ಮೊಯಿನುದ್ದೀನ್ ಕಾಟಮಳ್ಳಿಿ ದೇವದುರ್ಗ, ನ.05:
ರೈತರ ವಿಚಾರದಲ್ಲಿ ಅಧಿಕಾರಿಗಳು ಪ್ರಾಾಮಾಣಿಕ ಸೇವೆ ಸಲ್ಲಿಸಬೇಕು. ಹತ್ತಿಿ ಖರೀದಿ ಕೇಂದ್ರದಲ್ಲಿರುವ ಹಲವು ಸಮಸ್ಯೆೆಗಳು ಸರಿದೂಗಿಸುವ ಕೆಲಸ ಅಧಿಕಾರಿಗಳು ಮಾಡಬೇಕೆಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಶಾಸಕಿ ಅಧ್ಯಕ್ಷತೆಯಲ್ಲಿ ರೈತರು ಹಾಗೂ ಜಿನ್ನಿಿಂಗ್ ್ಯಾಕ್ಟರ್ಗಳ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
ಆನ್ಲೈನ್ ಮೂಲಕ ಅಪ್ಲೋೋಡ್ ಮಾಡಲು ತಾಂತ್ರಿಿಕ ಸಮಸ್ಯೆೆಯಿಂದ ರೈತರು ಬೇಸತ್ತಿಿದ್ದಾರೆ. ಸ್ಥಳೀಯ ರೈತರಿಗೆ ಮೊದಲು ಆದತ್ಯೆೆ ನೀಡುವಂತೆ ಜಿನ್ನಿಿಂಗ್ ್ಯಾಕ್ಟರ್ ಮಾಲೀಕರಿಗೆ ಸೂಚನೆ ನೀಡಿದರು.
ಹಲವು ರೈತರು ಸಮಸ್ಯೆೆ ಕುರಿತು ನನ್ನ ಬಳಿ ಹೇಳಿಕೊಂಡಿದ್ದಾರೆ. ಹತ್ತಿಿ ಖರೀದಿ ಕೇಂದ್ರದಲ್ಲಿರುವ ಸಮಸ್ಯೆೆಗಳು ಕೂಡಲೇ ಸರಿಪಡಿಸಬೇಕು. ಪದೇ-ಪದೇ ರೈತರು ನನ್ನ ಹತ್ತಿಿರ ಬರದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ವೇಬ್ರಿಿಜ್ನಲ್ಲಿ ತೂಕದ ಸಮಸ್ಯೆೆ ಹೆಚ್ಚಾಾಗಿ ಕೇಳಿ ಬರುತ್ತಿಿದ್ದು, ತೂಕ ಮಾಪನ ಇಲಾಖೆಯ ಅಧಿಕಾರಿಗಳು ಸರಿಪಡಿಸಲು ಕೃಷಿ ಅಧಿಕಾರಿಗಳು ಮಹತ್ವದ ಜವಾಬ್ದಾಾರಿ ವಹಿಸಬೇಕು. ಬೆಳಿಗ್ಗೆೆಯಿಂದ ಸಂಜೆತನಕ ಹತ್ತಿಿ ಖರೀದಿ ಕೇಂದ್ರದಲ್ಲಿ ಹತ್ತಿಿ ತುಂಬಿದ ವಾಹನಗಳು ನಿಲ್ಲಿಸಿಕೊಂಡು ಸಂಜೆ ನಂತರ ವಾಪಸ್ ಕಳಿಸಿದ್ದು ಏಕೆ ಎಂದು ರೈತ ಮುಖಂಡರ ನರಸಣ್ಣ ನಾಯಕ ಜಾಲಹಳ್ಳಿಿ ಅಧಿಕಾರಿಗಳಿಗೆ ಪ್ರಶ್ನಿಿಸಿದರು.
ಕಾರಣ ನೆಪ ಹೇಳಿಕೊಂಡ ದಾರಿ ತಪ್ಪಿಿಸುವ ಹರಿಕೆ ಉತ್ತರ ನೀಡುತ್ತಿಿದ್ದ ಅಧಿಕಾರಿಗಳನ್ನು ಶಾಸಕಿ ತರಾಟೆಗೆ ತೆಗೆದುಕೊಂಡರು.
ಹತ್ತಿಿ ಬೆಳೆದ ನೂರಾರು ರೈತರು ಮಾರಾಟ ಮಾಡಲು ಹಲವು ಸಮಸ್ಯೆೆಗಳು ಎದುರಿಸುತ್ತಿಿದ್ದಾರೆ. ಅಂತಹ ರೈತರಿಗೆ ನ್ಯಾಾಯ ಒದಗಿಸಬೇಕೆಂದು ರೈತ ಮುಖಂಡ ಮಸ್ತಾಾನ್ ನಾಯಕ ಅಧಿಕಾರಿಗಳ ಗಮನಕ್ಕೆೆ ತಂದರೂ. ಅಧಿಕಾರಿಗಳು ಹೇಳೋದೊಂದು ಮಾಡೊದೊಂದು ಕ್ಷೇತ್ರದ ಶಾಸಕರಿಗೆ ಕೆಟ್ಟ ಹೆಸರು ಬರಲಿದ್ದು, ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಬಾರಿ ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಹತ್ತಿಿ ಬೆಳೆದಿದ್ದಾರೆ. ಮಾರಾಟಕ್ಕೆೆ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
ಹತ್ತಿಿ ಖರೀದಿ ಕೇಂದ್ರದ ಜಿನ್ನಿಿಂಗ್ ್ಯಾಕ್ಟರ್ಗಳ ಮಾಲೀಕರು ಸಣ್ಣಪುಟ್ಟ ಸಮಸ್ಯೆೆಗಳು ಇದ್ದಾಗ ಅವುಗಳನ್ನು ಸರಿಪಡಿಸಿಕೊಂಡು ರೈತರ ಸಮಸ್ಯೆೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಲೀಕರು ಮಾಡಬೇಕು. ಹತ್ತಿಿ ಖರೀದಿ ಕೇಂದ್ರದಲ್ಲಿರುವ ಸಮಸ್ಯೆೆಗಳಿಂದ ಹತ್ತಿಿ ಮಾರಾಟ ಮಾಡುವ ನೂರಾರು ರೈತರು ಮನೆಯಲ್ಲಿ ಹತ್ತಿಿ ಜೋಪಾನ ಮಾಡುತ್ತಿಿದ್ದಾರೆ. ಅಧಿಕಾರಿಗಳು ಯಾವುದೇ ಕಾರಣಕ್ಕೆೆ ರೈತರಿಗೆ ಕಚೇರಿಗೆ ಅಲೆದಾಡಿಸದೆ ಅವರ ಸಮಸ್ಯೆೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕಿ ಕಟ್ಟುನಿಟ್ಟಾಾಗಿ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮರಿಲಿಂಗ ಪಾಟೀಲ್, ಮಸ್ತನ್ ನಾಯಕ, ಮೌನೇಶ ಜಾಲಹಳ್ಳಿಿ, ನರಸಣ್ಣ ನಾಯಕ ಜಾಲಹಳ್ಳಿಿ, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ನಾಯಕ, ಪಿಐ ಎಸ್ ಮಂಜುನಾಥ ಸೇರಿದಂತೆ ವಿವಿಧ ರೈತ ಸಂಘಟನೆಯ ಮುಖಂಡರು ಪಾಲ್ಗೊೊಂಡಿದ್ದರು.
ಕೋಟ್ : 01
ಹೇರುಂಡಿ ಗ್ರಾಾಮದ ಕಂದಾಯ ವಿಎ ರೈತರಿಗೆ ಪರಿಹಾರ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ಮಾಡಲಾಗಿದೆ. ಅಮಾನತ್ತು ಮಾಡುವ ಜೊತೆಗೆ ಹಣ ವಸೂಲಿ ಮಾಡಬೇಕು. ಅತಿವೃಷ್ಠಿಿಯಲ್ಲಿ ಬೆಳೆ ಹಾನಿ ಬಹುತೇಕ ರೈತರಿಗೆ ಪರಿಹಾರ ಬಂದಿಲ್ಲ. ಕೂಡಲೇ ರೈತರಿಗೆ ಪರಿಹಾರದ ಹಣ ಬರುವಂತೆ ತಹಶೀಲ್ದಾಾರರಿಗೆ ಸೂಚನೆ ನೀಡಿದರು. ರೈತರಿಗೆ ಮೋಸ ಮಾಡುವ ಅಧಿಕಾರಿಗಳ ವಿರುದ್ಧ ಮುಲ್ಲಾಜಿಲ್ಲದೇ ಕ್ರಮ ಕೈಗೊಳ್ಳಬೇಕಾಗುತ್ತದೆ.
-ಕರೆಮ್ಮ ಗೋಪಾಲಕೃಷ್ಣ, ಶಾಸಕಿ
*ರೈತರ ವಿಚಾರ ಬಂದಾಗ ಅಧಿಕಾರಿಗಳು ಪ್ರಾಾಮಾಣಿಕ ಸೇವೆ ಸಲ್ಲಿಸಿ * ಹತ್ತಿಿ ಖರೀದಿ ಕೇಂದ್ರದಲ್ಲಿರುವ ಹಲವು ಸಮಸ್ಯೆೆಗಳು ಸರಿದೂಗಿಸಿ ಜಿನ್ನಿಿಂಗ್ ್ಯಾಕ್ಟರ್ಗಳ ಮಾಲೀಕರು ರೈತರ ಸಮಸ್ಯೆೆಗೆ ಸ್ಪಂದಿಸಿ: ಶಾಸಕಿ ಕರೆಮ್ಮ ಗೋಪಾಲಕೃಷ್ಣ

