ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.30: ವಾರ್ತಾ ಇಲಾಖೆಯ ಆಯುಕ್ತರಾಗಿ ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಆರ್. ಅವರನ್ನು ನೇಮಿಸಿ ಆದೇಶಿಸಲಾಗಿದೆ.
ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ಡಿ.ಪಿ. ಮುರಳೀಧರ್ ಇಂದು ಸೇವೆಯಿಂದ ನಿವೃತ್ತರಾದ ಕಾರಣ ಇಲಾಖೆಗೆ ನಿರ್ದೇಶಕರ ಬದಲಾಗಿ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿನೋತ್ ಪ್ರಿಯಾ ಅವರನ್ನು ಹೊಸದಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಈ ಹಿಂದೆ ಈ ಹುದ್ದೆಯಲ್ಲಿ ಐಪಿಎಸ್ ಅಧಿಕಾರಿ ಡಾ.ಪಿ. ಹರ್ಷ ಇದ್ದರು. ಎರಡು ವರ್ಷಗಳ ಕಾಲ ಸುಧೀರ್ಘ ರಜೆ ಹಿನ್ನೆಲೆಯಲ್ಲಿ ಖಾಲಿ ಇದ್ದ ಆ ಹುದ್ದೆಯ ಹೊಣೆಯನ್ನು ನಿರ್ದೇಶಕರಾಗಿದ್ದ ಡಿ.ಪಿ. ಮುರಳೀಧರ್ ಅವರೇ ನಿರ್ವಹಿಸುತ್ತಿದ್ದರು. ಆದರೆ, ಈಗ ಆಯುಕ್ತರ ಜಾಗಕ್ಕೆ ವಿನೋತ್ ಪ್ರಿಯಾ ಅವರನ್ನು ನೇಮಿಸಲಾಗಿದೆ.
ಐ.ಆರ್. ವಿಠ್ಠಲ ಮೂರ್ತಿ, ಬಿ.ಎ. ಜಗದೀಶ್ ಬಳಿಕ ಆಯುಕ್ತರ ಹುದ್ದೆಗೆ ನೇಮಕವಾದ ಐಎಎಸ್ ದರ್ಜೆಯ ಅಧಿಕಾರಿಯಾಗಿದ್ದಾರೆ.