ಸುದ್ದಿಮೂಲವಾರ್ತೆ
ಮಾನ್ವಿ ಏ-2 ಪಟ್ಟಣದ ಪಂಪಾ ಗಾರ್ಡನ್ ನಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಏಪ್ರಿಲ್ ಫೂಲ್ ಅಲ್ಲ, ಎಪ್ರಿಲ್ ಕೂಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ಉದ್ಯಾನವನದ ಗಿಡಗಳ ಟೊಂಗೆಗಳಿಗೆ ಪಕ್ಷಿಗಳಿಗೆ ಕುಡಿಯುವ ನೀರನ್ನು ಒದಗಿಸುವ ನೀರಿನ ಅರವಟಿಗೆಯನ್ನು ಕಟ್ಟುವ ಮೂಲಕ ಚೀಕಲಪರ್ವಿಯ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಬೀಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಪ್ರಾಣಿ ಪಕ್ಷಿಗಳು ಕುಡಿಯುವ ನೀರು ದೊರೆಯದೆ ಪ್ರಾಣವನ್ನು ಕಳೆದುಕೊಳ್ಳುವುದರಿಂದ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ಪಕ್ಷಿಗಳಿಗೆ ನೀರಿನ ಹಾಗೂ ಆಹಾರಧಾನ್ಯಗಳ ವ್ಯವಸ್ಥೆಯನ್ನು ಮಾಡಿದರೆ ಪ್ರಾಣಿ ಪಕ್ಷಿಗಳ ಸಂತತಿ ಉಳಿಯಲು ಸಾಧ್ಯ ಎಂದು ಹೇಳಿದ ಶ್ರೀಗಳು ವನಸಿರಿ ಫೌಂಡೇಶನ್ ಪದಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು.
ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಚಂದ್ರಶೇಖರ್ ಸುವರ್ಣಗಿರಿ ಮಠ, ಡಾ. ಪ್ರಜ್ಞಾ ಹರಿಪ್ರಸಾದ, ಕಲಾವಿದರಾದ ವಾಜೀದ್ ಸಾಜೀದ್, ಶರಣಬಸವ ಜಾನೇಕಲ್, ಪತ್ರಿಕಾ ವರದಿಗಾರರಾದ ಬಸವರಾಜ ಭೋಗಾವತಿ, ರವಿಶರ್ಮ, ಅನ್ನದಾನಯ್ಯ, ಬೆಳಗು ಟ್ರಸ್ಟ್ ಅಧ್ಯಕ್ಷ ಶರಣು, ವನಸಿರಿ ಫೌಂಡೇಶನ್ ಅಧ್ಯಕ್ಷ ಶರಣಬಸವ ಭೋವಿ, ಉಪಾಧ್ಯಕ್ಷ ಬಸವರಾಜ, ಕಾರ್ಯದರ್ಶಿಗಳಾದ ವೀರೇಶ ಪಿರುಮಾಳ, ರಾಘವೇಂದ್ರ ದಾನಿ, ರಾಘವೇಂದ್ರ ಬದಿ, ಸದಸ್ಯರಾದ ಮಾರಯ್ಯ ಅರೋಲಿ, ಅನಿಲ್ ಪವಾರ್, ರಂಜಿತ್ ಕುಮಾರ, ಜಯಂತ್ ಭಾಗವಹಿಸಿದ್ದರು