ದಯಾಶಂಕರ ಮೈಲಿ ಮೈಸೂರು, ನ.10:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಸೋಮವಾರ ಮೈಸೂರಿನಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಡಿಎಸ್ ಹಿರಿಯ ಶಾಸಕ ಜಿ.ಟಿ. ದೇವೇಗೌಡರು ಭಾಗವಹಿಸಿದ್ದರು. ಈ ಸಮಯದಲ್ಲೇ ಜಿಟಿಡಿ ಅವರಿಗೆ ಜೆಡಿಎಸ್ ಕೋರ್ ಕಮಿಟಿಯಿಂದ ಕೊಕ್ ನೀಡಲಾಗಿದೆ.
ಈಗ ಜೆಡಿಎಸ್ ಕೋರ್ ಕಮಿಟಿ ನೂತನ ಅಧ್ಯಕ್ಷರನ್ನಾಾಗಿ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಕೃಷ್ಣಾಾರೆಡ್ಡಿಿ ಅವರನ್ನು ನೇಮಕ ಮಾಡಲಾಗಿದೆ.
ಒಂದು ದಿನದ ಹಿಂದಷ್ಟೇ ಜಿಟಿಡಿ ಅವರು ಮೈಸೂರಿನ ಜಿಲ್ಲಾ ಪಂಚಾಯ್ತಿಿ ನಜೀರ್ಸಾಬ್ ಸಭಾಂಗಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಾಮಿ ನಡೆಸಿದ ದಿಶಾ ಸಭೆಗೆ ಗೈರು ಆಗಿದ್ದರು. ಆದೇ ಸಭಾಂಗಣದಲ್ಲಿ ಸೋಮವಾರ (ನ.10) ರಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ನಡೆಸಿದ ಪ್ರಗತಿ ಪರಿಶೀಲನಾ ಸಭೆಗೆ ಹಾಜರ್ ಆಗಿದ್ದರು. ಅದು ಸಿಎಂ ಪಕ್ಕದಲ್ಲೇ ಆಸೀನರಾಗಿ ಹಸನ್ಮುಖಿಯಾಗಿದ್ದರು.
ಹೀಗೆ ಸಿಎಂ ಜೊತೆ ಸಭೆಯಲ್ಲಿ ಭಾಗವಹಿಸಿದ್ದ ವೇಳೆಯೇ ಜಿಟಿಡಿ ಅವರನ್ನು ಕೋರ್ ಕಮಿಟಿ ಅಧ್ಯಕ್ಷ ಸ್ಥಾಾನದಿಂದ ತೆಗೆದುಹಾಕಲಾಗಿದೆ.
ನಾ ಕರ್ಣನಂತೆ..
ಕನ್ನಡ ರಾಜ್ಯೋೋತ್ಸವ ದಿನದಂದು ಜಿಟಿಡಿ ಅವರು ನಾನು ಕರ್ಣನಂತೆ. ಎಲ್ಲಾ ನೋವುಗಳನ್ನು ಸಹಿಸಿಕೊಂಡಿದ್ದೇನೆ. ನಾನು ಪಕ್ಷ ನಿಷ್ಠೆೆಗೆ ಬದ್ಧನಾದವನು. ಕಾಂಗ್ರೆೆಸ್ಗೆ ಹೋಗಲ್ಲ. ನಾನು ಹೋದ ವರ್ಷ ಚಾಮುಂಡಿಬೆಟ್ಟದಲ್ಲಿ ನಡೆದ ದಸರಾ ಉದ್ಘಾಾಟನಾ ಸಮಾರಂಭದಲ್ಲಿ ಮೂಡಾ ವಿಚಾರಕ್ಕೆೆ ಸಂಬಂಧಿಸಿದಂತೆ ಕುರಿತು ಮಾತನಾಡಿದಾಗ ಬಹುತೇಕ ಮಂದಿ ಕಾಂಗ್ರೆೆಸ್ ಹೋಗುತ್ತೇನೆ ಎಂದು ಭಾವಿಸಿದ್ದರು, ನಾನಾ ಹಾಗೇಲ್ಲೂ ಹೋಗಲ್ಲ ಎಂದು ಹೇಳಿದ್ದರು.
ಹೀಗೆ ಜಿಟಿಡಿ ಹೇಳಿರುವದು ಜನಮಾನಸದಲ್ಲಿ ಹಸಿರಾಗಿರುವಾಗಲೇ ಜೆಡಿಎಸ್ನಿಂದ ರಾಜಕೀಯ ವ್ಯವಹಾರಗಳ ಸಮಿತಿ, ಕೋರ್ ಕಮಿಟಿ, ಶಿಸ್ತುಪಾಲನಾ ಸಮಿತಿ ಹಾಗೂ ಪ್ರಚಾರ ಸಮಿತಿ ರಚನೆಯಾಗಿದ್ದು, ಸಮಿತಿಗಳಿಗೆಲ್ಲ ನೂತನ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಲಾಗಿದೆ. ಆದರೆ, ಪಕ್ಷದ ಹಿರಿಯ ಮುಖಂಡ ಜಿ. ಟಿ. ದೇವೇಗೌಡರನ್ನು ಎಲ್ಲ ಸಮಿತಿಗಳಿಂದಲೂ ಹೊರಗಿಡಲಾಗಿದೆ.
ಕೋರ್ ಕಮಿಟಿ ಎಂಬುದು ಪಕ್ಷದ ಉನ್ನತ ಮಟ್ಟದ ನಿರ್ಧಾರ ತೆಗೆದುಕೊಳ್ಳುವ ಒಂದು ಸಣ್ಣ ಗುಂಪಿನ ಸಮಿತಿಯಾಗಿದ್ದು, ಪಕ್ಷದ ಆಂತರಿಕ ವಿಷಯಗಳು, ಚುನಾವಣಾ ರಣನೀತಿ, ನಾಯಕರ ನೇಮಕ ಮತ್ತು ಪಕ್ಷ ಬಲಪಡಿಸುವಂತಹ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿರುವ ಹಿರಿಯ ಮುಖಂಡ ಜಿ ಟಿ ದೇವೇಗೌಡರನ್ನು ಎಲ್ಲ ಸಮಿತಿಯಿಂದಲೂ ಹೊರಗಿಡಲಾಗಿದೆ ಎಂಬುದು ಈಗ ರಾಜಕೀಯವಾಗಿ ಗಮನಾರ್ಹ ಸಂಗತಿ.
ಇದೇ ಸಂದರ್ಭದಲ್ಲಿ ಜಿ .ಟಿ .ದೇವೇಗೌಡ ಅವರ ಪುತ್ರ ಜಿ ಟಿ ಹರೀಶ್ ಗೌಡ ಅವನನ್ನು ಪ್ರಚಾರ ಸಮಿತಿ ಸದಸ್ಯರನ್ನಾಾಗಿ ನೇಮಿಸಲಾಗಿದೆ. ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಕೋರ್ ಕಮಿಟಿ ಸದಸ್ಯರನ್ನಾಾಗಿ ನೇಮಕ ಮಾಡಲಾಗಿದೆ. ಮಾಜಿ ಸಚಿವ ಎ ಮಂಜು ಇದರ ಸಂಚಾಲಕರಾಗಿದ್ದಾರೆ.
ಎಲ್ಲರ ಕಣ್ಣು ಜಿಟಿಡಿ ಮುಂದಿನ ನಡೆಯೇನು ? ಎಂಬುದರತ್ತ ಈಗ ಕೋರ್ ಕಮಿಟಿಯಿಂದ ಹೊರಗೆ ಹೋಗಿರುವ ಜಿ.ಟಿ.ದೇವೇಗೌಡರ ಮುಂದಿನ ನಡೆ ಏನು ? ಎಂಬ ಬಗ್ಗೆೆ ಎಲ್ಲರ ಕಣ್ಣು ನೆಟ್ಟಿಿದೆ. ಹೆಚ್ಚು ಕಡಿಮೆ 2 ವರ್ಷಗಳಿಂದ ಜಿ.ಟಿ. ದೇವೇಗೌಡರು, ತಮಗೆ ಅರ್ಹತೆ, ಯೋಗ್ಯತೆ ಇದ್ದರೂ ವಿಧಾನಸಭೆ ವಿರೋಧ ಪಕ್ಷದ ಸ್ಥಾಾನವನ್ನು ಪಕ್ಷದಿಂದ ನೀಡಲಿಲ್ಲ. ಅದೂ ನಿಮಗೆ ನೀಡಲಾಗಿದೆ ಎಂದು ಭರವಸೆ ನೀಡಿ ನೀಡಲಿಲ್ಲ ಎಂದು ಅಸಮಾಧಾನಗೊಂಡು ಪಕ್ಷದಿಂದ ದೂರವೇ ಇದ್ದರು.
ನಂತರದಲ್ಲಿ ಗೌಡರ ಮಾತುಗಳು ಸಿದ್ದರಾಮಯ್ಯನವರ ಹಿತೈಷಿಯಂತೆ ಇದ್ದವು. ಸುರೇಶ್ಬಾಬು ಅವರನ್ನು ವಿಧಾನಸಭೆ ನಾಯಕರಾಗಿ ಮಾಡಿದ್ದರಿಂದ ಏನು ಪ್ರಯೋಜವಾಗಲಿಲ್ಲ. ಮೂಕನಾಗುವುದೇ ಲೇಸು ಎಂಬಂತೆ ವರ್ತಿಸಿದರು. ಜಿಟಿಡಿ ಮಾಡಿದ್ದರೆ ವಿಧಾನಸಭೆಯಲ್ಲಿ ಗುಡುಗುತ್ತಿಿದ್ದರು ಎಂದು ಜೆಡಿಎಸ್ನಲ್ಲಿ ಬಹಿರಂಗವಾಗಿ ಹೇಳಲಾಗುತ್ತಿಿತ್ತು.
ಆದರೆ, ಈಗ ಜಿಟಿಡಿ ಕಾಂಗ್ರೆೆಸ್ಗೆ ಸೇರುತ್ತಾಾರೋ? ಅಥವಾ ಬಿಜೆಪಿ ಸೇರುವರೇ? ಎಂಬ ಬಗ್ಗೆೆ ರಾಜಕೀಯವಲಯದಲ್ಲಿ ಚರ್ಚೆ ಆರಂಭವಾಗಿದೆ. ಕಾಂಗ್ರೆೆಸ್ ಸೇರುವುವದ್ದರೇ ಕಾಂಗ್ರೆೆಸ್ ಅಧಿಕಾರ ಬಂದಾಗಲೇ ಸೇರಬೇಕಿತ್ತು. ಈಗ ವಿರೋಧಿ ಅಲೆ ಆರಂಭವಾಗುತ್ತಿಿರುವಾಗ ಸೇರಿದರೇ ಏನು ಲ? ಎಂದು ಕೂಡ ಹೇಳಲಾಗುತ್ತಿಿದೆ.
ಸದ್ಯದ ಪರಿಸ್ಥಿಿತಿಯಲ್ಲಿ ಬಿಜೆಪಿಗೆ ಸೇರಲು ಆಗದ ಸ್ಥಿಿತಿ ಇದೆ. ಏಕೆಂದರೆ ಜೆಡಿಎಸ್, ಬಿಜೆಪಿ ಮೈತ್ರಿಿ ನೀತಿ ಕರ್ನಾಟಕದಲ್ಲಿ ಜಾರಿ ಇದೆ. ಇದು ಇಲ್ಲದಿದ್ದರೆ ಬಿಜೆಪಿಯಿಂದ ಟಿಕೆಟ್ ಪಡೆದು ಅದೇ ಚಾಮುಂಡೇಶ್ವರಿ ಕ್ಷೇತ್ರದಿಂದ ನಿಂತಿದ್ದರೇ ಅನುಕೂಲ ಆಗುತ್ತಿಿತ್ತು ಎಂಬುದನ್ನು ತಳ್ಳಿಿ ಹಾಕುವಂತೆ ಇರಲಿಲ್ಲ. ಈಗಿನ ಪರಿಸ್ಥಿಿತಿಯನ್ನು ಅವಲೋಕಿಸಿದರೆ ಸೂಕ್ತ ದಾರಿ ಜಿಟಿಡಿ ಅವರಿಗೆ ಕಾಣುತ್ತಿಿಲ್ಲ ಎಂದೇ ಹೇಳಬಹುದು.
ಅಪ್ಪನಷ್ಷೇ ಜನ ಸಂಘಟಕ :
ಶಾಸಕ ಜಿ.ಡಿ. ಹರೀಶ್ಗೌಡರು ಅಪ್ಪನಂತೆ ಸಂಘಟನಾ ಚತುರರಾಗಿ ರಾಜಕೀಯ ಕ್ಷೇತ್ರದಲ್ಲಿ ಹೊರಹೊಮ್ಮುತ್ತಿಿದ್ದಾರೆ. ಕೆಲ ತಿಂಗಳ ಹಿಂದೆ ನಡೆದ ಎಂಡಿಸಿಸಿ ಬ್ಯಾಾಂಕ್ ನಿರ್ದೇಶಕರ ಚುನಾವಣೆ ಸೇರಿದಂತೆ ಆನೇಕ ಸಹಕಾರ ಕ್ಷೇತ್ರದಲ್ಲಿ ಅದನ್ನು ಸಾಬೀತುಪಡಿಸಿದ್ದಾರೆ. ಚುನಾವಣೆಯಲ್ಲಿ ಹಾಲಿ ಶಾಸಕರಿಗೇ ತಿಣುಕಾಡುವಂತೆ ಮಾಡಿದ್ದರು.
ಏತನ್ಮಧ್ಯೆೆ, ಏನೇ ಇರಲಿ. ಯಾರೂ ಏನೇ ಹೇಳಲಿ, ಕಠಿಣ ಪರಿಸ್ಥಿಿತಿಯಲ್ಲೂ ಹೋರಾಟ ಮಾಡುವ ಛಾತಿ, ಛಲ ಜಿಟಿಡಿ ಅವರಿಗಿದೆ ಎಂಬುದರಲ್ಲಿ ಮರು ಮಾತೇ ಇಲ್ಲ. ಎಚ್.ಡಿ.ಕುಮಾರಸ್ವಾಾಮಿ ಜನರನ್ನು ಸಂಘಟಿಸುವ ಶಕ್ತಿಿವುಳ್ಳವರ ಬೆನ್ನಿಿಗೆ ನಿಲ್ಲುವುದಿಲ್ಲ. ತಮ್ಮ ಮುಂದೆ ಓಡಾಡುವ ಖಾಲಿ ಡಬ್ಬಗಳಿಗೆ ಪ್ರೋೋತ್ಸಾಾಹ ನೀಡುತ್ತಾಾರೆ. ಇಲ್ಲೇ ಪಕ್ಷ ಎಡುವುತ್ತಿಿರುವುದು ಎಂದು ಜೆಡಿಎಸ್ನ ನಿಷ್ಠಾಾವಂತ ಕಾರ್ಯಕರ್ತರು ಬಹಿರಂಗವಾಗಿಯೇ ಹೇಳುವುದುಂಟು.
2028 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಸೀಟು ಹಂಚಿಕೆ ಸರಿಯಾದರೆ ಮೈತ್ರಿಿ ಯಶಸ್ವಿಿಯತ್ತ ಎಂದು ಹೇಳುತ್ತಿಿರುವ ನಡುವೆ ಜೆಡಿಎಸ್ ಜಿಟಿಡಿಯಂತಹ ಜನನಾಯಕನನ್ನು ಕಳೆದುಕೊಂಡರೆ ಅದೇಗೆ ಸಾಧ್ಯ ? ಎಂಬ ಪ್ರಶ್ನೆೆಯೂ ಉಂಟಾಗಿದೆ.

