ಸುದ್ದಿಮೂಲ ವಾರ್ತೆ
ಮೈಸೂರು,ಮೇ.01: ಮೈಸೂರು ನಗರದಲ್ಲಿ ಏ.30 ರಂದು ರೋಡ್ ಶೋ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯು, ರೋಡ್ ಶೋ ಸಂದರ್ಭದಲ್ಲಿ ಬಿಗಿ ಭದ್ರತೆಯನ್ನು ಕೂಡ ಆಯೋಜಿಸಲಾಗಿತ್ತು, ಸಾರ್ವಜನಿಕರು ಮೋದಿಯನ್ನು ನೋಡುವ ಅಭಿಮಾನದಲ್ಲಿ ಹೂವುಗಳಿಂದ ಅವರನ್ನು ಸ್ವಾಗತಿಸಲಾಗಿತ್ತು ಈ ವೇಳೆ ವ್ಯಕ್ತಿಯೊಬ್ಬ ಹೂವು ಹಾಕುವ ಬದಲು ತನ್ನ ಮೊಬೈಲ್ ಪೋನ್ ಅನ್ನು ಏಸೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಇದು ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು, ಭದ್ರತೆಯ ಲೋಪ ಎಂದು ಪರಿಗಣಿಸಿ ವಿಚಾರಣೆ ನಡೆಸಿದಾಗ ವ್ಯಕ್ತಿಯೊಬ್ಬನು ಹೂವು ಹಾಕುವುದರ ಬದಲು ತನ್ನ ಮೊಬೈಲ್ ಪೋನ್ ಅನ್ನು ಹಾಕಿದ್ದಾನೆ ಏಂಬುವುದು ತಿಳಿದು ಬಂದಿದೆ.
ಕೂಡಲೇ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಕರೆದ ಮೋದಿಯವರು ಮೊಬೈಲ್ ಮಾಲೀಕರಿಗೆ ಹಿಂದಿರುಗಿಸುವಂತೆ ಸೂಚಿಸಿದ್ದಾರೆ. ಹೂವಿನ ಜೊತೆ ತೂರಿ ಬಂದ ಮೊಬೈಲ್ ಅನ್ನು ಸ್ಥಳದಲ್ಲಿಯೇ ಇದ್ದ ಪೊಲೀಸರಿಗೆ ಭದ್ರತಾ ಸಿಬ್ಬಂದಿ ನೀಡಿದ್ದಾರೆ.
ಆ ಬಳಿಕ ಮಾಲೊಇಕರನ್ನು ಪತ್ತೆ ಮಾಡಿದ ಪೊಲೀಸರು, ಅವರಿಗೆ ಮೊಬೈಲ್ ಹಿಂದಿರುಗಿಸಿದ್ದಾರೆ. ಆದರೆ, ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಹೆಚ್ಚಿನ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.