ಸುದ್ದಿಮೂಲ ವಾರ್ತೆ ರಾಯಚೂರು, ಅ.16:
ರಾಯಚೂರು ಜಿಲ್ಲೆಯನ್ನೇ ತನ್ನ ಕರ್ಮ ಭೂ ಮಿ ಎಂದೇಳಿಕೊಳ್ಳುವ ಸಣ್ಣ ನೀರಾವರಿ ಸಚಿವ ಎನ್.ಎಸ್ .ಬೋಸರಾಜ್ ನಗರದ ಕೃಷ್ಣಗಿರಿ ಹಿಲ್ಸ್ ಬಡಾವಣೆ ಬಳಿ ಕೆರೆ ಒತ್ತುವರಿ ಮಾಡಲಾಗಿದ್ದು ಅದನ್ನು ತೆರವು ಗೊಳಿಸಿ ಬದ್ದತೆ ತೋರಿಸಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ,ಆಶಾಪೂರು ರಸ್ತೆೆಯ ರಾಜಾಮಾತ ದೇವಸ್ಥಾಾನದಿಂದ ಒಳಗಡೆ ಇರುವ ಕೃಷ್ಣ ಗಿರಿ ಹಿಲ್ಸ್ ಬಳಿಯ ಸರ್ವೆ ನಂ.1405 ರಲ್ಲಿರುವ 20 ಎಕರೆಯ ಲ್ಲಿದ್ದ. ತುಂಬಳಕೆರೆ ಮತ್ತು ಆಲಂಕೆರೆಗಳನ್ನು ಸಿಂಧನೂರಿನ ರಾಮಕೃಷ್ಣ ಎಂಬುವವರು ಖರೀದಿಸಿ ಲೇ ಔಟ್ ಮಾಡಿದ್ದಾರೆ. ಕೆರೆ ಸ್ಥಳ ವಸತಿ ವಿನ್ಯಾಾಸವಾಗಿ ಮಾರ್ಪಡಿಸಲು ತಹಶೀಲ್ದಾಾರರು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಸಣ್ಣ ನೀರಾವರಿ ಇಲಾಖೆ ಸಚಿವರಾಗಿರುವ ಎನ್.ಎಸ್.ಬೋಸರಾಜ ಇವರು ರಾಜ್ಯದ ಎಲ್ಲಾ ಕೆರೆಗಳನ್ನು ರಕ್ಷಿಸುವುದಾಗಿ ಹೇಳುತ್ತಿಿದ್ದಾರೆ. ಆದರೆ ದಾಖಲೆಗಳಲ್ಲಿ ಕೆರೆಗಳೆಂದು ನಮೂದಿಸಿದ್ದರೂ ಖರೀದಿ ಮಾಡಿ ವಸತಿ ವಿನ್ಯಾಾಸವಾಗಿ ಮಾರ್ಪಡಿಸಿರುವುದನ್ನು ತೆರವುಗೊಳಿಸುತ್ತಾಾರೆಯೇ ಎಂದು ಪ್ರಶ್ನಿಿಸಿದರು.
ಬೇರೆ ರಾಜ್ಯದಿಂದ ವಲಸೆ ಬಂದವರು ಕೆರೆಯ ಸ್ಥಳದಲ್ಲಿ ಲೇ ಔಟ್ ಮಾಡಲು ಯಾರ ಕೃಪಾ ಕಟಾಕ್ಷವಿದೆ ಎಂದು ಬಯಲಿಗೆ ಬರಲಿ. ನಗರದ ಐತಿಹಾಸಿಕ ಮಾವಿನಕೆರೆ ಅಭಿವೃದ್ಧಿಿಗೆ ಸಣ್ಣ ನೀರಾವರಿ ಸಚಿವರು ಅಭಿವೃದ್ದಿ ಪಡಿಸುವ ಪ್ರಚಾರ ಪಡೆದರು. ಆದರೀಗ ಭೂ ಕಬಳಿಕೆದಾರರಿಗೆ ಅನುಕೂಲ ಮಾಡಲು ಸುತ್ತಲೂ ರಸ್ತೆೆ ನಿರ್ಮಾಣ ಮಾಡಲು ಹೊರಟಿದ್ದಾರೆ. 127 ಎಕರೆ ಪ್ರದೇಶದ ಮಾವಿನಕೆರೆಯಲ್ಲಿ 7.37ಗುಂಟೆ ಜಮೀನು ಒತ್ತುವರಿಯಾಗಿದೆ. 2 ಎಕರೆ 24 ಗುಂಟೆ ಸ್ಲಂ ಎಂದು ಘೋಷಿಸಿ ನೀಡಲಾಗಿದೆ. ಆದರೆ ಕೆರೆ ಸ್ಥಳಗಲ್ಲಿ ಐದಾರು ಅಂತಿಸ್ತಿಿನ ಕಟ್ಟಡಗಳು, ಮನೆಗಳು, ರಸ್ತೆೆಗಳು ತಲೆ ಎತ್ತಿಿವೆ. ಕೆರೆ ಒಳಗಡೆ ರಸ್ತೆೆ ನಿರ್ಮಾಣ ಮಾಡಿ ಮತ್ತುಷ್ಟು ಒತ್ತವರಿಗೆ ಸಹಕರಿಸಿದಂತಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಈ ಹಿಂದೆ ಸಿಯಾತಲಾಬ್ ಬಳಿ ಚಿತ್ರ ಮಂದಿರ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಅಂದಿನ ಜಿಲ್ಲಾಧಿಕಾರಿಗಳು ಅನುಮತಿ ನೀಡಲಿಲ್ಲ. ಆದರೀಗ ಅದೇ ಕಲ್ಯಾಾಣ ಮಂಟಪವಾಗಿ ಬಳಸಲಾಗುತ್ತಿಿದೆ. ಹೆದ್ದಾರಿ ರಸ್ತೆೆಗಾಗಿ ರೈತರ ಭೂಮಿ ನೋಟಿಸ್ ನೀಡದೇ ಸ್ವಾಾಧೀನ ಪಡಿಸಿಕೊಳ್ಳುವ ಜಿಲ್ಲಾಡಳಿತ ನಗರದಲ್ಲಿ ಕೆರೆಗಳನ್ನು ನಾಶ ಮಾಡಲಾಗುತ್ತಿಿದ್ದರೂ ಪ್ರಶ್ನಿಿಸುತ್ತಿಿಲ್ಲ. ಕೂಡಲೇ ಕೆರೆಗಳನ್ನು ಉಳಿಸಲು ದೂರು ನೀಡಲಾಗುತ್ತಿಿದೆ. ಯಾವುದೇ ಸ್ಪಂದನೆ ದೊರೆಯದೇ ಹೋದರೆ ನ್ಯಾಾಯಾಲಯಕ್ಕೆೆ ಮೊರೆ ಹೋಗುವುದಾಗಿ ಹೇಳಿದರು.
ಸುದ್ದಿಗೋಷ್ಟಿಿಯಲ್ಲಿ ಜೆಡಿಎಸ್ ರಾಜ್ಯ ಘಕಟದ ಉಪಾಧ್ಯಕ್ಷ ಕೆ. ಸಣ್ಣ ನರಸಿಂಹ ನಾಯಕ, ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ, ರವಿಕುಮಾರ, ರಾಜು ಸಂಗಟಿ, ನರಸಿಂಹ ಸೇರಿದಂತೆ ಇತರರಿದ್ದರು.
ಸಣ್ಣ ನೀರಾವರಿ ಸಚಿವರ ಅಧಿಕಾರವನ್ನು ಅವರ ಪುತ್ರ ರವಿ ಬೋಸರಾಜ್ ದುರುಪಯೋಗ ಪಡೆಸಿಕೊಳ್ಳುತ್ತಿಿದ್ದು ನಗರ ಶಾಸಕರೇ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ರೀ ಬೂಟ್ ಹೆಸರಲ್ಲಿ ಅಭಿವೃದ್ಧಿಿ ಪಡಿಸುವುದಾಗಿ ಪ್ರಚಾರ ಪಡೆದಿದ್ದರು ಅದು ಈಗ ಬೂಟಿನಂತಾಗಿದ. ಪುನಃ ರೈಸಿಂಗ್ ರಾಯಚೂರು ಹೆಸರಿನಲ್ಲಿ ಅಧಿಕಾರಿಗಳನ್ನು ಕರೆದುಕೊಂಡು ಸಭೆ ನಡೆಸಿದ್ದಾರೆ. ಸಭೆ ಮಾಡಲು ರವಿ ಬೋಸರಾಜ್ಗೆ ಅಧಿಕಾರ ನೀಡಿದ್ದು ಯಾರು ಎಂದು ಪ್ರಶ್ನಿಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು. ಜೆಡಿಎಸ್ ಪಕ್ಷದಿಂದಲೂ ಸಭೆ ನಡೆಸಿದರೆ ಆ ಸಭೆಗೆ ಈ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಬರುವರೆ ಎಂದರು. ನಗರದಲ್ಲಿ ಸ್ವಚ್ಚತೆ, ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರು, ರಸ್ತೆೆ ಅವ್ಯವಸ್ಥೆೆಯ ಕುರಿತು ಬಿಜೆಪಿ ಸದಸ್ಯರುಗಳೇ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಗರದ ವಿದ್ಯಾಾ ಭಾರತಿ ಶಾಲೆ ಬಳಿಯಿರುವ ಸೇತುವೆಯಲ್ಲಿ ಯಾವಾಗಲೂ ನೀರು ನಿಂತಿರುತ್ತದೆ. ಇದೇನಾ ರೈಸಿಂಗ್ ರಾಯಚೂರು ಎಂದು ಪ್ರಶ್ನಿಿಸಿದರು.
ಅಧಿಕಾರಿಗಳ ಸಭೆ ಮಾಡಲು ರವಿ ಯಾರು * ಆಗ ರಿಬೂಟ್ ಈಗ ರೈಸಿಂಗ್ ದೊಂಬ ರಾಟ ಕೆರೆ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ತೆರವು ಮಾಡುವರೆ ಬೋಸರಾಜ್ -ವಿರೂಪಾಕ್ಷಿ
