ಸುದ್ದಿಮೂಲ ವಾರ್ತೆ ರಾಯಚೂರು , ಡಿ.13:
ರಾಯಚೂರು ನಗರದ ಸೌಂದರ್ಯಿಕರಣ ಹಾಗೂ ಪರಿಸರ ಹಸಿರಾಗಿಸಲು ರಸ್ತೆೆಯ ವಿಭಜಕದಲ್ಲಿ ನೆಟ್ಟಿಿರುವ ಕೋನೋ ಕಾರ್ಪಸ್ ಗಿಡಗಳು ಜನರ ಉಸಿರಿಗೆ ಕಂಟಕವಾಗಿದ್ದು ಕೂಡಲೇ ಇವುಗಳನ್ನು ಮಹಾನಗರ ಪಾಲಿಕೆ ತೆರವುಗೊಳಿಸಬೇಕು ಎಂದು ಪರಿಸರ ಪ್ರೇಮಿ ವಿನಾಯಕ್ ಆಗ್ರಹಿಸಿದ್ದಾಾರೆ.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಮಂತ್ರಾಾಲಯದ ರಸ್ತೆೆಯಿಂದ ಹಿಡಿದು ಲಿಂಗಸೂಗೂರು ರಸ್ತೆೆಯ ಕೊನೆಯವರೆಗೂ ರಸ್ತೆೆ ವಿಭಜಕದ ಮಧ್ಯೆೆ ಅರಣ್ಯ ಇಲಾಖೆ ಮತ್ತು ಅಂದಿನ ನಗರಸಭೆಯಿಂದ ಅಪಾಯಕಾರಿ ಸಸಿ ನೆಡಲಾಗಿದ್ದು ಕೋನೋ ಕಾರ್ಪಸ್ ಎಂಬ ಸಸ್ಯಗಳಿಂದ ಪರಿಸರಕ್ಕೆೆ ಹಾಗೂ ಮನುಷ್ಯರಿಗೆ ತೊಂದರೆ ಉಂಟಾಗುತ್ತಿಿರುವ ಮಾಹಿತಿ ಇದೆ. ಈ ಸಸ್ಯಗಳನ್ನು ನೆರೆಯ ರಾಜ್ಯವಾದ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ತೆಲಂಗಾಣ ಹಾಗೂ ಗುಜರಾತ್ಗಳಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲಿಯೂ ನಿಷೇಧಿಸಲಾಗಿದೆ ಇಂತಹ ಸಸಿಗಳ ಬೆಳೆಸಿರುವುದು ಸರಿಯಲ್ಲ ಎಂದು ದೂರಿದರು.
ಈ ಸಸಿಗಳಿಂದ ಅಲರ್ಜಿ, ರೋಗದ ಭೀತಿ ಇದೆ ಜಿಲ್ಲೆಯಲ್ಲಿ ಉತ್ತಮ ಪರಿಸರ ನಿರ್ಮಿಸುವುದರ ಜತೆಗೆ ನಗರದ ಸೌಂದರ್ಯಕ್ಕಾಾಗಿ ಹಲವೆಡೆ ಸಸಿಗಳ ನೆಟ್ಟು ಪೋಷಣೆ ಮಾಡಲಾಗುತ್ತಿಿದೆ. ಪರಿಸರಕ್ಕೆೆ ಪೂರಕವಾದ ಹಾಗೂ ಉಪಯೋಗಕ್ಕೆೆ ಬರುವಂತಹ ಗಿಡಗಳ ನೆಡುವ ಬದಲಿಗೆ ಪಾಲಿಕೆಯವರು, ಅರಣ್ಯ ಇಲಾಖೆಯವರು ಪರಿಸರಕ್ಕೆೆ ಹಾಗೂ ಜೀವಕ್ಕೆೆ ಮಾರಕವಾಗುವ ಸಸಿಗಳನ್ನು ನೆಟ್ಟು ಪೋಷಿಸುವುದು ಎಷ್ಟರ ಮಟ್ಟಿಿಗೆ ಸರಿ ಕೂಡಲೇ ಇವುಗಳನ್ನು ತೆರವುಗೊಳಿಸಿ ಉತ್ತಮ ಸಸಿಗಳನ್ನು ನೆಡಬೇಕೆಂದು ಒತ್ತಾಾಯಿಸಿದರು.
ಸುದ್ದಿಗೋಷ್ಠಿಿಯಲ್ಲಿ ನರೇಂದ್ರಘಿ, ಅಭಿಲಾಷ್ , ರಘು , , ಗೌತಮ್ , ರಾಮು ಇದ್ದರು.
ರಸ್ತೆ ವಿಭಜಕದಲ್ಲಿ ಬೆಳೆದ ಕೋನೋಕಾರ್ಪಸ್ ಗಿಡಕಿತ್ತು ಹಾಕಿ – ವಿನಾಯಕ್

