃತ ಆಹ್ವಾಾನ ಪತ್ರಿಿಕೆ ತೋರಿಸಿದರೂ ಬಿಡದೇ ಅಪಮಾನ ಮಾಡಿದ್ದಾಾರೆ. ನಾವು ತಳ ಜಾತಿಗೆ ಸೇರಿಸಿದ್ದಾಾರೆ ಎನ್ನುವ ಕಾರಣಕ್ಕೆೆ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಮುಖ್ಯ ಮಂತ್ರಿಿಗಳ ಕಾರ್ಯಕ್ರಮ ವಾಗಿದ್ದರೂ ಶಿಷ್ಠಾಾಚಾರದನ್ವಯ ಕಾರ್ಯಕ್ರಮಕ್ಕೆೆ ನಮ್ಮನ್ನು ಆಹ್ವಾಾನಿಸಿ ವೇದಿಕೆಗೆ ಅವಕಾಶ ನೀಡದೇ ಅವಮಾನ ಮಾಡಲಾಗಿದೆ. ಇದಕ್ಕೆೆ ತಹಶೀಲ್ದಾಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನೇರ ಹೊಣೆಗಾರರಾಗಿದ್ದಾಾರೆ. ದಸರಾ ಉತ್ಸವದ ಸಂದರ್ಭದಲ್ಲಿ ಬೆಂಗಾಲಿ ಕ್ಯಾಾಂಪಿನಲ್ಲಿ ಕಾರ್ಯಕ್ರಮಕ್ಕೆೆ ಆಹ್ವಾಾನಿಸಿಯೂ ಅಪಮಾನ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ಹೋರಾಟಕ್ಕಿಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಾಳ, ನಗರ ಮಂಡಲ ಅಧ್ಯಕ್ಷ ಸಿದ್ದರಾಮೇಶ ಮನ್ನಾಾಪುರ, ಮುಖಂಡರಾದ ಭೀಮಣ್ಣ ನಾಯಕ, ಚಿದಾನಂದಪ್ಪ ಜವಳಗೇರಾ ಹಾಗೂ ಇತರರು ಇದ್ದರು.
ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಗ್ರಾ.ಪಂ.ಅಧ್ಯಕ್ಷೆ ಮೂಕಾಂಬಿಕ ಒತ್ತಾಯ

