ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ಪ್ರಜಾಪ್ರಭುತ್ವದಲ್ಲಿ ಮತದಾನದ ಪಾತ್ರ ಬಹಳ ದೊಡ್ಡದಾಗಿದ್ದು ವಿವಿಧ ಹಂತದ ಅಧಿಕಾರಿಗಳು ಅಚ್ಚುಕಟ್ಟಾಾಗಿ ಕಾರ್ಯನಿರ್ವಹಿಸುವ ಮೂಲಕ ಯಶಸ್ವಿಿಗೊಳಿಸಬೇಕೆಂದು ರಾಜ್ಯ ಸ್ವೀಪ್ ಸಮಿತಿ ನೊಡಲ್ ಅಧಿಕಾರಿ ಪಿ.ಎಸ್.ವಸದ್ ಹೇಳಿದರು.
ನಗರದ ಜಿಲ್ಲಾ ಪಂಚಾಯತಿಯ ಜಲ ನಿರ್ಮಲ ಸಭಾಂಗಣದಲ್ಲಿ ಸ್ವೀಪ್ ಮತ್ತು ಎನ್ವಿಡಿ ಸ್ಪರ್ಧಾ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಒಂದೊಂದು ಮತ ಅಭ್ಯರ್ಥಿಯ ಸೋಲು ಮತ್ತು ಗೆಲುವು ನಿರ್ಧಾರ ಮಾಡುವ ಶಕ್ತಿಿ ಇದೆ. ಮತಯಂತ್ರದ ಮೂಲಕ ಎಲ್ಲವೂ ಪಾರದರ್ಶಕವಾಗಿ ಚುನಾವಣೆ ಜರುಗುತ್ತವೆ ಎಂದರು.
ಮತದಾನದ ಸ್ಪರ್ಧೆಗಳು ವಿದ್ಯಾಾರ್ಥಿಗಳಲ್ಲಿ ಮತದಾನದ ಮಹತ್ವ ಚುನಾವಣೆಯ ಪ್ರಕ್ರಿಿಯೆಗಳನ್ನು ತಿಳಿಸಲು ಬಹಳ ಸಹಾಯಕವಾಗಿದೆ. ಶೈಕ್ಷಣಿಕ ಸಂಸ್ಥೆೆಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಸ್ಥಾಾಪಿಸಲಾಗಿದೆ. ವಿದ್ಯಾಾರ್ಥಿಗಳಲ್ಲಿ ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆಯ ಅಂಗವಾಗಿ ಸ್ಪರ್ಧೆಗಳ ಆಯೋಜನೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆೆಯಲ್ಲಿ ಮತದಾನದ ಪ್ರಕ್ರಿಿಯೆ, ಚುನಾವಣೆಯ ಅಂಶಗಳು ಮತ್ತು ಅದರ ಮಹತ್ವ ತಿಳಿದುಕೊಳ್ಳಲು ಇಂತಹ ಸ್ಪರ್ಧೆ ಸಹಾಯಕವಾಗಿವೆ ಎಂದು ಹೇಳಿದರು.
ಅಲ್ಲದೆ ಮಾದರಿಯ ಮತದಾರರ ಪಟ್ಟಿಿಯ ಸಿದ್ಧಪಡಿಸಲು ಮತಗಟ್ಟೆೆಯ ಅಧಿಕಾರಿಗಳು ಮಾಡಬೇಕಾದ ಕಾರ್ಯ ಚಟುವಟಿಕೆಗಳು ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯ ಕುಲಪತಿ ಡಾ.ಎಂ. ಹನುಮಂತಪ್ಪ, ಸಹಾಯಕ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ, ಚುನಾವಣೆ ತಹಶೀಲ್ದಾಾರ ಪರಶುರಾಮ, ಪಿಯು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ ಹೋಕ್ರಾಾಣಿ, ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ನೋಡಲ್ ಅಧಿಕಾರಿ ದಂಡಪ್ಪ ಬಿರಾದಾರ ಇತರರಿದ್ದರು.
ಪ್ರಜಾಪ್ರಭುತ್ವದಲ್ಲಿ ಮತದಾನದ ಪಾತ್ರ ದೊಡ್ಡದು – ವಸದ್

