ಸುದ್ದಿಮೂಲ ವಾರ್ತೆ ಬೀದರ್, ಅ.20:
ಇದೇ 23ರಂದು ಜನವಾಡ ಹತ್ತಿಿರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ಎಸ್ಎಸ್ಕೆ) ಆಡಳಿತ ಮಂಡಳಿಗೆ 2025- 2030ರ ಅವಧಿಗಾಗಿ ನಡೆಯಲಿರುವ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಬಿಜೆಪಿ ಪ್ರಕಟಿಸಿದೆ.
ಚುನಾವಣೆ ಸಂಬಂಧವಾಗಿ ಪಕ್ಷದ ಸಭೆ ನಡೆಸಲಾಗಿದೆ. ಸುದೀರ್ಘ ಚರ್ಚಿಸಿದ ಬಳಿಕ ಅತಿವೃಷ್ಟಿಿ ಸಂಕಷ್ಟ ಹಾಗೂ ರೈತರ ಮತ್ತು ಕಬ್ಬು ಬೆಳೆಗಾರರ ಹಿತದಿಂದ ಚುನಾವಣೆ ಕಣದಿಂದ ಹಿಂದೆ ಸರಿದಿರುವುದಾಗಿ ಕಾರ್ಖಾನೆ ಚುನಾವಣೆ ಉಸ್ತುವಾರಿ ಗುರುನಾಥ ಜ್ಯಾಾಂತಿಕರ್ ಸೋಮವಾರ ಪತ್ರಿಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್ಎಸ್ಎಸ್ಕೆ ಚುನಾವಣೆಗಾಗಿ ಪಕ್ಷದ ಬೆಂಬಲಿತ ಪೆನಾಲ್ ಮಾಡಲಾಗಿತ್ತು. ಮುಂಚೆ ಕಾರ್ಖಾನೆಯ ಚುನಾವಣೆಯು ಕಳೆದ ಸೆ.27ರಂದು ನಿಗದಿಯಾಗಿತ್ತು. ಚುನಾವಣೆ ಸಂಬಂಧ ಪ್ರಚಾರ ಸಹ ಆರಂಭಿಸಲಾಗಿತ್ತು. ಹಲವು ಅರ್ಹ ಸದಸ್ಯ ಮತದಾರರ ಹೆಸರು ಕೈಬಿಟ್ಟ ಅಂಶ ಗಮನಕ್ಕೆೆ ಬಂದ ಬಳಿಕ ಎಲ್ಲ ಅರ್ಹರಿಗೂ ಮತದಾನದ ಹಕ್ಕು ಸಿಗಬೇಕೆಂಬ ಉದ್ದೇಶದಿಂದ ಕಾರ್ಖಾನೆಯ ಕೆಲ ಸದಸ್ಯ ರೈತರೇ ಕಲಬುರಗಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದರ ಮೇಲೆ ಸೆ.27ರಂದು ನಡೆಯಬೇಕಿದ್ದ ಕಾರ್ಖಾನೆ ಚುನಾವಣೆಗೆ ತಡೆಯಾಜ್ಞೆ ಬಂದು, ಚುನಾವಣೆ ಮುಂದೂಡಲಾಗಿತ್ತು. ಇದೀಗ ತಡೆಯಾಜ್ಞೆ ತೆರವಾದ ಬಳಿಕ ಅ.23 ರಂದು ಚುನಾವಣೆ ನಡೆಯುತ್ತಿಿದೆ.
ಸದ್ಯ ಜಿಲ್ಲೆಯಲ್ಲಿ ರೈತರ ಸ್ಥಿಿತಿ ಚೆನ್ನಾಾಗಿಲ್ಲ. ಅತಿವೃಷ್ಟಿಿಯಿಂದ ಬೆಳೆಗಳು ನೀರುಪಾಲಾಗಿವೆ. ರೈತರಿಗೆ ಇನ್ನೂ ಪರಿಹಾರ ಸಿಕ್ಕಿಿಲ್ಲ. ಹಿಂಗಾರು ಬಿತ್ತನೆಗೂ ರೈತರಲ್ಲಿ ಗತಿಯಲ್ಲದಂತಾಗಿದೆ. ಕಬ್ಬು ಬೆಳೆ ಮಾತ್ರ ರೈತರಿಗೆ ಈಗ ಏಕೈಕ ಆಸರೆಯಾಗಿದೆ. ಬೇಗ ಕಾರ್ಖಾನೆ ಆರಂಭವಾಗಿ ಕಬ್ಬು ಕ್ರಷಿಂಗ್ ಆರಂಭವಾಗಲಿ ಎಂಬ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ್ತು ಎದುರಾಳಿ ಪೆನಾಲ್ನವರು ಕಾರ್ಖಾನೆಯನ್ನು ಮುಂದೆ ಸುಸೂತ್ರ, ಪಾರದರ್ಶಕವಾಗಿ ನಡೆಸಲಿ ಎಂಬ ಹಿನ್ನೆೆಲೆಯಲ್ಲಿ ಬಿಜೆಪಿ ಬೆಂಬಲಿತ ಪೆನಾಲ್ ತನ್ನೆೆಲ್ಲ ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆೆ ಸರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಸೋಲಿನ ಭೀತಿಯೇ ?
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ನೇತೃತ್ವದಲ್ಲಿ ನಾರಂಜಾ ಸಹಕಾರ ಕಾರ್ಖಾನೆ ಚುನಾವಣೆಗೆ ಸಿದ್ಧತೆ ನಡೆಸಲಾಗಿತ್ತು. ನಾಲ್ವರು ಶಾಸಕರು ಸೇರಿ ಪಕ್ಷದ ಮುಖಂಡರು ಒಲ್ಲದ ಮನಸ್ಸಿಿನಿಂದಲೇ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಅರ್ಹ ಮತದಾರರಿಗೆ ಮತದಾನದಿಂದ ಕೈ ಬಿಡಲಾಗಿದೆ ಎಂದು ಕೋರ್ಟ್ ಮೆಟ್ಟಿಿಲೇರಲಾಯಿತು. ಈ ಬಗ್ಗೆೆ ಪತ್ರಿಿಕಾಗೋಷ್ಟಿಿಗಳಲ್ಲಿ ಪುಟಗಟ್ಟಲೇ ದಾಖಲೆಗಳು, ನಿಮಿಷಗಟ್ಟಲೇ ವಿವರಣೆ ನೀಡಿದ ಸೋಮನಾಥ ಪಾಟೀಲ್ ದಿಢೀರ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ಅನುಮಾನಕ್ಕೆೆ ಕಾರಣವಾಗಿದೆ. ರಾಷ್ಟ್ರೀಯ ಪಕ್ಷ ಹೀಗೆ ಮತದಾನಕ್ಕೆೆ ಎರಡು ದಿನಗಳು ಇರುವಾಗ ಕಣದಿಂದ ಹಿಂದೆ ಸರಿದಿರುವುದು ಪಕ್ಷದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಅನುಮಾನ ಮೂಡಿಸಿದೆ. ಸಿದ್ಧತೆ ಇಲ್ಲದೇ ಚುನಾವಣಾ ಕಣಕ್ಕೆೆ ಇಳಿದಿರುವುದೇ ಸೋಮನಾಥ ಪಾಟೀಲ್ ಮಾಡಿದ ಮೊದಲ ಪ್ರಮಾದ ಎನ್ನುತ್ತಿಿದ್ದಾರೆ ಬಿಜೆಪಿಗರು. ಹಾಗೇ, ಇತ್ತೀಚೆಗೆ ಭಾಲ್ಕಿಿಯಲ್ಲಿ ನಡೆದ ಮಹಾತ್ಮಾಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣಾ ಕಣಕ್ಕೆೆ ಇಳಿದ ಸೋಮನಾಥ್ ಪಾಟೀಲ್ ನೇತೃತ್ವದ ಪೆನಾಲ್ನ ಅಭ್ಯರ್ಥಿಗಳ ಠೇವಣಿ ಕೂಡ ಉಳಿದಿಲ್ಲ. ಅಮರ್ ಖಂಡ್ರೆೆ ಪೆನಾಲ್ನ ಗೆದ್ದ ಒಬ್ಬ ಅಭ್ಯರ್ಥಿ ಪಡೆದ ಮತಗಳು ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳೂ ಸೇರಿ ಪಡೆದಿಲ್ಲ. ಹಾಗಾಗಿ, ಮತ್ತೇ ಸೋಲುಂಟಾಗುವ ಭೀತಿಯಿಂದ ಕಣದಿಂದ ದಿಢೀರ್ ಹಿಂದೆ ಸರಿದಿರಬಹುದಾ ? ಅಥವಾ ಮತ್ತೇನಾದರೂ ಮಾತುಕತೆ ನಡೆದು ಸೋಮನಾಥ್ ಪಾಟೀಲ್ ಕಣದಿಂದ ಹಿಂದೆ ಸರಿದರಾ ? ಸಾರ್ವಜನಿಕರು ಪ್ರಶ್ನಿಿಸುತ್ತಿಿದ್ದಾರೆ.
ಮತದಾನಕ್ಕೆೆ ಸಿದ್ಧತೆ ಆರಂಭವಾಗಿರುವಾಗ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದರೂ ಯಾವುದೇ ಪ್ರಯೋಜನವಿಲ್ಲ ಎಂಬುದು ರಾಷ್ಟ್ರೀಯ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಗೆ ಗೊತ್ತಿಿಲ್ಲವೇ ? ನಾಮಪತ್ರ ಹಿಂಪಡೆಯದೇ ಈಗ ರೈತರ ಬಗ್ಗೆೆ ಕಳವಳ ವ್ಯಕ್ತಪಡಿಸುತ್ತಿಿರುವುದು ಏಕೆ?