ಸುದ್ದಿಮೂಲ ವಾರ್ತೆ
ಮಂಡ್ಯ,ಜು.25:ಎರಡೇ ದಿನದಲ್ಲಿ 8 ಅಡಿ ಭರ್ತಿಯಾದ ಡ್ಯಾಂ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ.ಹೆಚ್ಚಾಗುತ್ತಿರುವ ಕೆ.ಆರ್.ಎಸ್ ಒಳಹರಿವಿನ ಪ್ರಮಾಣ.
100 ಅಡಿ ತಲುಪಿದ ಡ್ಯಾಂ ನೀರಿನ ಮಟ್ಟ.124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆ.ಆರ್.ಎಸ್.ಡ್ಯಾಂ ಭರ್ತಿಯತ್ತ ಸಾಗುತ್ತಿರುವುದಕ್ಕೆ ಮಂಡ್ಯ ಜಿಲ್ಲೆ ರೈತರಲ್ಲಿ ಸಂತಸ ಮೂಡಿಸಿದೆ.
ಒಂದೂವರೆ ತಿಂಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ಸಕ್ಕರೆ ನಾಡಿನ ಅನ್ನದಾತರು ಇದೀಗ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ ರೈತರು.ಸದ್ಯ ಡ್ಯಾಂಗೆ 48,025 ಕ್ಯೂಸೆಕ್ ಒಳ ಹರಿವು.ಮಧ್ಯಾಹ್ನದ ವೇಳೆಗೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆ ಸಾಧ್ಯತೆ.48 ಗಂಟೆಯಲ್ಲಿ 5 ಟಿಎಂಸಿ ನೀರು ಹರಿದು ಬಂದಿದೆ.
ಸದ್ಯ ಡ್ಯಾಂನಲ್ಲಿ 22.809 ಟಿಎಂಸಿ ನೀರು ಶೇಖರಣೆ.49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ KRS.ಇದೇ ರೀತಿ ಒಳ ಹರಿವು 10 ದಿನದಲ್ಲಿ ಸಂಪೂರ್ಣ ಭರ್ತಿ ಸಾಧ್ಯತೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂ