ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.26:
ಸ್ವಾಾತಂತ್ರ್ಯ ಹೋರಾಟಗಾರು, ಮಾಜಿ ಸಚಿವ ಲಿಂ. ವಿಶ್ವನಾಥರೆಡ್ಡಿ ಮುದ್ನಾಾಳ್ ಅವರ ಹೋರಾಟದ ಕಿಚ್ಚು, ಸಾಮಾಜಿಕ ಕಳಕಳಿ, ದೀನದಲಿತರ ಬಗ್ಗೆೆ ಹೊಂದಿದ್ದ ಕಾಳಜಿ ಇಂದಿನ ಯುವ ಪೀಳಿಗೆ ಅನುಸರಿಸಬೇಕೆಂದು ನಿವೃತ್ತ ಶಿಕ್ಷಕರೂ ಆದ ಹಿರಿಯ ಜೀವಿ ಅಯ್ಯಣ್ಣ ಹುಂಡೆಕಾರ ಹೇಳಿದರು.
ನಗರದಲ್ಲಿ ರೆಡ್ಡಿಿ ಗೋದಾಮುನಲ್ಲಿ ಶುಕ್ರವಾರ ಅವರ ಅಭಿಮಾನಿ ಬಗಳವು ಹಮ್ಮಿಿಕೊಂಡಿದ್ದ ಅವರ 99 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವನಾಥರೆಡ್ಡಿಿ ಅವರು ಹಳೆ ಮೈಸೂರು ಭಾಗದಲ್ಲಿ ಹುಟ್ಟಿಿದ್ದರೇ ಈ ರಾಜ್ಯದ ಅಧಿಕಾರದ ಚುಕ್ಕಾಾಣಿ ಹಿಡಿಯುತ್ತಿಿದ್ದರು. ಕಾರಣ ಅವರು ಪ್ರಬುದ್ಧ, ಶ್ರೇೇಷ್ಠ ವಿಚಾರಗಳನ್ನು ಹೊಂದಿದ್ದರೆಂದರು.
ಅವರ ಜೀವನಕ್ರಮ ಹತ್ತಿಿರದಿಂದ ಬಲ್ಲವರಿಗೆ ಗೊತ್ತು. ಗುರಿ,ಛಲ ಹೊಂದಿದ್ದ ಅವರು ಸದಾ ಸರ್ವ ಸಮಾಜಗಳ ಒಳಿತಿಗೆ ಶ್ರಮಿಸಿದ್ದರು.
ವಿಶೇಷವಾಗಿ ಅಸ್ಪೃಶ್ಯತೆ ನಿವಾರಣಗೆ ಟೊಂಕಕಟ್ಟಿಿ ರಾಜ್ಯಾಾದ್ಯಾಾಂತ ಜಾಗೃತಿ ಮೂಡಿಸಿದ್ದರು. ವರದಕ್ಷಿಿಣೆ ಪಡೆಯುವವರ ಮದುವೆ ಹೊಗುತ್ತಿಿರಲಿಲ್ಲ. ಕಾರಣ ಅವರು ಅದರ ಕಡಕ್ ವಿರೋಧಿಗಳಾಗಿದ್ದರು.
ಅವರದೇ ಆದ ಸಿದ್ದಾಂತಗಳನ್ನು ಹೊಂದಿದ್ದರು. ಕಲ್ಯಾಾಣ ಕರ್ನಾಟಕ ಭಾಗದ ಅಭಿವೃದ್ಧಿಿಗಾಗಿ 371( ಜೆ) ಜಾರಿ ಮಾಡಬೇಕೆಂಬ ಆರಂಭದ ಹೋರಾಟದಲ್ಲಿ ವಿಶ್ವನಾಥರಡ್ಡಿಿ ಮುದ್ನಾಳ್ ಅವರ ಗಮನಾರ್ಹ ಪಾತ್ರ ಇತ್ತು ಎಂದು ಹೇಳಿದರು.
ಅವರಿಗೆ ಅಧಿಕಾರ ಮುಖ್ಯವಾಗಿಲಿಲ್ಲ, ಬದಲಿಗೆ ಅಭಿವೃದ್ಧಿಿಯೇ ಪ್ರಧಾನವಾಗಿತ್ತು. ರಾಜಕೀಯವಾಗಿ ಎಷ್ಟು ಪ್ರಭಾವಶಾಲಿಗಳಾಗಿದ್ದರೋ ಅಷ್ಠೆೆ ಮುಖ್ಯವಾಗಿ ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಸಮಾಜದ ಬೆಳವಣಿಯಲ್ಲಿ ಅವರ ಪಾತ್ರ ಮುಖ್ಯವಾಗಿತ್ತು. ಇಂದು ಹೈದ್ರಾಾಬಾದ ಮತ್ತು ಬೆಂಗಳೂರಿನಲ್ಲಿ ಸಮಾಜದ ಆಸ್ತಿಿ ಇವೆ ಎಂದರೆ ಅದಕ್ಕೆೆ ಇವರೆ ಮುಖ್ಯಕಾರಣರೆಂದು ಅಯ್ಯಣ್ಣ ಹುಂಡೆಕಾರ ವಿವರಿಸಿದರು.
ಇಂತಹ ವಿಚಾರವಂತ ನಾಯಕ ನಮ್ಮ ಗಿರಿಜಿಲ್ಲೆಯವರು ಎಂಬುವುದೇ ನಮಗೆಲ್ಲ ಹೆಮ್ಮೆೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಣಮಂತರೆಡ್ಡಿಿ ಮುದ್ನಾಾಳ್ ವಹಿಸಿದ್ದರು.
ಪ್ರಾಾಸ್ತಾಾವಿಕವಾಗಿ ಯುವ ನಾಯಕ ಮಹೇಶ ರೆಡ್ಡಿಿ ಮುದ್ನಾಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯತು. ವೇದಿಕೆಯಲ್ಲಿ ಅವರ ಭಾವಚಿತ್ರದ ಪೂಜೆ ನೆರವೇರಿಸಲಾಯಿತು.
ಹಿರಿಯರಾದ ಚನ್ನಬಸರೆಡ್ಡಿಿ ಮುದ್ನಾಾಳ, ರಾಚಣ್ಣಗೌಡ ಮುದ್ನಾಾಳ್, ಮಲ್ಲಣ್ಣಗೌಡ ಹತ್ತಿಿಕುಣಿ, ಸಿದ್ದಣ್ಣಗೌಡ ಕಾಡಂನೋರ್, ಖಂಡಪ್ಪ ದಾಸನ್, ಗುಂಡೂರಾವ್, ಶರಣಗೌಡ ಬಾಡಿಯಾಳ್, ಭೀಮಣ್ಣಗೌಡ ಕ್ಯಾಾತನಾಳ್ , ಶರಣಗೌಡ ಮುದ್ನಾಾಳ್, ಸೇರಿದಂತೆ ಇತರರಿದ್ದರು.
ಜನ್ಮದಿನದ ಅಂಗವಾಗಿ ಅನ್ನದಾಸೋಹದ ವ್ಯವಸ್ಥೆೆ ಮಾಡಲಾಗಿತ್ತು.
ವಿಶ್ವನಾಥರೆಡ್ಡಿ ಮುದ್ನಾಳ್ ಅವರ ಆದರ್ಶಗಳು ಪಾಲಿಸಬೇಕು : ಹುಂಡೆಕಾರ ಯಾದಗಿರಿ ಮುದ್ನಾಳ್ ರ 99 ನೇ ಜನ್ಮದಿನ ಆಚರಣೆ

