ಸುದ್ದಿಮೂಲ ವಾರ್ತೆ ಬೆಂಗಳೂರು, ಜ.18:
ಶೈಕ್ಷಣಿಕ ಅವಧಿಮುಗಿ ಮುಗಿಯಲು ಇನ್ನೆೆರಡುತಿಂಗಳು ಬಾಕಿ ಇರುವಾಗ ಶಾಲಾ ಶಿಕ್ಷಣ ಇಲಾಖೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿಿರುವ ವಿದ್ಯಾಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಸಲು ವಿದ್ಯಾಾ ವಿಕಾಸ ಯೋಜನೆಯಡಿ 6 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಶೈಕ್ಷಣಿಕ ಅವಧಿ ಕೊನೆಗೊಳ್ಳುತ್ತಿಿರುವ ಸಂದರ್ಭದಲ್ಲಿ ವಿದ್ಯಾಾರ್ಥಿಗಳಿಗೆ ಸರ್ಕಾರ ಶೂ ಮತ್ತು ಸಾಕ್ಸ್ ಭಾಗ್ಯ ನೀಡಲು ಹೊರಟಿದೆ. ಆದರೆ ವಿತರಣೆ ಮಾಡಲು ಕನಿಷ್ಟ ಮೂರು ತಿಂಗಳು ಬೇಕು. ಆ ವೇಳೆಗೆ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಘೋಷಣೆಯಾಗಿರುತ್ತದೆ.
ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, ಶೂ ಮತ್ತು ಸ್ಸಾೃ್ ಸರಬರಾಜಿಗೆ ಏಜೆನ್ಸಿಿಗಳನ್ನು ಆಯ್ಕೆೆ ಮಾಡಲು ಪ್ರತಿಯೊಂದು ಸರ್ಕಾರಿ ಶಾಲೆಯಲ್ಲೂ ಸಮಿತಿ ರಚಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನದಂತೆ, ಪ್ರತಿ ಸಮಿತಿಯಲ್ಲಿ ಶಾಲಾ ಅಭಿವೃದ್ಧಿಿ ಮತ್ತು ಮೇಲ್ವಿಿಚಾರಣಾಸಮಿತಿ ಅಧ್ಯಕ್ಷರು, ಮುಖ್ಯೋೋಪಾಧ್ಯಾಾಯರು ಹಾಗೂ ಎಸ್.ಡಿ.ಎಂ.ಸಿಗೆ ನಾಮ ನಿರ್ದೇಶನಗೊಂಡ ಮೂವರು ಸದಸ್ಯರು ಇರಬೇಕು. ಈ ಮೂವರಲ್ಲಿ ಕನಿಷ್ಠ ಇಬ್ಬರು ಮಹಿಳಾ ಸದಸ್ಯರಿರಬೇಕು ಎಂಬ ನಿಯಮ ಕಡ್ಡಾಾಯವಾಗಿದೆ.
ಸುತ್ತೋೋಲೆಯಲ್ಲಿ ತಿಳಿಸಿರುವಂತೆ, ಆಯ್ಕೆೆ ಸಮಿತಿಗಳು 1ರಿಂದ 5ನೇ ತರಗತಿವರೆಗಿನ ಪ್ರತಿ ವಿದ್ಯಾಾರ್ಥಿಗೆ 265 ರೂ. 6ರಿಂದ 8ನೇ ತರಗತಿವರೆಗಿನ ಪ್ರತಿ ವಿದ್ಯಾಾರ್ಥಿಗೆ 295 ರೂ. ಮತ್ತು 9 ಹಾಗೂ 10ನೇ ತರಗತಿಯ ಪ್ರತಿ ವಿದ್ಯಾಾರ್ಥಿಗೆ 325 ರೂ. ವೆಚ್ಚದಲ್ಲಿ ಶೂ ಮತ್ತು ಸಾಕ್ಸ್ ಗಳನ್ನು ಸರಬರಾಜು ಮಾಡಬೇಕಾಗಿದೆ. ಶೂ ಮತ್ತು ಸಾಕ್ಸ್ ಗಳ ಖರೀದಿ ಹಾಗೂ ವಿತರಣಾ ಪ್ರಕ್ರಿಿಯೆಯನ್ನು ಮೂರು ತಿಂಗಳೊಳಗೆ ಪೂರ್ಣ ಗೊಳಿಸಬೇಕು ಎಂದು ಸೂಚಿಸಲಾಗಿದೆ.
ಎಲ್ಲವೂ ಸುಗಮವಾಗಿ ನಡೆದರೆ ಏಪ್ರಿಿಲ್ ವೇಳೆಗೆ ಶೂ ಮತ್ತು ಸಾಕ್ಸ್ ಖರೀದಿ ಹಾಗೂ ವಿತರಣಾ ಪ್ರಕ್ರಿಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಶೂ ಮತ್ತು ಸಾಕ್ಸ್ಗಳನ್ನು ಶಾಲಾ ಸಮವಸದ ಜೊತೆ ವಿತರಿಸಬೇಕಾಗಿದೆ. ಆದರೆ ಅನುದಾನ ಬಿಡುಗಡೆಗೆ ಆಗಿರುವ ವಿಳಂಬ ಹಾಗೂ ಶೂ, ಸಾಕ್ಸ್ ಸರಬರಾಜಿಗೆ ಏಜೆನ್ಸಿಿಆಯ್ಕೆೆ ಮಾಡಲು ಸಮಿತಿಗಳ ರಚನೆಯು ಮಕ್ಕಳ ಹಕ್ಕುಗಳ ಹೋರಾಟಗಾರರಿಂದ ಟೀಕೆಗೆ ಗುರಿಯಾಗಿದೆ.
ಮಕ್ಕಳ ಹಕ್ಕುಗಳ ಹೋರಾಟಗಾರ ನಾಗಸಿಂಹ ಜಿ. ರಾವ್ ಅವರು, ಸರ್ಕಾರದ ವಿದ್ಯಾಾ ವಿಕಾಸ ಯೋಜನೆಯಡಿ ಒದಗಿಸಲಾಗುವ ಶೂ ಮತ್ತು ಸಾಕ್ಸ್ಗಳು ಸರಿಯಾದ ಸಮಯದಲ್ಲಿ ಮಕ್ಕಳಿಗೆ ತಲುಪಿದರೆ ಅದು ಶಾಲಾ ಮಕ್ಕಳಿಗೆ ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಿದರು.
ಶಾಲೆಯ ಮೊದಲ ದಿನದಿಂದಲೇ ಸಮವಸ ಶೂ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿದರೆ ಅದು ಮಕ್ಕಳ ಹಿತದೃಷ್ಟಿಿಯಿಂದ ತೆಗೆದುಕೊಳ್ಳಲಾದ ಉತ್ತಮ ನಿರ್ಧಾರವಾಗಿರುತ್ತದೆ.ಶೂಗಳ ಗುಣಮಟ್ಟ ಪರಿಶೀಲಿಸಲು ಶಾಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿರುವುದು ಶ್ಲಾಾಘನೀಯ. ಆದರೆ ಈ ಸಮಿತಿಗಳಲ್ಲಿ ವಿದ್ಯಾಾರ್ಥಿ ಪ್ರತಿನಿಧಿಗಳನ್ನು ಸೇರಿಸಿದರೆ ಮಕ್ಕಳ ಭಾಗವಹಿಸುವ ಹಕ್ಕಿಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಮತ್ತು ಅವರ ಧ್ವನಿಗೆ ಮೌಲ್ಯ ಸಿಗುತ್ತದೆ ಎಂದು ಅವರು ಹೇಳಿದರು.

