ಸುದ್ದಿಮೂಲ ವಾರ್ತೆ ದೇವದುರ್ಗ, ಜ.11:
2028ಸಾರ್ವತ್ರಿಿಕ ಚುನಾವಣೆ ಮತ್ತು ಮುಂಬರು ಜಿ.ಪಂ. ತಾ.ಪಂ.ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷ ಅಧಿಕಾರದ ಚುಕ್ಕಾಾಣಿ ಹಿಡಿಯಲು ಪಕ್ಷ ತಳಮಟ್ಟದಿಂದ ಸಂಘಟನೆ ಮಾಡಲು ಪಕ್ಷದ ವರಿಷ್ಠರ ಆದೇಶದಂತೆ ಸಮಗ್ರ ವಿಶೇಷ ಪರಿಷ್ಕರಣೆ ಮತ್ತು ಜಾಲತಾಣ ಕಾರ್ಯಾಗಾರ ಹಮ್ಮಿಿಕೊಳ್ಳಲಾಗಿದೆ ಎಂದು ಸ್ಥಳೀಯ ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಅವರು ಭಾನುವಾರದಂದು ಪಟ್ಟಣದ ಜಾಲಹಳ್ಳಿಿ ರಸ್ತೆೆಯ ಲಕ್ಷ್ಮೀರಂಗನಾಥ ಕಲ್ಯಾಾಣ ಮಂಟಪಲದಲಿ ಕರ್ನಾಟಕ ಪ್ರದೇಶ ಜಾತ್ಯಾಾತೀತ ಜನತಾ ದಳದ ರಾಯಚೂರು ಜಿಲ್ಲಾಾ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಬಿ. ಎಲ್ ಎ-2 ಸಾಮಾಜಿಕ ಜಾಲತಾಣದ ಬಗ್ಗೆೆ ಜೆ.ಡಿ.ಎಸ್.ಪಕ್ಷದ ಕಾರ್ಯಕರ್ತರಿಗೆ ಆಯೋಜಿಸಿದ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ, ನಮ್ಮ ಜೆ.ಡಿ.ಎಸ್. ಪಕ್ಷದ ಬದ್ರಬುನಾದಿ ಎಂದರೆ ಬೂತ್ ಮಟ್ಟದ ಕಾರ್ಯಕರ್ತರಾಗಿದ್ದು, ಮುಂಬರುವ ದಿನಗಳಲ್ಲಿ ಜಿ.ಪಂ.ತಾ.ಪಂ. ಪುರಸಭೆ ಹಾಗೂ ವಿಧಾನ ಸಭೆ, ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟು ಕೊಂಡು ನಮ್ಮ ಪಕ್ಷದ ಕಾರ್ಯಕರ್ತರು ಮತದಾರರ ಪಟ್ಟಿಿ ಪರಿಷ್ಕರಣೆಯಲ್ಲಿ ಜಾಗೃತರಾಗಿಬೇಕು.
ರಾಜ್ಯ ಸೇರಿದಂತೆ ಜಿಲ್ಲೆೆಯಲ್ಲಿ ರೈತರ, ದಿನದಲಿತರ, ಸೋಷಿತ ವರ್ಗದವರ, ಹಿಂದುಳಿದ ಜನಾಂಗದವರ ಹಿತ ಚಿಂತನೆ ಮತ್ತು ಕಾರ್ಮಿಕರ ಹಕ್ಕಿಿಗಾಗಿ ಸದಾ ಶ್ರಮಿಸುತ್ತಿಿರುವ ರೈತರ ಪಕ್ಷ ಮತ್ತು ರೈತರ ಜೀವನ್ನಾಾಡಿಯಾದ ಜೆ.ಡಿ.ಎಸ್. ಪಕ್ಷ ತಳಮಟ್ಟದಿಂದ ಬಲಪಡಿಸಬೇಕು. ಜೆ.ಡಿ.ಎಸ್ ಪಕ್ಷ ಕಾರ್ಯಕರ್ತರ ಧ್ವನಿಯಾಗಿದ್ದು, ಪಕ್ಷದ ಬಲವರ್ಧನೆಗೆ ಕಾರ್ಯಕರ್ತರ ಮೇಲೆ ಬಹುದೊಡ್ಡ ಜವಾಬ್ದಾಾರಿ ಇರುತ್ತದೆಂದು ಕರೆಮ್ಮ ಜಿ. ನಾಯಕ ಹೇಳಿದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ,ಸಾಮಾಜಿಕ ಜಾಲತಾಣ ರಾಜ್ಯ ಅಧ್ಯಕ್ಷ ಚಂದನ್ ಹೆಚ್. ಎಸ್. ಜೆ.ಡಿ.ಎಸ್.ಪಕ್ಷದ ಜಿಲ್ಲಾಾ ಅಧ್ಯಕ್ಷ ವಿರೂಪಾಕ್ಷಿ ಎಂ.ಮುಖಂಡರಾದ ಶಿವಶಂಕರ ವಕೀಲರು, ಮಹಾಂತೇಶ ಪಾಟೀಲ್ ಅತ್ತನೂರು.ಸಣ್ಣ ನರಸಿಂಹ ನಾಯಕ, ಜಂಬುನಾಥ ಯಾದವ್, ಸಿದ್ದಣ್ಣ ತಾತಾ, ಅಮರೇಶ ಪಾಟೀಲ್, ಬಸನಗೌಡ ದೇಸಾಯಿ, ಹನುಮಂತ್ರಾಾಯ ವಕೀಲರು, ಶಾಲಂ ಉದ್ದಾಾರ, ನಾಗರಾಜ ಪಾಟೀಲ್, ರೇಣುಕಾ ಸ್ವಾಾಮಿ, ತಬ್ಬಸುಮ್ ಉದ್ದಾಾರ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಾಗಾರ ಜೆಡಿಎಸ್ ಎಲ್ಲಾ ಹಂತದ ಕಾರ್ಯಕರ್ತರು ಜಾಗೂರಕತೆಯಿಂದ ಪಾಲ್ಗೊಳ್ಳಿ – ಕರೆಮ್ಮ

