ಸುದ್ದಿಮೂಲ ವಾರ್ತೆ ಸಿಂಧನೂರು, ೆ.21:
ಮಸ್ಕಿಿ ತಾಲೂಕಿನ ಬೆಳ್ಳಿಿಗನೂರು ಗ್ರಾಾಮದಲ್ಲಿ ಕಲುಷಿತ ನೀರು ಕುಡಿದು ಸಾಂಕ್ರಾಾಮಿಕ ರೋಗಗಳ ಭೀತಿಯ ಹಿನ್ನಲೆಯಲ್ಲಿ ಸಿಂಧನೂರು ತಾಲೂಕಾ ಆರೋಗ್ಯಾಾಧಿಕಾರಿ ಡಾ.ಅಯ್ಯನಗೌಡ ನೇತೃತ್ವದ ಆರೋಗ್ಯ ಇಲಾಖೆ ತಂಡ ಭೇಟಿ ನೀಡಿ ಮನೆ-ಮನೆ ತಪಾಸಣೆ ನಡೆಸಿತು.
ಚರಂಡಿ ನೀರು ಕುಡಿಯುವ ನೀರಿನಲ್ಲಿ ಮಿಶ್ರಣಗೊಳ್ಳುತ್ತಿಿರುವದರಿಂದ ಮಕ್ಕಳು ಸೇರಿದಂತೆ ಅನೇಕರಲ್ಲಿ ಆರೋಗ್ಯದಲ್ಲಿ ವ್ಯತ್ಯಾಾಸ ಕಂಡು ಬಂದ ಕುರಿತು ವರದಿಯಾದ ಹಿನ್ನಲೆಯಲ್ಲಿ ತಾಲೂಕಾ ಆರೋಗ್ಯಾಾಧಿಕಾರಿಗಳು ಗ್ರಾಾಮಕ್ಕೆೆ ಭೇಟಿ ನೀಡಿ ತುರ್ತು ಸ್ಪಂದನೆ ನೀಡಿದರು. ಗ್ರಾಾಮದಲ್ಲಿ ತುರ್ತು ಚಿಕಿತ್ಸಾಾ ಕೇಂದ್ರಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಜೊತೆಗೆ ಆರೋಗ್ಯ ಶಿಕ್ಷಣ ಮಾಹಿತಿ ನೀಡಲಾಯಿತು.
ನೀರಿನ ಮೂಲಗಳ ಪೈಪ್ಲೈನ್ ದುರಸ್ತಿಿಗೆ ಕ್ರಮ ಕೈಗೊಳ್ಳಲು ಗ್ರಾಾಮ ಪಂಚಾಯಿತಿಯ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಯಿತು. ಗ್ರಾಾಮದ ಜನರಿಗೆ ನೀರನ್ನು ಕುದಿಸಿ, ಆರಿಸಿ ಕುಡಿಯಲು ಮತ್ತು ಬಿಸಿಯಾದ ಆಹಾರ ಸೇವನೆ ಮಾಡಲು ಆರೋಗ್ಯ ಇಲಾಖೆಯಿಂದ ಗ್ರಾಾಮದಲ್ಲಿ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ, ಆರೋಗ್ಯ ಇಲಾಖೆಯ ನಿಖಿಲ್ ಹೊಸ್ಮನಿ, ಆಂಜನೇಯ, ಗುರುನಾಥ, ಪ್ರಾಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿಿತರಿದ್ದರು.
ಬೆಳ್ಳಿಗನೂರು ಗ್ರಾಮಕ್ಕೆ ಆರೋಗ್ಯಾಧಿಕಾರಿಗಳ ಭೇಟಿ : ತಪಾಸಣೆ

