ಸುದ್ದಿಮೂಲ ವಾರ್ತೆ
ಮಾಲೂರು, ಜು 5 :ಕೆನರಾ ಬ್ಯಾಂಕ್ ನಿಂದ ರೈತರು ಪಡೆದ ಹೈನುಗಾರಿಕೆ ಮತ್ತು ಕೆ ಸಿ ಸಿ
ಸಾಲಕ್ಕೆಸoಬಂದಸಿದಂತೆ ಬ್ಯಾಂಕ್ ನವರು ರೈತರಿಗೆ ಮಾಡುತ್ತಿರುವ ತೊಂದರೆಗಳನ್ನು ಅಧಿಕಾರಿಗಳು ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಂ. ಹೊಸಹಳ್ಳಿ ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಮಾಸ್ತಿ ಕೆನರಾ ಬ್ಯಾಂಕ್ ಮುಂದೆ ಕರ್ನಾಟಕ ರೈತ ಸಂಘದ ತಾಲ್ಲೂಕು ಶಾಖೆ ವತಿಯಿಂದ ಪ್ರತಿಭಟಿಸಿ ಬ್ಯಾoಕಿನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಕೋವಿಡ್ ಸಮಯದಲ್ಲಿ ಸಹಕಾರ ಸಂಘಗಳ ವತಿಯಿಂದ ಹೈನುಗಾರಿಕೆ ಮತ್ತು ವ್ಯವಸಾಯಕ್ಕೆ ಶೂನ್ಯ ಬಡ್ಡಿ ದರದಲ್ಲಿ ಒಂದು ಹಸುವಿಗೆ 14 ಸಾವಿರ ಕೆ.ಸಿ.ಸಿ ಸಾಲ ನೀಡಿದ್ದು, ನಂತರ ರೈತರ ಬಳಿ ಸಾಲಕ್ಕೆ ಶೇ.11ಬಡ್ಡಿ ಪಡೆಯುತ್ತಿದ್ದಾರೆ. ಸಹಕಾರ ಸಂಘಗಳಲ್ಲಿ ಹಸುಗಳಿಗೆ ವಿಮೆ ಮಾಡಿಸಿದ್ದರೂ ಸಹ ಕೆನರಾ ಬ್ಯಾoಕ್ ಸಾಲ ನೀಡುವಾಗ ಒಂದು ಹಸುವಿಗೆ 2500 ರೂ. ರೈತರಿಂದ ಕಟ್ಟಿಸಿ ಕೊಳ್ಳುತ್ತಿದ್ದಾರೆ. ಆಕಸ್ಮಿಕವಾಗಿ ಹಸುಗಳು ಸಾವನ್ನಪ್ಪಿದರೆ ವಿಮೆ ಹಣ ನೀಡುತ್ತಿಲ್ಲ. ಸಾರ್ವಜನಿಕರು ಬ್ಯಾಂಕ್ ನಲ್ಲಿ ಪಡೆದ ಸಾಲಕ್ಕೆ ಶಾಲೆಗೆ ಹೋಗುವ ಮಕ್ಕಳಿಗೆ
ಸರ್ಕಾರ ನೀಡುವ ವಿದ್ಯಾರ್ಥಿ ವೇತನವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಚಾಲಕ ಶ್ರೀನಿವಾಸ್, ಗೌರವಾಧ್ಯಕ್ಷ ನಜೀರುಲ್ಲಾ, ಪದಾಧಿಕಾರಿಗಳಾದ ಸತೀಶ್ , ಶ್ರೀನಾಥ್, ತಿಮ್ಮಣ್ಣ ,ಮುನಿಶಾಮಪ್ಪ ಇದ್ದರು.