ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.28: ವಿದ್ಯುತ್ ದರ ಏರಿಕೆಯಿಂದಾಗಿ ನೇಕಾರರ ಬದುಕು ಕಷ್ಟವಾಗಿದೆ. ಹದಿನೈದು ದಿನದೊಳಗಾಗಿ ನೇಕಾರರಿಗೆ 20 ಹೆಚ್ ಪಿವರೆಗೂ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಇಂದು ಜವಳಿ ಉತ್ಪಾದಕರ ಸಂಘದಿಂದ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಇಂದು ಭಾಗ್ಯನಗರದಿಂದ ಕೊಪ್ಪಳ ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆ ನಡೆಸಿ ಸರಕಾರ ವಿದ್ಯುತ್ ದರ ಏರಿಕೆ ಮಾಡಲು ಹಿಂದಿನ ಸರಕಾರ ಕಾರಣ ಎಂದು ಹೇಳುತ್ತಾರೆ. ಹಾಗಾದರೆ ಹಿಂದಿನ ಸರಕಾರದ ಅವಧಿಯಲ್ಲಿಯ ಯೋಜನೆಗಳನ್ನು ತಡೆ ಹಿಡಿದಿದ್ದರು. ಅದರಂತೆ ವಿದ್ಯುತ್ ದರ ಏರಿಕೆಯನ್ನು ಕೈ ಬಿಡಬಹುದಾಗಿತ್ತು ಎಂದು ಹಿರಿಯ ವಕೀಲರಾದ ಆರ್ ಬಿ ಪಾನಗಂಟಿ ಹೇಳಿದರು.
ವಿದ್ಯುತ್ ಮಗ್ಗಗಳಿಗೆ ಕನಿಷ್ಠ ದರ ಎಫ್ಎಸಿ ಕೈ ಬಿಡಬೇಕು. ಕಟ್ಟಡ ಕಾರ್ಮಿಕರಿಗೆ ನೀಡಿದ ಮಾದರಿಯಲ್ಲಿ ನೇಕಾರರಿಗೂ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜವಳಿ ಉತ್ಪಾದಕ ಸಂಘದ ಕೃಷ್ಣಾ ಕಬ್ಬೇರ, ಯಮನಪ್ಪ ಕಬ್ಬೇರ. ಅಶೋಕ ಗೋರಂಟ್ಲಿ, ಬಿಜೆಪಿ ಮುಖಂಡರಾದ ಮಂಜುಳಾ ಕರಡಿ, ವಿ ಎಂ ಭೂಸನೂರಮಠ ಸೇರಿ ಹಲವರು ಇದ್ದರು.