ಸುದ್ದಿಮೂಲ ವಾರ್ತೆ ,
ಹೊಸಪೇಟೆ (ವಿಜಯನಗರ) ಏ೦೭ : ದಕ್ಷಿಣದ ಕಾಶಿ, ವಿಶ್ವ ಪಾ ರಂಪರಿಕ ತಾಣ, ವಿಶ್ವಪ್ರ ಸಿದ್ಧ ಹಂಪಿ ರಥಬೀದಿಯಲ್ಲಿ ಗುರುವಾರ ಸಂಜೆ ಪಂಪಾ ವಿರೂಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವ ಸಡಗರ, ಸಂಭ್ರಮದ ನಡುವೆ ಜರುಗಿತು.
ರಥೋತ್ಸವಗಳನ್ನು ನೋಡಲು ಭಕ್ತರು ಬಂಡೆಗಲ್ಲುಗಳು, ಮಂಟಪಗಳು ಹಾಗೂ ಸ್ಮಾರಕಗಳ ಮೇಲೆ ಕುಳಿತು ಕೊಂ ಡು ಉರಿ ಬಿಸಿಲು ಲೆಕ್ಕಿಸದ ಭಕ್ತಾದಿಗಳು ರ ಥೋತ್ಸವ ವನ್ನು ಕಣ್ತುಂಬಿಕೊಂಡರು. ರಥಬೀದಿಯಲ್ಲಿ ತೇರುಗಳನ್ನು ಎಳೆಯುತ್ತಿ ದ್ದಂತೆ ಭಕ್ತರಿಂದ ಜಯಘೋಷ ಮುಗಿಲು ಮುಟ್ಟಿತು.
ಭಕ್ತರು ಬಾಳೆಹಣ್ಣು, ಉತ್ತತ್ತಿಯನ್ನು ತೇರಿನ ಮೇಲೆ ತೂರಿ ಹರಕೆ ತೀರಿಸಿದರು. ರಥೋತ್ಸವದ ಅಂಗವಾಗಿ ಬೆಳಿಗ್ಗೆ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ತುಂಗಭ ದ್ರೆಯಲ್ಲಿ ಮಿಂದೆದ್ದು, ದೇವರ ದರ್ಶನ ಪಡೆದರು. ದೇಗು ಲದ ಆವರಣದಲ್ಲಿ ಮಡಿ ತೇರು ಎಳೆದರು. ಎರಡು ತೇರು ಗಳ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳಿಂದ ರಥಬೀದಿ ತುಂಬಿ ತುಳುಕುತ್ತಿತ್ತು.
ಪ್ರತಿವರ್ಷದಂತೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪಂಪಾ ವಿರೂಪಾಕ್ಷೇಶ್ವ ರ ಸ್ವಾಮಿ ಹಾಗೂ ಚಂದ್ರಮೌ ಳೇಶ್ವರ ಸ್ವಾಮಿ ಪಟವನ್ನು ಹರಾಜಿನಲ್ಲಿ ಬಿಜೆಪಿ ಯುವ ನಾಯಕ ವಿಜಯನಗರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಅವರು ₹1.8 ಲಕ್ಷ ಹಾಗೂ ₹99 ಸಾವಿರಕ್ಕೆ ಕ್ರಮವಾಗಿ ತನ್ನದಾಗಿಸಿಕೊಂಡರು.