ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.10:
ಕರ್ನಾಟಕ ಜಾನುವಾರು ಹತ್ಯೆೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆೆ 2020 ರ ಪ್ರಸ್ತಾಾಪಿತ ತಿದ್ದುಪಡಿ ವಿರೋಧಿಸಿ ಸಿಂಧನೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಿದರು.
ಗೋ ಹತ್ಯೆೆ ನಿಷೇದ ಕಾಯ್ದೆೆ ತಿದ್ದುಪಡಿಯು ಸಂವಿಧಾನದ ಆಶಯಕ್ಕೆೆ ಹಾಗೂ ರಾಜ್ಯದ ಮತ್ತು ಹಿಂದೂ ಸಮಾಜದ ಹಿತಾಸಕ್ತಿಿಗೆ ವಿರೋಧಿಯಾಗಿದೆ. ಸರಕಾರ ಅಧಿವೇಶನದಲ್ಲಿ ಮಂಡಿಸುವದನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕ ಅಧ್ಯಕ್ಷ ದೇವರಾಜ್ ಪಾಟೀಲ್, ಜಿಲ್ಲಾಾ ಧರ್ಮ ಪ್ರಸಾರ ಪ್ರಮುಖ ವಿಶ್ವನಾಥ್ ಚೌಧರಿ, ನಗರ ಘಟಕದ ಅಧ್ಯಕ್ಷ ಟಿ.ಕಿಶೋರ್ ಕುಮಾರ್, ಬಜರಂಗದಳ ಜಿಲ್ಲಾಾ ಸಂಯೋಜಕ ಬಸವರಾಜ ಸಾಲಗುಂದಾ, ತಾಲೂಕಾ ಕಾರ್ಯದರ್ಶಿ ನಾಗೇಶ್ ಪವರ್, ಬಜರಂಗದಳ ತಾಲೂಕ್ ಸಂಯೋಜಕ ಮನೋಹರ್ ಹಿರೇಮಠ, ಬಜರಂಗದಳ ನಗರ ಸಂಯೋಜಕ ಶಿವಕುಮಾರ್, ರಾಘವೇಂದ್ರ ಗಿರಿಜಾಲಿ, ಉದಯಕುಮಾರ್, ವೀರೇಶ್ ನಾಯಕ, ಮಲ್ಲಯ್ಯ ಕಂದ, ರುದ್ರಯ್ಯ ಹಿರೇಮಠ, ಮಹೇಶ್ ದೇಸಾಯಿ, ಅಯ್ಯಪ್ಪ, ಶ್ರೀನಿವಾಸ್, ಲಿಂಗಣ್ಣ, ನಂದೀಶ, ಮುತ್ತು, ಶ್ರೀಕಾಂತ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಪ್ರಸ್ತಾಪ ವಿರೋಧಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ ಪ್ರತಿಭಟನೆ

