ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 05 : ಹಿಮಾಲಯ ವೆಲ್ನೆಸ್ ಕಂಪನಿಯು ಮೈಂಡ್ಫುಲ್ ಸ್ಟ್ರೈಡ್ಸ್ ವಾಕಥಾನ್ ಅನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿತ್ತು.
ಐದು ಕಿಲೋಮೀಟರ್ ಗಳ ವಾಕಥಾನ್, ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಮತ್ತು ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಲಾಗಿತ್ತು. ಮಕ್ಕಳಿಂದ ಹಿರಿಯರವರೆಗೆ, ದೈಹಿಕ ಸದೃಢತೆಯ ಬಗ್ಗೆ ಅತೀವ ಕಾಳಜಿ ಇರುವವರಿಂದ ಹಿಡಿದು ಸಾಮಾನ್ಯ ನಡಿಗೆಗಾರರವರೆಗೆ ಮಾನಸಿಕ ಯೋಗಕ್ಷೇಮದ ಅನ್ವೇಷಣೆಯಲ್ಲಿ ಭಾಗವಹಿದ್ದರು.
ಜಯಶ್ರೀ ಉಳ್ಳಾಲ್, ಮೈಂಡ್ಫುಲ್ ಸ್ಟ್ರೈಡ್ಸ್ ವಾಕಥಾನ್ ಮಾನಸಿಕ ಆರೋಗ್ಯದ ಮಹತ್ವದ ಆಚರಣೆಯಾಗಿದೆ. ಹೆಚ್ಚುತ್ತಿರುವ ಒತ್ತಡಗಳು ಮತ್ತು ಆಧುನಿಕ ಜೀವನದ ವೇಗ ಸ್ವಭಾವದ ಕಾಲದಲ್ಲಿ ಮಾನಸಿಕ ಆರೋಗ್ಯದ ಕಾಪಾಡುವಿಕೆಯು ಅಗತ್ಯವಾದ ಕಾಳಜಿಯ ವಿಷಯವಾಗಿದೆ. ವ್ಯಕ್ತಿಗತವಾಗಿ ಮತ್ತು ಸಮುದಾಯಗಳಲ್ಲಿರುವ ಮಾನಸಿಕ ಆರೋಗ್ಯದ ಬಗೆಗಿನ ತಪ್ಪುಗ್ರಹಿಕೆಯನ್ನು ತೊಡೆದುಹಾಕಿ ಧನಾತ್ಮಕವಾದ ಬದಲಾವಣೆಗಳನ್ನು ತರಲು ನಾವು ಮುಂದೆ ಬರಬೇಕು ಎಂದು ಹೇಳಿದರು.
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಿಮಾಲಯ ವೆಲ್ ನೆಸ್ ಕಂಪನಿ ಸದಾ ಬದ್ಧವಾಗಿದೆ” ಎಂದು ಎಂದು ಕೆ.ಜಿ.ಉಮೇಶ್ ಹೇಳಿದರು. ದಿ ಮೈಂಡ್ಫುಲ್ ಸ್ಟ್ರೈಡ್ಸ್ ವಾಕಥಾನ್ನಲ್ಲಿ ಭಾಗವಹಿಸಿದವರು ನಗರದ ಅತ್ಯಂತ ಸುಂದರವಾದ ಸ್ಥಳಗಳಾದ ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್, ಕಬ್ಬನ್ ಪಾರ್ಕ್ ನಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ಮತ್ತು ಜವಾಹರ್ ಬಾಲಭವನ ಆಡಿಟೋರಿಯಂ ಮೂಲಕ ಹಾದು ಹೋಗುವ ರಮಣೀಯವಾದ ಮರಗವನ್ನು ಆನಂದಿಸಿದರು.