ಸುದ್ದಿಮೂಲ ವಾರ್ತೆ
ಹೊಸಕೋಟೆ ಸೆ.23:ರೈತರು ಶುಚಿತ್ವ ಕಾಪಾಡಿಕೊಂಡು ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಆದ್ಯತೆ ನೀಡಬೇಕು ಎಂದು ವಿಸ್ತರಣಾಧಿಕಾರಿ ವಿನಯ್ ಕುಮಾರ್ ತಿಳಿಸಿದರು.
ತಾಲೂಕಿನ ದಬ್ಬಗುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಹೊಸಕೋಟೆ ಶಿಬಿರದ ವಿಸ್ತರಣಾಧಿಕಾರಿ ವಿನಯ್ ಕುಮಾರ್ ಮಾತನಾಡಿ, ಹಾಲು ಉತ್ಪಾದಕ ಸಂಘಗಳು ಲಾಭದಾಯಕವಾಗಿ ನಡೆಯಬೇಕಾದರೆ ರೈತರು ವೈಜ್ಞಾನಿಕ ರೀತಿಯಲ್ಲಿ ಹಾಲು ಉತ್ಪಾದನೆ ಮಾಡಬೇಕು. ಜೊತೆಗೆ ಒಕ್ಕೂಟದಿಂದ ದೊರೆಯುವ ಸಹಾಯಧನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷರಾದ ವಿ.ನಾರಾಯಣಪ್ಪ ಮಾತನಾಡಿ, ನಮ್ಮ ಗ್ರಾಮದ ಷೇರುದಾರರ ಸಹಕಾರದಿಂದ 10 ಲಕ್ಷ ಲಾಭದಲ್ಲಿದ್ದು, ಈ ವರ್ಷ ಒಂದು ಲಕ್ಷದಷ್ಟು ಬೋನಸ್ ಸಹ ಲಭಿಸಿದೆ. ಸಂಘದ ಲಾಭದಿಂದಲೇ ಕಟ್ಟಡ ನಿರ್ಮಿಸಿದ್ದು ಸಂಘವನ್ನು ನಡೆಸಿಕೊಂಡು ಬಂದಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ನಾರಾಯಣಪ್ಪ, ನಿರ್ದೇಶಕ ವೆಂಕಟೇಶಪ್ಪ, ಮುನಿಯಪ್ಪ, ರವಿಕುಮಾರ್, ರಾಮಕೃಷ್ಣಪ್ಪ, ಕೆಂಚಪ್ಪ, ಶ್ರೀನಿವಾಸ, ಗೋವಿಂದಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಕೆಂಚಪ್ಪ ಉಪಸ್ಥಿತರಿದ್ದರು.