ಸುದ್ದಿಮೂಲವಾರ್ತೆ
ಕೊಪ್ಪಳ,ಆ.28:ನಮ್ಮ ಪಕ್ಷದಿಂದ ಯಾರು ಕಾಂಗ್ರೆಸ್ಸಿಗೆ ಹೋಗುವುದಿಲ್ಲ ಬೇಕಿದ್ದರೆ ಅವರೇ ನಮ್ಮ ಪಕ್ಷಕ್ಕೆ ಬರಲಿ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಗಾಗಿ ಆಗಮಿಸಿದಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈ ಸರಕಾರಕ್ಕೆ ಜನ ಅವಕಾಶ ನೀಡಿದ್ದಾರೆ. ಈಗಿನ ಸರಕಾರ ಐದು ವರ್ಷ ಆಡಳಿತ ನಡೆಸುತ್ತದೆ.ರಾಜ್ಯ ಸರಕಾರ ನೂರು ದಿನ ಮುಗಿಸಿದೆ.ಈ ಸರಕಾರದ ಸಾಧನೆಯನ್ನು ಜನ ಅವಲೋಕಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿನಂತೆ ಗಡಸುತನವಿಲ್ಲ ಲೋಕಸಭಾ ಚುನಾವಣೆಯ ನಂತರ ಈ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ.ರಾಜ್ಯದಲ್ಲಿ ಬರ ಆವರಿಸಿದೆ.
ಸರಕಾರ ಬರ ಎಂದು ಘೋಷಿಸಲು ಮೀನಮೇಷ ಎಣಿಸುತ್ತಿದೆ ಈ ಸರಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ.ಶಾಸಕರೇ ಮಂತ್ರಿಗಳ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದರು.
ನಮ್ಮ ಸರಕಾರದ ಅವಧಿಯಲ್ಲಿ ಯೋಜನೆಗಳ ತನಿಖೆ ಮಾಡಿಸುತ್ತಿದ್ದಾರೆ. ಮಾಡಿಸಲಿಅದೇ ರೀತಿ ಕಾಂಗ್ರೆಸ್ ಅವಧಿಯಲ್ಲಿಯ ಯೋಜನೆಗಳನ್ನು ತನಿಖೆ ಮಾಡಲಿ.ಸೇಡಿನ ರಾಜಕಾರಣ ಮಾಡಬಾರದು ಎಂದರು.
ಪ್ರೋಟೊಕಾಲ್ ಹಿನ್ನೆಲೆಯಲ್ಲಿ ನಮ್ಮ ನಾಯಕರು ಮೋದಿ ಕಾರ್ಯಕ್ರಮದಲ್ಲಿ ಬೀದಿಯಲ್ಲಿ ಇದ್ದರು.ಆದರೆ ಮೋದಿ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂದು ಕೊಂಡಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದರು.