ುದ್ದಿಮೂಲ ವಾರ್ತೆ ಸಿಂಧನೂರು, ನ.02:
ತುಂಗಭದ್ರಾಾ ಎಡದಂಡೆ ನಾಲೆ ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಿಲ್ಲ. ರೈತರ ಹಿತಕ್ಕಾಾಗಿ ಜವಾಬ್ದಾಾರಿಯಿಂದ ನೀರು ಕೊಡಿಸಲು ಪ್ರಯತ್ನ ಮಾಡುತ್ತಿಿದ್ದೇವೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಶಾಸಕ ಹಂಪನಗೌಡ ಬಾದರ್ಲಿಗೆ ತಿರುಗೇಟು ನೀಡಿದರು.
ಭಾನುವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಜಂಟಿ ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದರು. ನೀರಿನ ವಿಚಾರದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ ಬೇಜವಾಬ್ದಾಾರಿ, ಅಸಮಧಾನದಿಂದ ಕೂಡಿದೆ. ರಾಜಕೀಯ ದುರುದ್ದೇಶದಿಂದ ನಾವು ಹೇಳಿಕೆ ನೀಡಿಲ್ಲ. ಪಕ್ಷಾತೀತವಾಗಿ ಸಭೆ ಕರೆಯಲಾಗಿತ್ತು. ಪ್ರಸ್ತುತ ನೀರಿನ ಲಭ್ಯತೆ ಆಧಾರದ ಮೇಲೆ ಬೇಸಿಗೆ ಬೆಳೆಗೆ ನೀರು ಕೊಡಲು ಸಾಧ್ಯವೇ ಎನ್ನುವ ಲೆಕ್ಕಾಾಚಾರದ ಸಭೆಯಾಗಿತ್ತು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಶಾಸಕ ಹಂಪನಗೌಡ ಬಾದರ್ಲಿ ಆಲೋಚನೆ ಮಾಡದೇ ನೀರು ನಿಗದಿಗೆ ಸಂಬಂಧಿಸಿದಂತೆ ಮಾತನಾಡಿದ್ದಾಾರೆ. ಜೂನ್ನಿಂದ ಅಕ್ಟೋೋಬರ್-30ರ ವರೆಗೆ ನೀರು ಸಂಗ್ರಹವಾಗಬಹುದಾದ ಆಧಾರದಲ್ಲಿ ಅಂದಾಜು ಲೆಕ್ಕಾಾಚಾರ ಮಾಡಿ ಜೂ.6 ರಂದು ಬೋರ್ಡ್ ನಿಗದಿಗೊಳಿಸಿದೆ. ಈ ವರ್ಷ ಸತತವಾಗಿ ಮಳೆ ಬಂದಿದೆ. ಜಲಾಶಯಕ್ಕೆೆ ಒಳ ಹರಿವಿನ ಪ್ರಮಾಣ ಅಧಿಕವಾಗಿತ್ತು. ನ-6 ರಂದು ಹೊಸ ಪ್ರೋೋರೇಟಾ ನಿಗದಿಗೊಳಿಸಲಿದೆ. ಅದರ ಅಂಕಿ ಅಂಶಗಳ ಮೇಲೆ ನಿಖರ ಮಾಹಿತಿ ಲಭ್ಯವಾಗಲಿದೆ. ಶಾಸಕರಾದವರು ಇದನ್ನು ತಿಳಿದುಕೊಳ್ಳಬೇಕಿತ್ತು. ಬಾದರ್ಲಿ ಬಗ್ಗೆೆ ನಾವು ಆರೋಪ ಮಾಡಿಲ್ಲ. ಯಾಕೆ ವೈಯಕ್ತಿಿಕವಾಗಿ ತೆಗೆದುಕೊಂಡಿದ್ದಾಾರೆ ಗೊತ್ತಿಿಲ್ಲ. ನೀರಿನ ಅಂಕಿ-ಅಂಶಗಳ ಬಗ್ಗೆೆ ನಿಖರವಾಗಿ ಯಾವ ಶಾಸಕರಿಗೂ ಗೊತ್ತಿಿಲ್ಲ. ಶಾಸಕ ಬಾದರ್ಲಿ ನಿಖರವಾಗಿ ಮಾಹಿತಿ ಪಡೆದು ಮಾತನಾಡಬೇಕಿತ್ತು ಎಂದು ಆರೋಪಿಸಿದರು.
ಜಲಾಶಯದ 33 ಗೇಟ್ಗಳನ್ನು ಅಳವಡಿಸುವ ಸಂಬಂಧ ಬೋರ್ಡ್ ತೀರ್ಮಾನ ಕೈಗೊಂಡಿರಬಹುದು. ಆದರೆ ಎಲ್ಲದಕ್ಕೂ ಸರಕಾರಕ್ಕೆೆ ಒಪ್ಪಲೇಬೇಕು ಎಂದಿಲ್ಲ. ರೈತರ, ಆರ್ಥಿಕ ಪರಿಸ್ಥಿಿತಿ ಅರಿತು ತೀರ್ಮಾನ ಮಾಡಬೇಕು. ರಾಜ್ಯ ಸರಕಾರಕ್ಕೆೆ ಅಧಿಕಾರ, ಪಾತ್ರ ಇಲ್ಲ ಎಂದು ಶಾಸಕರ ಹೇಳಿಕೆ ಅವರ ಅನುಭವಕ್ಕೆೆ ಅಲ್ಲ. ಇದೇ 6 ರಂದು ನೀರಿನ ನಿಗದಿ ಪ್ರಕಟವಾಗಲಿದೆ. ಅದರ ಅಂಕಿ ಅಂಶಗಳ ಆಧಾರದಲ್ಲಿ ತೀರ್ಮಾನ ಮಾಡಬಹುದು. ಈ ವರ್ಷ ಹೆಚ್ಚು ಮಳೆ ಬಂದಿರುವುದರಿಂದ ನಮ್ಮ ಪಾಲಿಗೆ ಹೆಚ್ಚು ನೀರು ಲಭ್ಯವಾಗಬಹುದು ಎಂದು ಆಶಯ ವ್ಯಕ್ತಪಡಿಸಿದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಪ್ರಸಕ್ತ ವರ್ಷ 33 ಗೇಟ್ಗಳ ಅಳವಡಿಕೆಗೆ 6-7 ತಿಂಗಳ ಬೇಕು. ಹೀಗಾಗಿ ಬೇಸಿಗೆ ಬೆಳೆಗೆ ನೀರು ಕೊಡಲು ಆಗುವುದಿಲ್ಲ ಎಂದು ಬೋರ್ಡ್ ತೀರ್ಮಾನ ಕೈಗೊಂಡಿತ್ತು. ಸದನದಲ್ಲೂ ಇದೇ ಚರ್ಚೆಯಾಗಿತ್ತು. ಆದರೆ ಪ್ರಸಕ್ತ ವರ್ಷ ಅತಿವೃಷ್ಠಿಿಯಿಂದ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ರೈತರು ಸಂಕಷ್ಟದಲ್ಲಿದ್ದಾಾರೆ. ಜಲಾಶಯದಲ್ಲೂ 80 ಟಿಎಂಸಿ ನೀರು ಇರುವುದರಿಂದ ಎರಡನೇ ಬೆಳೆಗೆ ನೀರು ಕೊಡಬಹುದು ಎನ್ನುವ ಉದ್ದೇಶದಿಂದ ಪಕ್ಷಾತೀತ ಸಭೆ ಕರೆದು ಚರ್ಚಿಸಲಾಯಿತು. ನಿಯೋಗ ಕೊಂಡೋಯ್ದು ಡಿಸಿಎಂ ಮೇಲೆ ಒತ್ತಡ ಹಾಕುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕಾಧ್ಯಕ್ಷ ಬಸವರಾಜ ನಾಡಗೌಡ, ನಗರ ಘಟಕದ ಅಧ್ಯಕ್ಷ ರವಿಗೌಡ ಪನ್ನೂರು, ನಗರಸಭೆ ಸದಸ್ಯರಾದ ಕೆ.ಜಿಲಾನಿಪಾಷಾ, ಚಂದ್ರಶೇಖರ ಮೈಲಾರ, ಮುಖಂಡರಾದ ಜಿ.ಸತ್ಯನಾರಾಯಣ, ಅಶೋಕಗೌಡ ಗದ್ರಟಗಿ, ಅಲ್ಲಮಪ್ರಭು ಪೂಜಾರ್, ಎಸ್.ಪಿ.ಟೇಲರ್, ನಿರುಪಾದೆಪ್ಪ ಸುಕಾಲಪೇಟೆ, ಶಿವನಗೌಡ ಗೊರೇಬಾಳ, ಧರ್ಮನಗೌಡ ಮಲ್ಕಾಾಪುರ, ಅಜಯ್ ದಾಸರಿ, ಜೀವನ್ ಕುಮಾರ, ಸೈಯದ್ ಆಸ್ೀ ಸೇರಿದಂತೆ ಹಲವರು ಇದ್ದರು.
————————————————————–
ಬಾಕ್ಸ್:
ಜವಾಬ್ದಾಾರಿಯಿಂದ ವರ್ತಿಸಲಿ:
ಸಚಿವ ಶಿವರಾಜ ತಂಗಡಗಿ ಅವರು ಇಲ್ಲಿವರೆಗೆ ಗೇಟ್ಬಗ್ಗೆೆ ಮಾತನಾಡುತ್ತಿಿದ್ದರು. ಈಗ ನೀರಿನ ಬಗ್ಗೆೆ ಮಾತನಾಡುತ್ತಿಿದ್ದಾಾರೆ. 6 ರಂದು ಹೊಸ ್ಲೊರೇಟ ನಿಗದಿಯಾಗಲಿದೆ ನಂತರ ಮಾತನಾಡುವದಾಗಿ ಹೇಳಿದ್ದಾಾರೆ. ಕೇಂದ್ರದಲ್ಲಿ ಎನ್ಡಿಎ ಸರಕಾರವಿದೆ. ನಾಡಗೌಡ ಅವರು ಕುಮಾರಸ್ವಾಾಮಿ ಅವರ ಮೇಲೆ ಒತ್ತಡ ಹಾಕಿ ಆಂಧ್ರದ ನೀರು ಕೊಡಿಸಲಿ ಎಂದು ತಂಗಡಗಿ ಹೇಳಿದ್ದಾಾರೆ. ಕಾಂಗ್ರೆೆಸ್ಗೆ ಕೇಂದ್ರದ ಮೇಲೆ ಗೂಬೆ ಕೂರಿಸುವದು ಒಂದು ಚಟವಾಗಿದೆ. ನೀರು ಕೇಂದ್ರ ಸರಕಾರದ ಕೈಯಲ್ಲಿದೆಯಾ? ತಂಗಡಗಿ ಜವಬ್ದಾಾರಿಯುತ ಸ್ಥಾಾನದಲ್ಲಿದ್ದಾಾರೆ. ತಮ್ಮ ಸ್ಥಾಾನ ಅರಿತು ಮಾತನಾಡಬೇಕು ಎಂದ ಅವರು, ಶಾಸಕ ಹಂಪನಗೌಡ ಬಾದರ್ಲಿ ಇಲ್ಲಿನ ಸಭೆಗೆ ಬಂದಿಲ್ಲ. ಡೆಲ್ಲಿಗೆ ಕರೆದರೆ ಬರುತ್ತೇನೆ ಎಂದಿದ್ದಾಾರೆ. ಇತಿಹಾಸದಲ್ಲಿ ಡೆಲ್ಲಿಗೆ ಹೋಗಿ ನೀರು ತಂದಿದೆಯಾ? ಯಾಕೆ ಕೇಂದ್ರ ಸರಕಾರವನ್ನು ಎಳೆದು ತರುತ್ತೀರಿ. ಬೋರ್ಡ್ ಮಾಡಿದ ಉದ್ದೇಶವೇನು ಎಂದು ಕುಟುಕಿದ ಅವರು, ಹಿಂದೆ 30, 32 ಟಿಎಂಸಿ ನೀರಿದ್ದಾಾಗಲೂ ಎರಡನೇ ಬೆಳೆಗೆ ನೀರು ಕೊಡಲಾಗಿತ್ತು ಎಂದು ಮಾಜಿ ಸಚಿವ ನಾಡಗೌಡ ಹೇಳಿದರು.

