ಸುದ್ದಿಮೂಲ ವಾರ್ತೆ ರಾಯಚೂರು, ಸೆ.29:
ಕಳೆದಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ವಿವಿಧ ಕಾಮಗಾರಿಗಳ ಮಾಹಿತಿ ಪಡೆದ ಆಯುಕ್ತ ಜುಬೀನ್ ಮೊಹಪಾತ್ರ ಅವರು ಸಬೂಬು ಹೇಳದೆ ತಕ್ಷಣ ಪೂರ್ಣಗೊಳಿಸಬೇಕು ಎಂದು ಗುತ್ತಿಿಗೆದಾರರಿಗೆ ತಾಕೀತು ಮಾಡಿದ ಪ್ರಸಂಗ ಜರುಗಿದೆ.
ಇಂದು ನಗರದ ವಿವಿಧ ಕಡೆ ದಿಢೀರ್ ಭೇಟಿ ನೀಡಿದ ಅವರು, 15ನೇ ಹಣಕಾಸು ಆಯೋಗದ ಅಡಿಯಲ್ಲಿನ ಕಾಮಗಾರಿ ನೋಡಿ ಅಚ್ಚರಿ ವ್ಯಕ್ತಪಡಿಸಿದರಲ್ಲದೆ, ಅರೆಬರೆ ಕೆಲಸದ ಬಗ್ಗೆೆ ಜೊತೆಯಲ್ಲಿದ್ದ ಇಂಜಿನಿಯರ್ಗಳಿಂದ ಮಾಹಿತಿ ಪಡೆದು ಉಳಿದಿರುವ ರಸ್ತೆೆ ಮತ್ತು ಚರಂಡಿ ಕೆಲಸ ತಕ್ಷಣ ಪೂರ್ಣಗೊಳಿಸಲೇಬೇಕು.
ರಸ್ತೆೆ ಮತ್ತು ಚರಂಡಿಗಳ ಅಗಲ, ಉದ್ದ ಮತ್ತು ಗುಣಮಟ್ಟದ ಬಗ್ಗೆೆ ರಾಜಿ ಮಾಡಿಕೊಳ್ಳುವುದಿಲ್ಲಘಿ. ಉಲ್ಲಂಘನೆಯಾದರೆ ಕ್ರಮ ತಪ್ಪಿಿದ್ದಲ್ಲ ಎಂದು ಎಚ್ಚರಿಸಿದ ಅವರು ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಘನ ತ್ಯಾಾಜ್ಯ ನಿರ್ವಹಣೆ ಪರಿಶೀಲನೆ :
ಇಂದು ನಗರದಲ್ಲಿ ಸಾರ್ವಜನಿಕರು ತ್ಯಾಾಜ್ಯ ಎಸೆಯುವ ಅನಧಿಕೃತ ಸ್ಥಳಗಳ ಪರಿಶೀಲನೆ ಮಾಡಿದ ಆಯುಕ್ತರು ಘನ ತ್ಯಾಾಜ್ಯ ನಿರ್ವಹಣೆ ತಂಡಕ್ಕೆೆ ಇವುಗಳನ್ನು ತ್ವರಿತವಾಗಿ ತೆರವುಗೊಳಿಸುವಂತೆ ಸೂಚಿಸಿದರು. ಈಗಾಗಲೇ ಅನೇಕ ಸ್ಥಳ ತೆರವುಗೊಳಿಸಲಾಗಿದೆ. ಇದರ ಪರಿಣಾಮವಾಗಿ ಈ ಸಮಸ್ಯೆೆ ಗಣನೀಯವಾಗಿ ಕಡಿಮೆಯಾಗಿದೆ. ಇನ್ನಷ್ಟು ಕಠಿಣ ಕ್ರಮ ವಹಿಸಬೇಕು ಎಂದು ನಾಗರಿಕರು ಆಯುಕ್ತರಿಗೆ ಕೋರಿ ಇಂತಹ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ನಾಗರಿಕರಿಗೆ ಎಚ್ಚರಿಕೆ :
ನಾಗರಿಕರು ಚರಂಡಿಗಳಲ್ಲಿ ಪ್ಲಾಾಸ್ಟಿಿಕ್ ಮತ್ತಿಿತರ ತ್ಯಾಾಜ್ಯ ವಸ್ತುಗಳನ್ನು ಎಸೆಯುವುದರಿಂದ ಹಾಗೂ ಮಳೆ ಹೆಚ್ಚಿಿರುವುದರಿಂದ ರಸ್ತೆೆಗಳಲ್ಲಿ ನೀರು ನಿಲ್ಲಲು ಕಾರಣವಾಗಬಹುದು. ಚರಂಡಿಗಳಲ್ಲಿ ಪ್ಲಾಾಸ್ಟಿಿಕ್ ತ್ಯಾಾಜ್ಯ ಎಸೆಯುವುದು ಕಂಡುಬಂದಲ್ಲಿ, ಸಂಬಂಧಿತ ನಾಗರಿಕರಿಗೆ ದಂಡ ವಿಧಿಸಲಾಗುವುದು ಮತ್ತು ಕಾನೂನು ಕ್ರಮ ಜರಗಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದರು.
ಈ ಕ್ರಮಗಳ ಮೂಲಕ ನಗರದ ಅಭಿವೃದ್ಧಿಿ ಕಾರ್ಯಗಳು ವೇಗವಾಗಿ ಮುನ್ನಡೆಯಲಿದ್ದು, ಮಹಾನಗರ ಪಾಲಿಕೆಯ ನಿರ್ವಹಣೆ ಹೆಚ್ಚು ಪಾರದರ್ಶಕತೆಯಿಂದ ನಡೆಯಲಿದೆ ಎಂದು ತಿಳಿಸಿದರು.
* ನಗರದ ವಿವಿಧೆೆಡೆ ಆಯುಕ್ತರ ದಿಢೀರ್ ಭೇಟಿ * ಅರೆಬರೆ ಕಾಮಗಾರಿ ಪರಿಶೀಲನೆ * ಚರಂಡಿಗೆ ಪ್ಲಾಾಸ್ಟಿಿಕ್ ಹಾಕಿದ್ರೆೆ ದಂಡದ ಎಚ್ಚರಿಕೆ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಲು ತಾಕೀತು
