ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.06:
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಾಲಯವು ಬಿ.ಇಡಿ ಪದವಿಯ ಮೌಲ್ಯಮಾಪನ ಮುಗಿದ ಒಂದೇ ದಿನದಲ್ಲಿ ಪರೀಕ್ಷಾ ಲಿತಾಂಶವನ್ನು ಘೋಷಿಸಿ ಐತಿಹಾಸಿಕ ಸಾಧನೆ ಮೆರೆದಿದೆ.
ಕಳೆದ ತಿಂಗಳು ಮುಕ್ತಾಾಯಗೊಂಡಿದ್ದ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ನ ಬಿ.ಇಡಿ ಪದವಿ ಮೌಲ್ಯಮಾಪನವನ್ನು ಸತತ 10 ದಿನಗಳಲ್ಲಿ ಪೂರೈಸಿ ಲಿತಾಂಶವನ್ನು ಯುಯುಸಿಎಂಎಸ್ನಲ್ಲಿ ಗುರುವಾರ ಪ್ರಕಟಿಸಿದೆ.
ವಿಎಸ್ಕೆಯುನ ಅಧೀನದಲ್ಲಿರುವ 14 ಕಾಲೇಜುಗಳ ಸುಮಾರು 2,500 ವಿದ್ಯಾಾರ್ಥಿಗಳು ಪರೀಕ್ಷೆ ಬರೆದಿದ್ದರು. ವಿದ್ಯಾಾರ್ಥಿಗಳು ಬರೆದಿದ್ದ 15,000 ಉತ್ತರ ಪತ್ರಿಿಕೆಗಳನ್ನು ಬಿ.ಇಡಿ ಕೋರ್ಸಿನ 42 ಮೌಲ್ಯಮಾಪಕರು ಎಡೆಬಿಡದೆ ಮೌಲ್ಯಮಾಪನ ನಡೆಸಿದ್ದರು.
ವಿಶ್ವವಿದ್ಯಾಾಲಯದ ಕುಲಪತಿ ಪ್ರೊೊ.ಎಂ ಮುನಿರಾಜು ಅವರು ವಿಶ್ವವಿದ್ಯಾಾಲಯದ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಾಗಿದೆ. ವಿದ್ಯಾಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಿಯಿಂದ ಶೀಘ್ರ ಲಿತಾಂಶ ಪ್ರಕಟಿಸಲು ಆದ್ಯ ಕ್ರಮಗಳನ್ನು ವಿಶ್ವವಿದ್ಯಾಾಲಯವು ತೆಗೆದುಕೊಂಡಿದೆ ಎಂದು ತಿಳಿಸಿದ್ದಾಾರೆ.

