ಸುದ್ದಿಮೂಲ ವಾರ್ತೆ
ಕೊಪ್ಪಳ,ಮೇ.2: ಮೇ 01ರಂದು ಕೊಪ್ಪಳ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ವಯೋಮಾನದ ಹಾಗೂ ವಿಕಲಚೇತನ ನೋಂದಯಿತ 115 ಜನರು ಅಂಚೆ ಪತ್ರದ ಮೂಲಕ ಮತದಾನ ಮಾಡಿದ್ದಾರೆ.
ಏಪ್ರೀಲ್ 29ರಿಂದ ಮೇ 01ರವರೆಗೆ ಕುಷ್ಟಗಿ ಕ್ಷೇತ್ರದಲ್ಲಿ 233, ಕನಕಗಿರಿ ಕ್ಷೇತ್ರದಲ್ಲಿ 384, ಗಂಗಾವತಿ ಕ್ಷೇತ್ರದಲ್ಲಿ 205, ಯಲಬುರ್ಗಾ ಕ್ಷೇತ್ರದಲ್ಲಿ 402 ಮತ್ತು ಕೊಪ್ಪಳ ಕ್ಷೇತ್ರದಲ್ಲಿ 751 ಜನ ಸೇರಿ ಇದುವರೆಗೆ ಒಟ್ಟು 1975 ಜನರು ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.