ಸುದ್ದಿಮೂಲ ವಾರ್ತೆ
ಬೇತಮಂಗಲ, ಜು.10 : ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ನಿಷೇಧ ಕಾಯ್ದೆಗಳನ್ನು ಹಿಂಪಡೆದರೆ ಉಗ್ರ ಹೋರಾಟ ನಡೆಸುವುದಾಗಿ ಮಾಜಿ ಶಾಸಕ ವೈ,ಸಂಪಂಗಿ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗೋವನ್ನು ತಾಯಿಯ ರೂಪದಲ್ಲಿ ಕಾಣಬೇಕು. ರೈತರ ಕೃಷಿ ಚಟುವಟಿಕೆಗಳಲ್ಲಿ ಗೋವುಗಳು ಬಹಳ ಮುಖ್ಯ ಪಾತ್ರವಹಿಸುತ್ತವೆ ಗೋವಿನಲ್ಲಿ ಮುಕ್ಕೋಟಿ ದೇವುರಗಳನ್ನು ಕಾಣುತ್ತೇವೆ ಮತ್ತು ಅವುಗಳನ್ನು ಸಂರಕ್ಷಣೆ ಮಾಡವುದು ನಮ್ಮ ಕರ್ತವ್ಯ ಎಂದರು.
ಕಾಂಗ್ರೆಸ್ಸಿಗರೂ ಯಾವಾಗಲು ಹಿಂದುಗಳ ಭಾವನೆಗಳನ್ನು ವಿರೋದಿಸುತ್ತಲೇ ಬಂದಿದ್ದಾರೆ. ಕಾಂಗ್ರೆಸ್ಸಿಗರಿಗೆ ಜನರೇ ಉತ್ತರ ಕೊಡುತ್ತಾರೆ. ಬಿಜೆಪಿ ಸರ್ಕಾರ ಅದಿಕಾರದಲ್ಲಿ ಇದ್ದಾಗ ಗೋಹತ್ಯೆ ಮತ್ತು ಮತಾಂತರ ಕಾಯ್ದೆ ನಿಷೇಧ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಗೋಹತ್ಯೆ ಮತ್ತು ಮತಾಂತರ ನಿಷೇದ ಕಾಯ್ದೆ ವಾಪಸ್ ಪಡೆಯಲು ಹೆಜ್ಜೆ ಇಟ್ಟಿದೆ. ಇದನ್ನು ನಾವು ಒಪ್ಪುವುದಿಲ್ಲ ಒಂದು ವೇಳೆ ವಾಪಸ್ ಪಡೆದರೆ ಪಕ್ಷದ ನಾಯಕರು ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಮ್ಮಸಂದ್ರ ಗ್ರಾಪಂ ಮಾಜಿ ಉಪಾದ್ಯಕ್ಷ ದಾಮೊದರ್ ರೆಡ್ಡಿ, ಮುಖಂಡರಾದ ಶಿವಣ್ಣ, ನರಸಿಂಹಗೌಡ, ಮುನಿಯಪ್ಪ, ನಾರಾಯಣಸ್ವಾಮಿ, ಅಮರೇಶ, ಸುಬ್ಬು, ತಿಪ್ಪನ್ನ, ಸುರೇಶ್, ಶ್ರೀರಾಮಪ್ಪ, ಮುರಳಿ, ಸೇರಿದಂತೆ ಉಪಸ್ಥಿತರಿದ್ದರು.