ಸುದ್ದಿಮೂಲ ವಾರ್ತೆ ಬೆಂಗಳೂರು, ಜ.06:
ಸಂಸತ್ತಿಿನಲ್ಲಿ ಅಂಗೀಕಾರಗೊಂಡು ರಾಷ್ಟ್ರದಲ್ಲಿ ಜಾರಿಯಾಗಿರುವ ವಿಬಿ ಜಿ ರಾಮ್ಜಿ ಯೋಜನೆ ಪರ ರಾಜ್ಯದಲ್ಲಿ ಜ.15ರಿಂದ ೆ.28ರವರೆಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿಜೆಪಿ ಕಚೇರಿ ಜಗನ್ನಾಾಥ ಭವನದಲ್ಲಿ ಅವರು ಸುದ್ದಿಗೋಷ್ಠಿಿಯಲ್ಲಿ ಮತನಾಡಿದರು. ಕಾಂಗ್ರೆೆಸ್ ಸರ್ಕಾರ ಮಹಾತ್ಮ ಗಾಂಧಿ ಹೆಸರಿನಲ್ಲಿದ್ದ ನರೇಗಾ ಯೋಜನೆಯ ಹೆಸರು ಬದಲಿಸಿ ಅವರನ್ನು ಮತ್ತೊೊಮ್ಮೆೆ ಹತ್ಯೆೆ ಮಾಡಿದೆ ಎಂದು ಜನರಿಗೆ ಸುಳ್ಳು ಮಾಹಿತಿ ಹರಡುತ್ತಿಿದೆ. ಇದರ ವಿರುದ್ಧ ಬಿಜೆಪಿ ಅಭಿಯಾನ ನಡೆಸಿ ಯೋಜನೆಯ ಉಪಯೋಗಗಳನ್ನು ಜನರಿಗೆ ತಲುಪಿಸಲಾಗುವುದು ಎಂದರು.
ಅರಸು ದಾಖಲೆ ಭ್ರಮೆ
ಸಿದ್ದರಾಮಯ್ಯ ಸುದೀರ್ಘ ಅವಧಿಯವರೆಗೆ ಸಿಎಂ ಆಗಿ ಅರಸು ದಾಖಲೆ ಮುರಿದಿದ್ದೇನೆ ಅನ್ನೋೋದು ಭ್ರಮೆ ಮಾತ್ರ. ಅವರು ಸುಧೀರ್ಘ ಕಾಲ ಆಡಳಿತ ನಡೆಸಿ ಏನು ಸಾಧನೆ ಮಾಡಿದ್ದಾರೆ ಎಂದು ಜನರು ಕೇಳುತ್ತಿಿದ್ದಾರೆ ಎಂದು ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪತ್ರಿಿಕೆಗಳ ಮುಖಪುಟದಲ್ಲಿ ಅರಸು ಅವರ ದಾಖಲೆ ಮುರಿದಿದ್ದಾರೆ ಎಂದು ಹೆಮ್ಮೆೆಯಿಂದ ಜಾಹೀರಾತು ಕೊಟ್ಟಿಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿ, ತಮ್ಮ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಅರಸು ಭೂಸುಧಾರಣಾ ಕಾಯ್ದೆೆಗಳನ್ನು ತಂದು ಬದಲಾವಣೆಗೆ ಕಾರಣರಾದರು ಮಲ ಹೊರುವ ಅನಿಷ್ಟ ಪದ್ಧತಿ ತೊಲಗಿಸಿದರು, ವೃದ್ಧಾಾಪ್ಯ ವೇತನ, ವಿಧವಾ ವೇತನ ತಂದು ದನಿ ಇಲ್ಲದವರಿಗೆ ಧ್ವನಿ ಆಗಿದ್ದರು ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ಕೊಟ್ಟಿಿದ್ದು ಅರಸು. ಅರಸು ಅವರನ್ನು ಅಪಮಾನ ಮಾಡಿ ಕಾಂಗ್ರೆೆಸ್ ನಿಂದ ಉಚ್ಛಾಾಟನೆ ಮಾಡಲಾಯಿತು. ಅವರಿಗೆ ಅಧಿಕಾರ ನಡೆಸಲು ಬಿಟ್ಟಿಿದ್ರೆೆ ಪರಿಪೂರ್ಣ ಅವಧಿಗೆ ಸಿಎಂ ಆಗಿ ದಾಖಲೆ ಬರೆಯುತ್ತಿಿದ್ದರು ಎಂದರು.
ಸುಧೀರ್ಘ ಆಡಳಿತ ನಡೆಸಿದ ಸಿಎಂ ಮಾಡಿರುವ ಸಾಧನೆಗಳೇನು? ಜ.15ರಿಂದ ರಾಜ್ಯದಲ್ಲಿ ವಿಬಿ ಜಿ ರಾಮ್ಜಿ ಪರ ಜಾಗೃತಿ ಅಭಿಯಾನ: ಬಿವೈವಿ

