ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.14
ಈ ವರ್ಷದಂತ ಥಂಡಿ ಹಿಂದೆ ಎಂದೂ ಇದ್ದಿಲ್ಲ ಬಿಡ್ರಿಿ ಥಂಡಿಗೆ ಹೊರ ಬರಾಕ ಅಂಜಿಕಿ ಬರೋವಂಗ ಆಗೈತಿ. ಎಪ್ಪಾಾ ಇಷ್ಟು ಥಂಡಿ ಇದ್ದರೆ ಹೆಂಗ್ರಿಿ ಎನ್ನುತ್ತಿಿದ್ದಾಾರೆ ಕೊಪ್ಪಳ ಮಂದಿ.
ಸದಾ ಬಿಸಿಲು, ಗೊಡ್ಡ ಕಾವಿನಲ್ಲಿ ಮೈಯಾಗ ಬೆವರುವರಿಸಿಕೊಂತ ಇದ್ದವರು ಈಗ ತಲೆಗೆ ಮಂಕಿ ಕ್ಯಾಾಪ್, ಇಲ್ಲ ಟಾವಲ್ ಸುತ್ತಿಿಕೊಂಡು. ಹೆಣ್ಮಕ್ಕಳು ವೆಲ್ ಕಟ್ಟಿಿಕೊಂಡು ಮುಖ ಕಾಣದಷ್ಟು ಮುಚ್ಚಿಿಕೊಂಡು. ಮೈ ತುಂಬ ಸ್ವೆೆಟರ್ ಹಾಕಿಕೊಂಡು ಹೊರಗ ಬರೊವಂಗಾಗೈತಿ. ಇನ್ನ ಮುಂಜಾನಿ ಕೆಲಸಕ್ಕ ಹೋಗೊರಂತೂ ಹೆಂಗಪ್ಪ ಹೊರಗ ಹೋಗೋದು ಎನ್ನುವಂಗಾಗೈತಿ.
ಬಿಸಿಲು ನಾಡು ಕೊಪ್ಪಳ ಈಗ ಕೂಲ್ ಕೂಲ್ ಆಗೈತಿ. ಕಳೆದ ನಾಲ್ಕು ದಿನಗಳಿಂದ ಕೊಪ್ಪಳ ಜಿಲ್ಲೆೆಯಲ್ಲಿ ತಾಪಮಾನ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈಗ ಕೊಪ್ಪಳದಲ್ಲಿ 13 ಡಿಗ್ರಿಿ ಸೆಲ್ಸಿಿಯಸ್ ತಾಪಮಾನವಿದ್ದು ಈ ತಾಪಮಾನ ಇನ್ನೂ 2-3 ದಿನ ತಾಪಮಾನ 11-12 ಡಿಗ್ರಿಿ ಸೆಲ್ಸಿಿಯಸ್ ಗೆ ಇಳಿಕೆಯಾಗುವ ಸಂಭವವಿದೆ.
ಬಿಸಿಲಿನ ಝಳದಲ್ಲಿದ್ದವರಿಗೆ ಈಗ ಥಂಡಿ ಥಂಡಿಯಾಗಿದೆ. ವಾಕಿಂಗ್ ಹೋಗುವವರು ಛಳಿಗೆ ಹೆದರಿಕೊಂಡು ಮನೆ ಸೇರಿದ್ದಾಾರೆ.ಇಷ್ಟು ಕಡಿಮೆ ತಾಪಮಾನ ದಾಖಲಾಗಿರುವುದು ಈ ವರ್ಷದಲ್ಲಿ ಇದೇ ಮೊದಲಾಗಿದೆ. ಛಳಿ ವಾತವರಣದಿಂದ ರಕ್ಷಿಸಿಕೊಳ್ಳಲು ಹವಾಮಾನ ಇಲಾಖೆ ಸೂಚನೆ ನೀಡಿದೆ. ಆರೋಗ್ಯದ ಕಡೆ ಗಮನ ಹರಿಸಬೇಕೆಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ನಮಗ ಬಿಸಿಲ ಪಾಡ ನೋಡ್ರಿ, ಥಂಡಿಗೆ ಹೊರಗ ಬರಾಕ ಆಗೋವಲ್ದು

