ಸುದ್ದಿಮೂಲ ವಾರ್ತೆ ಬೀದರ್, ಜ.08:
ಪಕ್ಷ, ರಾಜಕಾರಣಗಳೇನಿದ್ದರೂ ಚುನಾವಣೆಗೆ ಸೀಮಿತಗೊಳ್ಳಬೇಕು. ಅಭಿವೃದ್ಧಿಿ ವಿಷಯದಲ್ಲೂ ರಾಜಕಾರಣ ಬೆರೆತರೆ ಜನಾಕ್ರೋೋಶ ಎದುರಿಸಬೇಕಾಗುತ್ತದೆ.
ಹೌದು, ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ತಾಲೂಕಿನ ಕಮಠಾಣಾದಿಂದ ಬಾವಗಿಗೆ ಸಂಪರ್ಕ ಕಲ್ಪಿಿಸುವ ರಸ್ತೆೆ ಕಾಮಗಾರಿ ಆರಂಭವಾಗಿ ಎರಡೇ ದಿನಕ್ಕೆೆ ಸ್ಥಗಿತಗೊಂಡಿದ್ದು, ಈ ಭಾಗದ ಜನರು ಆಕ್ರೋೋಶ ವ್ಯಕ್ತಪಡಿಸುವಂತಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಸ್ಥಳೀಯ ಶಾಸಕ ಶೈಲೇಂದ್ರ ಬೆಲ್ದಾಾಳೆ ಸದರಿ ಕಾಮಗಾರಿಗೆ ಪೂಜೆ ಸಲ್ಲಿಸಿದರು. ರಸ್ತೆೆ ಡಾಂಬರೀಕರಣ ಆರಂಭಗೊಂಡಿದ್ದು, ಜನೆವರಿ 2ರಂದು ಸದರಿ ರಸ್ತೆೆ ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಶೈಲೇಂದ್ರ ಬೆಲ್ದಾಾಳೆ ವೀಕ್ಷಿಸಿದರು. ಬರುವ ಏಪ್ರೀೀಲ್ ವೇಳೆಗೆ ರಸ್ತೆೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆಯೂ ನೀಡಿದರು.
ಇದಾದ ಒಂದು ದಿನದ ಬಳಿಕ ಏಕದಂ ಕಾಮಗಾರಿ ಸ್ಥಗಿತಗೊಂಡಿದೆ. ಸದರಿ ಕಾಮಗಾರಿಯ ಗುತ್ತಿಿಗೆ ಪಡೆದ ಕೋಟ್ರಾಾಕಿ ಕಂಪೆನಿಯವರು ಕಾಮಗಾರಿ ಸಾಮಾನುಗಳ ಸಮೇತ ಎತ್ತಂಗಡಿ ಮಾಡಿದ್ದಾರೆ. ಸದ್ಯ, ರಸ್ತೆೆಯ ಅರ್ಧ ಭಾಗದಲ್ಲಿ ಅರ್ಧ ಕಿಮೀ ಮಾತ್ರ ರಸ್ತೆೆ ಪೂರ್ಣಗೊಂಡಿದೆ.
6 ಕೋಟಿ ವೆಚ್ಚದಲ್ಲಿ 8 ಕಿಮೀ ಉದ್ದದ 15 ಅಡಿ ಅಗಲ ರಸ್ತೆೆ ಕಾಮಗಾರಿ ನಡೆಯಬೇಕಿದ್ದು, ಉಳಿದ ಕಾಮಗಾರಿ ನಡೆಸದೇ ಹೀಗೆ ಅರ್ಧಕ್ಕೆೆ ಬಿಟ್ಟು ಹೋದರೆ ಯಾರಿಗೆ ಕೇಳಬೇಕು ಎಂದು ಸ್ಥಳೀಯರು ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾರೆ.
ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಯೂ ಆರಂಭವಾದ ಬಳಿಕ ಏಕೆ ಸ್ಥಗಿತಗೊಳಿಸಲಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಿಸುತ್ತಿಿದ್ದಾರೆ.
ಈ ಬಗ್ಗೆೆ ಸುದ್ದಿಮೂಲದೊಂದಿಗೆ ಮಾತನಾಡಿದ ಮುಖಂಡ ಇಮ್ಯಾಾನವಲ್ ಮಂದಕನಳ್ಳಿಿ ಸ್ಥಗಿತಗೊಂಡ ಕಮಠಾಣಾ – ಬಾವಗಿ ರಸ್ತೆೆ ಕಾಮಗಾರಿ ತಕ್ಷಣ ಆರಂಭಿಸಬೇಕು. ಗುಣಮಟ್ಟದಿಂಧ ರಸ್ತೆೆ ಡಾಂಬರೀಕರಣ ಮಾಡಬೇಕು. ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನಾ ಮೆರವಣಿಗೆ ಹಮ್ಮಿಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತಕ್ಕೆೆ ಎಚ್ಚರಿಕೆ ನೀಡಿದ್ದಾರೆ.
ಮೈ ಸಾಗರ್ ಖಂಡ್ರೆೆ ಹೂಂ…
ಸಂಸದ ಸಾಗರ್ ಖಂಡ್ರೆೆ ಸೂಚನೆ ಮೇರೆಗೆ ಕಮಠಾಣಾ-ಬಾವಗಿ ರಸ್ತೆೆ ಡಾಂಬರೀಕರಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಕಾಮಗಾರಿ ಪೂಜೆಗೆ ತಮ್ಮನ್ನು ಆಹ್ವಾಾನಿಸದೇ ಆರಂಭಿಸಿರುವ ಬಗ್ಗೆೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಖಂಡ್ರೆೆ, ತಾವು ಪೂಜೆ ಸಲ್ಲಿಸಿದ ಬಳಿಕ ಕಾಮಗಾರಿ ಆರಂಭಿಸಬೇಕು. ಅಲ್ಲಿವರೆಗೂ ಕಾಮಗಾರಿ ಸಂಪೂರ್ಣವಾಗಿ ಬಂದ್ ಮಾಡುವಂತೆ ಖಡಕ್ ಆಗಿ ಸೂಚನೆ ನೀಡಿದ್ದಾರೆ. ಹಾಗಾಗಿ, ಗುತ್ತಿಿಗೆದಾರ ಕಾಮಗಾರಿ ನಿಲ್ಲಿಸಿರುವುದಾಗಿ ತಿಳಿದು ಬಂದಿದೆ.
ಕೇಂದ್ರದ ನಿಧಿಯಿಂದ ಕಾಮಗಾರಿ ನಡೆಯುತ್ತಿಿರುವುದರಿಂದ ಸಂಸದರ ಭಾಗವಹಿಸುವಿಕೆ ಅಗತ್ಯವಿತ್ತು. ಆದರೆ, ಅಧಿಕಾರಿಗಳು ಏಕಾಏಕಿ ಕಾಮಗಾರಿ ಆರಂಭಿಸಿ ಈಗ ಸ್ಥಗಿತಗೊಳಿಸಿರುವುದು ಏಕೆ ? ಎಂಬುದೇ ಯಕ್ಷ ಪ್ರಶ್ನೆೆಯಾಗಿದೆ.
ದಕ್ಷಿಣ ಕ್ಷೇತ್ರ ರಾಜಕಾರಣಿಗಳ ಹಾಟ್ ಸೀಟ್…ಕ್ಷೇತ್ರ ಪುರ್ನ ವಿಂಗಡಣೆ ಬಳಿಕ ಮೂರು ಬಾರಿ ವಿಧಾನ ಸಭೆ ಚುನಾವಣೆಗಳು ನಡೆದಿದ್ದು, ಮೂರು ಬಾರಿ ಒಮ್ಮೆೆ ಗೆದ್ದವರು ಮತ್ತೆೆ ಗೆದ್ದಿಲ್ಲ. ಇದು ಈ ಕ್ಷೇತ್ರದ ವಿಶೇಷ. ಹಾಗಾಗಿ, ಪ್ರತಿ ಬಾರಿಯೂ ಹೊಸ ನಾಯಕರು ಪ್ರಯೋಗ ನಡೆಸುವ ಕ್ಷೇತ್ರವಾಗಿದೆ ಬೀದರ್ ದಕ್ಷಿಣ. ಜಿಲ್ಲೆಯ ಯಾವ ಕ್ಷೇತ್ರಗಳಿಗೂ ಹೆಚ್ಚು ಭೇಟಿ ಕೊಡದ ಸಂಸದ ಸಾಗರ್ ಖಂಡ್ರೆೆ ಬೀದರ್ ದಕ್ಷಿಣ ಕ್ಷೇತ್ರಕ್ಕೆೆ ವಿಶೇಷ ಒತ್ತು ಕೊಡುತ್ತಿಿದ್ದಾರಾ ? ಎಂಬ ಅನುಮಾನ ದಟ್ಟವಾಗಿದೆ. ಕೇಂದ್ರ ನಿಧಿಯಿಂದ ನಡೆಯುವ ಹಲವು ಕಾಮಗಾರಿಗಳಲ್ಲಿ ಭಾಗವಹಿಸದ ಸಂಸದ ಖಂಡ್ರೆೆ ಕಾಮಗಾರಿ ಆರಂಭವಾದ ಬಳಿಕ ಸ್ಥಗಿತಗೊಳಿಸಿರುವುದು ನೋಡಿದರೆ ರಾಜಕೀಯ ಲೆಕ್ಕಾಾಚಾರವೋ ಅಥವಾ ಬೇರೇನಾದರೂ ಉದ್ದೇಶ ಇದರ ಹಿಂದೆ ಅಡಗಿದೆಯೋ ? ಗೊತ್ತಿಿಲ್ಲ. ಒಟ್ಟಿಿನಲ್ಲಿ ಕಮಠಾಣಾ-ಬಾವಗಿ ಕಾಮಗಾರಿ ಸ್ಥಗಿತಗೊಳಿಸಿರುವುದು ಜನಾಕ್ರೋೋಶವಂತೂ ವ್ಯಕ್ತವಾಗುತ್ತಿಿದೆ.
ಅರೆಬೆತ್ತಲೆ ಮೆರವಣಿಗೆ ಮಾಡುವ ಎಚ್ಚರಿಕೆ
ಸ್ಥಗಿತಗೊಂಡಿರುವ ಕಮಠಾಣಾ-ಬಾವಗಿ ಕಾಮಗಾರಿ ತಕ್ಷಣ ಆರಂಭಿಸದಿದ್ದರೆ ಸದರಿ ರಸ್ತೆೆ ವ್ಯಾಾಪ್ತಿಿಯ 7 ಹಳ್ಳಿಿಗಳ ಜನರು ಸೇರಿಕೊಂಡು ಬಾವಗಿ ಭದ್ರೇೇಶ್ವರ ದೇವಸ್ಥಾಾನದಿಂದ ಕಮಠಾಣಾವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದು ಎಂದು ಮುಖಂಡ ಇಮ್ಯಾಾನವಲ್ ಮಂದಕನಳ್ಳಿಿ ಎಚ್ಚರಿಕೆ ನೀಡಿದ್ದಾರೆ.
ಕಳಪೆ ಕಾಮಗಾರಿ ದರ್ಶನ
ಸದ್ಯ ಆರಂಭವಾಗಿರುವ ಕಮಠಾಣಾ-ಬಾವಗಿ ರಸ್ತೆೆ ಡಾಂಬರೀಕರಣ ಕಾಮಗಾರಿ ಅರ್ಧ ಕಿಮೀ ಮುಗಿದಿದ್ದು, ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗುತ್ತಿಿದೆ ಎಂಬ ಆರೋಪ ಕೇಳಿ ಬಂದಿದೆ.
ರಸ್ತೆೆ ನಿರ್ಮಿಸಿದ ಸ್ಥಳಕ್ಕೆೆ ಇಮ್ಯಾಾನವಲ್ ಮಂದಕನಳ್ಳಿಿ ಹಾಗೂ ಇತರರು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದು, ಕಳಪೆಯಾಗಿ ನಿರ್ಮಿಸಲಾಗುತ್ತಿಿದೆ ಎಂದು ಆರೋಪಿಸಿದ್ದಾರೆ.
ತಗ್ಗು – ಗುಂಡಿ ರಸ್ತೆಯಿಂದ ಜನ ಹೈರಾಣ : ಕಮಠಾಣ -ಬಾವಗಿ ರಸ್ತೆ ಕಾಮಗಾರಿ ನಿಲ್ಲಿಸಿದ್ದು ಯಾರು?

